ಎ. 11, 18 ಕುಂದಾಪುರ -ಬೈಂದೂರು ಶಾಸಕರ ಮನೆ ಚಲೋ ಹೋರಾಟ
Team Udayavani, Mar 15, 2017, 4:22 PM IST
ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕುಂದಾಪುರ ತಾಲೂಕಿನಾದ್ಯಂತ ಮನೆ ನಿವೇಶನ ಕೋರಿಕೆಯ ಸಹಸ್ರಾರು ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಿ ವರ್ಷ 3 ಕಳೆದರೂ ಸರಕಾರವಾಗಲೀ ಜನಪ್ರತಿನಿಧಿಗಳಾಗಲಿ ಈ ತನಕ ಸೂಕ್ತ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಆದ್ದರಿಂದ ಎ.11 ಹಾಗೂ ಎ.16ರಂದು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಗೋಪಾಲ ಪೂಜಾರಿ ಅವರ ಮನೆ ಚಲೋ ಹೋರಾಟ ಧರಣಿ ಮುಷ್ಕರ ಆಯೋಜಿಸಲಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡರಾದ ಪದ್ಮಾವತಿ ಶೆಟ್ಟಿ ಹೇಳಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಜರಗುವ ಭೂಮಿ ಹಕ್ಕಿನ ನಿರ್ಣಾಯಕ ಹೋರಾಟವನ್ನು ಕುಂದಾಪುರ ತಾಲೂಕಿನ ಎರಡೂ ಶಾಸಕರ ಮನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಮನೆ ನಿವೇಶನ ರಹಿತ ಅರ್ಜಿದಾರರು ಈ ನಿರ್ಣಾಯಕ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಸಮಾವೇಶದಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು.
ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಯು. ದಾಸ ಭಂಡಾರಿ, ವೆಂಕಟೇಶ ಕೋಣಿ, ನಾಗರತ್ನಾ ನಾಡ, ಲೀಲಾವತಿ, ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.