ಮಲ್ಪೆಯ ಟ್ರಾಲರ್ ಬೋಟ್ನಲ್ಲಿ ಸ್ಫೋಟ
Team Udayavani, Mar 16, 2017, 10:51 AM IST
ಕಾರವಾರ ಆಳ ಸಮುದ್ರದಲ್ಲಿ ಅವಘಡ: ಚಾಲಕ ಪಾರು
ಕಾರವಾರ: ಕಾರವಾರದ ಕಡಲಲ್ಲಿ ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ಮಲ್ಪೆಯ “ಗುರುದೇವ’ ಟ್ರಾಲರ್ ಬೋಟ್ನಲ್ಲಿ ಬುಧವಾರ ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಎಂಜಿನ್ ಭಾಗದಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಆರಿಸಲು ಹೋದ ಬೋಟ್ ಚಾಲಕ ಅಂಥೋನ್ ಜಿ. ಡಿಕೋಸ್ಟಾ (46) ಅವರ ಕೈಗೆ ಸುಟ್ಟ ಗಾಯಗಳಾಗಿವೆ.
ಹೊಗೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅವರ ರಕ್ಷಣೆಗೆ ಶ್ರೀವಾಸವ ಬೋಟ್ ಧಾವಿಸಿತ್ತು. ಕರಾವಳಿ ಕಾವಲು ಪಡೆಗೂ ಸಂದೇಶ ರವಾನೆಯಾಗಿತ್ತು. ಕಾರವಾರ ಲೈಟ್ ಹೌಸ್ ಬಳಿ ಕರಾವಳಿ ಕಾವಲು ಪಡೆಯ ಇಂಟರ್ಸೆಪ್ಟರ್ ಸಿಬಂದಿ ಧಾವಿಸಿದ್ದು, ಗುರುದೇವ ಟ್ರಾಲರ್ ಬೋಟನ್ನು ಕಾರವಾರ ವಾಣಿಜ್ಯ ಬಂದರಿಗೆ ಎಳೆದು ತಂದು, ಗಾಯಾಳು ಚಾಲಕ ಅಂಥೋನ್ ಅವರಿಗೆ 108 ವಾಹನದಲ್ಲಿ ತುರ್ತು ಚಿಕಿತ್ಸೆ ಕೊಡಿಸಿತು.
ಗುರುದೇವ ಬೋಟ್ ಉಡುಪಿಯ ಮಲ್ಪೆ ಲೋಕನಾಥ ಕೋಟ್ಯಾನ್ ಅವರಿಗೆ ಸೇರಿದೆ. ಚಾಲಕ ಅಂಥೋನ್ ಡಿಕೋಸ್ಟಾ ಭಟ್ಕಳ ಅಳ್ವೆಕೋಡಿ ನಿವಾಸಿ. ಗುರುಧಿದೇವ ಬೋಟನ್ನು ಮಲ್ಪೆಗೆ ಒಯ್ಯಲಾಗಿದೆ ಎಂದು ಕರಾವಳಿ ಕಾವಲು ಪಡೆ ಠಾಣೆಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.