ನನಸಾಯ್ತು ಬೈಂದೂರು ತಾಲೂಕು ರಚನೆಯ ಕನಸು
Team Udayavani, Mar 16, 2017, 2:47 PM IST
ಬೈಂದೂರು: ರಾಜ್ಯ ಬಜೆಟ್‌ನಲ್ಲಿ ಬೈಂದೂರು ತಾಲೂಕು ರಚನೆ ಅಧಿಕೃತ ಘೋಷಣೆಯಾಗುವ ಮೂಲಕ ಬೈಂದೂರು ಜನತೆಯ ಬಹುವರ್ಷದ ಕನಸು ನನಸಾಗಿದೆ. ಬೈಂದೂರಿನ ವಿವಿಧ ಭಾಗಗಳಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮ ಆಚರಿಸಲಾಯಿತು.
ನಾಲ್ಕು ದಶಕದ ಹೋರಾಟ ಬೈಂದೂರು ತಾಲೂಕು ರಚನೆಯ ಹೋರಾಟ ಇಂದು ನಿನ್ನೆಯದಲ್ಲ. ನಿರಂತರವಾಗಿ ನಲವತ್ತು ವರ್ಷಗಳಿಗೂ ಅಧಿಕ ಸಮಯದಿಂದ ಇಲ್ಲಿನ ಜನತೆ ಹೋರಾಟ ನಡೆಸುತ್ತಿದ್ದಾರೆ. ನಿವೃತ್ತ ಅರಣ್ಯಾಧಿಕಾರಿ ಜಗನ್ನಾಥ ಶೆಟ್ಟಿಯವರ ನೇತೃತ್ವದಲ್ಲಿ ಬೈಂದೂರು ತಾಲೂಕು ರಚನೆ ಮತ್ತು ಅಭಿವೃದ್ಧಿ ಸಮಿತಿ ಈಗಾಗಲೇ ರಾಜ್ಯದ ಹಲವು ಮುಖ್ಯಮಂತ್ರಿಗಳಿಗೆ ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಮನವಿ ನೀಡಿದೆ ಮತ್ತು ನಿರಂತರ ಪ್ರಯತ್ನ ನಡೆಸುತ್ತಿದೆ. ಜಿಲ್ಲೆಯ ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ಸೇರಿದಂತೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಗ್ಗಳಿಕೆ ಬೈಂದೂರಿನದ್ದಾಗಿದೆ.
1984ರಿಂದ ಬೈಂದೂರು ತಾಲೂಕು ಹೋರಾಟ ಸಮಿತಿ ತಾಲೂಕು ರಚನೆಯ ಮನವಿ ನೀಡುತ್ತಿದೆ. 1987ರಲ್ಲಿ ಉಡುಪಿ ಜಿಲ್ಲೆಯ ಪುನರ್ ವಿಂಗಡನೆಯ ಸಂದರ್ಭ ಬೈಂದೂರು, ಬ್ರಹ್ಮಾವರ, ಮೂಡಬಿದಿರೆ ತಾಲೂಕು ಪ್ರಸ್ತಾವ ನಿರ್ಧರಿಸಲಾಗಿತ್ತು. ಸರಕಾರದ ಪರವಾಗಿ ತಾಲೂಕು ಸಮೀಕ್ಷೆಗೆ ನೇಮಿಸಿದ ಹುಂಡೇಕರ್ ಆಯೋಗ, ಗದ್ದಿಗೌಡರ ಆಯೋಗ ಬೈಂದೂರು ತಾಲೂಕು ರಚನೆಗೆ ಶಿಫಾರಸು ನೀಡಿದ್ದವು. ಇದರ ಪ್ರಕಾರ ಬೈಂದೂರು ಹೋಬಳಿಯಲ್ಲಿ 26 ಗ್ರಾಮ ಹಾಗೂ ವಂಡ್ಸೆ ಹೋಬಳಿಯಲ್ಲಿ 30 ಗ್ರಾಮಗಳಂತೆ ಪ್ರತ್ಯೇಕಿಸಲಾಗಿದೆ. 2012-13ರ ಬಜೆಟ್‌ನಲ್ಲಿ 43 ಹೊಸ ತಾಲೂಕು ಘೋಷಣೆ ಮಾಡಿ ಮೂಲ ಸೌಕರ್ಯ ಒದಗಿಸಲು ಭರವಸೆ ನೀಡಿದರೂ ಸಹ ಅನುಷ್ಠಾನಗೊಂಡಿರಲಿಲ್ಲ. ಹೀಗಾಗಿ ಈ ಬಾರಿ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗದೆ ಪೂರ್ಣ ಅನುದಾನ ಬಿಡುಗಡೆಗೊಳಿಸಿ ತಾಲೂಕು ರಚನೆಗೆ ಆವಶ್ಯಕವಾಗಿರುವ ಕಾಮಗಾರಿಗಳಿಗೆ ಚಾಲನೆ ದೊರಕಿಸಿಕೊಡುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ.
ಶಾಸಕರ ನಿರಂತರ ಪ್ರಯತ್ನ
ಬೈಂದೂರು ತಾಲೂಕು ರಚನೆಗಾಗಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ನಿರಂತರ ಪ್ರಯತ್ನ ನಡೆಸಿದ್ದಾರೆ. ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ತಾಲೂಕು ರಚನೆಯ ವಾಸ್ತವತೆ ಬಗ್ಗೆ ನಿರಂತರ ಮಾತುಕತೆ ನಡೆಸಿರುವ ಜತೆಗೆ ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಮಾಡುವ ಭರವಸೆ ನೀಡಿದ್ದರು.
ಈಗಾಗಲೇ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಿಶೇಷ ತಹಶೀಲ್ದಾರರ ಕಚೇರಿ, ಅಗ್ನಿಶಾಮಕ ದಳ, ಪಶು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ವಲಯ ಅರಣ್ಯಾಧಿಕಾರಿಗಳ ಕಚೇರಿ ಸೇರಿದಂತೆ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಸ್ಥಳವನ್ನು ಮೀಸಲಿರಿಸಲಾಗಿದೆ. ಉದಯವಾಣಿ ತಾಲೂಕು ರಚನೆ ಕುರಿತು ಹಲವು ಬಾರಿ ವರದಿ ಪ್ರಕಟಿಸಿರುವುದನ್ನು ನೆನಪಿಸಿ ಕೊಳ್ಳಬಹುದಾಗಿದೆ.
– ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Kundapura: ದರ್ಲೆಗುಡ್ಡೆ ಕೊರಗ ಕಾಲನಿ; ಈಗಲೇ ಕುಡಿಯುವ ನೀರಿಗೆ ತತ್ವಾರ
Karkala: ಅನಂತಶಯನ ಗುಡ್ಡೆಯಂಗಡಿ ರಸ್ತೆ ದುಃಸ್ಥಿತಿ; ಸವಾರರಿಗೆ ಪ್ರಾಣಸಂಕಟ
Kundapura: ಹೆಮ್ಮಾಡಿ; 4 ರಸ್ತೆ ಸೇರುವಲ್ಲಿ ಒಂದೂ ತಂಗುದಾಣವಿಲ್ಲ!
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5 ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.