ನಗರದ ಪತ್ರಕರ್ತ ನವೀನ್‌ ಕೆ. ಇನ್ನಗೆ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ


Team Udayavani, Mar 16, 2017, 3:41 PM IST

14-Navin-k-Inna.jpg

ಮುಂಬಯಿ: ದಿ| ರಾಜೇಶ ಶಿಬಾಜೆ ಹೆಸರಿನಲ್ಲಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಘಟಕವು ನೀಡುವ ಪ್ರತಿಷ್ಠಿತ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ನಗರದ ಪತ್ರಕರ್ತ, ಅಂಕಣಗಾರ ನವೀನ್‌ ಕೆ. ಇನ್ನ ಮತ್ತು  ಉಡುಪಿಯ ಹಿರಿಯ ಪತ್ರಕರ್ತ ಸುಭಾಶ್ಚಂದ್ರ ಎಸ್‌. ವಾಗ್ಲೆ  ಅವರು ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.

ನವೀನ್‌ ಕೆ. ಇನ್ನ: ಕಾರ್ಕಳದ ಇನ್ನ ಗ್ರಾಮದಲ್ಲಿ ಜನಿಸಿದ ನವೀನ್‌ ಕೆ. ಇನ್ನ ಅವರು ಮುಂಬಯಿಯಲ್ಲಿ ಅರಳಿದ ಪ್ರತಿಭೆ, ಮುಂಬಯಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಮುಲುಂಡ್‌ನ‌ ವಿಪಿಎಂ ಹೈಸ್ಕೂಲ್‌ ಮತ್ತು ಸಿದ್ಧಾರ್ಥ್ ಕಾಲೇಜಿನಲ್ಲಿ ಶಿಕ್ಷಣವನ್ನು ಮುಗಿಸಿದ ಅವರು 1992ರಲ್ಲಿ ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟವರು. ಕಳೆದ 25 ವರ್ಷಗಳಿಂದ ಒಂದೇ ಪತ್ರಿಕೆಯಲ್ಲಿ ಪ್ರತಿವಾರ ಕ್ರೀಡಾ ಅಂಕಣ ಬರೆಯುತ್ತಾ ಬಂದಿದ್ದಾರೆ. ವರದಿಗಾರರಾಗಿ, ಜಾಹೀರಾತುದಾರರಾಗಿ, ಸ್ವತಃಛಾಯಾಗ್ರಾಹಕರಾಗಿ ಮತ್ತು ಸಮಾಜ ಸೇವಕರಾಗಿಯೂ ನಗರದಲ್ಲಿ  ಜನಪ್ರಿಯರಾಗಿದ್ದಾರೆ. ದೈವ, ದೇವರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರು ಧಾರ್ಮಿಕ ಕ್ಷೇತ್ರಗಳ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಕ್ರೀಡೆ ಅವರಿಗೆ ಪ್ರಿಯವಾದ ವಿಷಯವಾಗಿದ್ದು, 2003 ರಿಂದ ಬಿಲ್ಲವರ ಅಸೋಸಿಯೇಶನ್‌ ಮುಖವಾಣಿ ಅಕ್ಷಯ ಮಾಸಿಕದಲ್ಲಿಯೂ ಕ್ರೀಡೆಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದಾರೆ. ಅವರ ಸಿದ್ಧಿ-ಸಾಧನೆಗಳನ್ನು ಗಮನಿಸಿ ಹಲವಾರು ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿವೆ.

ದಯಾನಂದ ಪೈ  ಕುಂಟಾಡಿ ಅವರಿಂದ ಆರಂಭಿಸಿ ಸತತವಾಗಿ ಈ ಗೌರವವನ್ನು ಮೊದಲು ಯುವ ಪ್ರತಿಭಾ ವೇದಿಕೆ ಮೂಲಕ ಮತ್ತು ಈಗ ಪತ್ರಕರ್ತರ ವೇದಿಕೆ ಮೂಲಕ  ನೀಡಲಾಗುತ್ತಿದೆ. ಪಾಲಾಕ್ಷ ಸುವರ್ಣ ಬೆಳ್ತಂಗಡಿ, ಜಾನ್‌ ಡಿಸೋಜಾ ಕುಂದಾಪುರ, ಸುಕುಮಾರ ಮುನಿಯಾಲ್‌, ಯು. ಎಸ್‌. ಶೆಣೈ, ವಿಲಾಸ್‌ ಕುಮಾರ್‌ ನಿಟ್ಟೆ, ಧನಂಜಯ ಗುರುಪುರ, ಚಂದ್ರ ಕೆ. ಹೆಮ್ಮಾಡಿ ಮೊದಲಾದವರಿಗೆ ಈ ಹಿಂದೆ ರಾಜೇಶ ಶಿಬಾಜೆ ಮಾಧ್ಯಮ ಗೌರವ ನೀಡಲಾಗಿದೆ.

ಟಾಪ್ ನ್ಯೂಸ್

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Court-Symbol

Gangolli: ಪಿಸ್ತೂಲ್‌ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು

MAHE-13

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌

udupi-lawrence

Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್‌ ಸಿ. ಡಿ’ಸೋಜಾ ಇನ್ನಿಲ್ಲ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Centralized system to solve pension disbursement problem soon: Minister

Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ

Bhagat Singh Extremist: Pakistan Report to Court

Lahore; ಭಗತ್‌ ಸಿಂಗ್‌ ಉಗ್ರವಾದಿ: ಕೋರ್ಟ್‌ಗೆ ಪಾಕ್‌ ವರದಿ

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Court-Symbol

Gangolli: ಪಿಸ್ತೂಲ್‌ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು

MAHE-13

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.