ಫ್ಲೈಟ್‌ಗೆ ಶೌಚಾಲಯ “ಬ್ಲಾಕ್’!
Team Udayavani, Mar 16, 2017, 11:04 AM IST
ಮುಂಬೈ: ವಿಮಾನ ತಡ ಆಗಲು ಏನು ಕಾರಣ ಎಂದು ಕೇಳಿದರೆ, ತಾಂತ್ರಿಕ, ಹವಾಮಾನ ಇತ್ಯಾದಿ ಕಾರಣಗಳನ್ನು ಕೊಡಬಹುದು.ಆದರೆ ನಿಜಕ್ಕೂ ವಿಷಯ ಬೇರೆಯೇ ಇದೆ! ಭಾರತೀಯರು ಪ್ರಯಾಣಿಸುವ ವಿಮಾನಗಳು ಕೆಲವೊಮ್ಮೆ ತಡ ಆಗಲು ಶೌಚಾಲಯ ಸರಿಯಾಗಿ ಕೆಲಸ ಮಾಡದೇ ಇರುವುದು ಕಾರಣವಂತೆ.
ವಿಮಾನದಲ್ಲಿ ಶೌಚಾಲಯಕ್ಕೆ ತೆರಳುವ ಭಾರತೀಯರಿಗೆ ಶೌಚಾಲಯವನ್ನು ಹೇಗೆ ಬಳಸಬೇಕೆಂದೇ ಗೊತ್ತಿಲ್ಲವಂತೆ. ಅವರು ಅಲ್ಲಿನ ವ್ಯವಸ್ಥೆಯನ್ನು ಕೆಟ್ಟದ್ದಾಗಿ ಬಳಸುವುದರಿಂದ ಸಮಸ್ಯೆಯಾಗುತ್ತದಂತೆ. ಕೆಲವು ಪ್ರಯಾಣಿಕರು ಶೌಚಾಲಯದ ಕಮೋಡ್‌ಗೆ ಬಾಟಲಿ, ಟಿಶ್ಯೂ ಪೇಪರ್, ಇತರ ಬೇಡದ ವಸ್ತುಗಳನ್ನು ಹಾಕುತ್ತಾರೆ. ಇದರಿಂದ ಈಗಿನ ನಿರ್ವಾತ ತಾಂತ್ರಿಕತೆ ಹೊಂದಿದ ಅತ್ಯಾಧುನಿಕ ಶೌಚಾಲಯಗಳು ಕೂಡ ಬ್ಲಾಕ್ ಆಗುತ್ತವಂತೆ.ಅದನ್ನು ಸರಿಪಡಿಸದೇ ವಿಮಾನ ಪ್ರಯಾಣ ಮಾಡುವಂತೆ ಇರುವುದಿಲ್ಲ. ಇದನ್ನು ಸರಿಪಡಿಸುವ ಸಮಯದಲ್ಲಿ ವಿಮಾನ ತಡವಾಗುತ್ತದೆ ಎಂದು ಹೇಳಲಾಗಿದೆ. ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಶೌಚಾಲಯ ಬ್ಲಾಕ್ ಆದ ಬಗ್ಗೆ ತಿಂಗಳಿಗೆ ಸಾಮಾನ್ಯ 30ರಿಂದ 60 ದೂರುಗಳು ದಾಖಲಾಗುತ್ತವೆ. ಕಳೆದ ಶನಿವಾರ ದೆಹಲಿ-ಚಿಕಾಗೋ ವಿಮಾನ ವಿಳಂಬಕ್ಕೂ ಇದೇ ಕಾರಣವಾಗಿತ್ತು. 2016ರಲ್ಲಿ ಜೂ. 5ರಿಂದ ಆ.23ರ ವರೆಗಿನ ಅವಧಿಯಲ್ಲಿ 14 ಅಂತಾರಾಷ್ಟ್ರೀಯ ವಿಮಾನಗಳು ಟಾಯ್ಲೆಟ್ ಬ್ಲಾಕ್‌ನಿಂದಾಗಿಯೇ ವಿಳಂಬವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.