ಉ.ಪ್ರ. ಉನ್ನತ ಸರಕಾರಿ ಅಧಿಕಾರಿಗೆ ಅಜಂ ಖಾನ್ ಧಮ್ಕಿ; ವೈರಲ್ ವಿಡಿಯೋ
Team Udayavani, Mar 16, 2017, 4:16 PM IST
ಲಕ್ನೋ : ತನ್ನ ಚುನಾವಣಾ ಗೆಲುವಿನ ಸರ್ಟಿಫಿಕೇಟ್ ಪಡೆಯಲು ಇಲ್ಲಿನ ಮಂಡಿ ಪರಿಷತ್ನಲ್ಲಿರುವ ಸ್ಥಳೀಯ ಚುನಾವಣಾ ಮಂಡಳಿ ಕಾರ್ಯಾಲಯಕ್ಕೆ ತನಗೆ ಪ್ರವೇಶಾನುಮತಿ ನಿರಕಾರಿಸಿದ ರಾಮಪುರ ಉಪ ವಿಭಾಗೀಯ ಮ್ಯಾಜಿಸ್ಟ್ರೇಟರನ್ನು ಸಮಾಜವಾದಿ ಪಕ್ಷದ ನಾಯಕ ಹಾಗೂ ಅಖೀಲೇಶ್ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಅಜಂ ಖಾನ್ ಅವರು ಬಹಿರಂಗವಾಗಿ ದಬಾಯಿಸಿ, ವರ್ಗಾವಣೆಯ ಬೆದರಿಕೆ ಒಡ್ಡಿ, ದುರ್ವರ್ತನೆ ತೋರಿದ ಪ್ರಕರಣದ ವಿಡಿಯೋ ಚಿತ್ರಿಕೆ ಈಗ ವೈರಲ್ ಆಗಿದೆ.
“ನನ್ನ ಚುನಾವಣಾ ಸರ್ಟಿಫಿಕೇಟನ್ನು ನಾನು ಅನಂತರ ಕೂಡ ಪಡೆಯಬಹುದು; ಆದರೆ ನಿಮ್ಮನ್ನು ನಾನಿಲ್ಲಿ ವರ್ಗ ಮಾಡಿಸಿಕೊಂಡದ್ದು ಇದಕ್ಕೇ ಏನು ? ಹುಷಾರ್, ನಿಮ್ಮನ್ನು ನಾನು ಈಗಲೂ ಇಲ್ಲಿಂದ ಬೇರೆಡೆಗೆ ವರ್ಗಾಯಿಸಬಲ್ಲೆ’ ಎಂದು ಅಜಂ ಖಾನ್ ಗುಡುಗಿದ ವಿಡಿಯೋ ಸಾರ್ವತ್ರಿಕ ಟೀಕೆ, ಖಂಡನೆಗೆ ಗುರಿಯಾಗಿದೆ.
ಸಮಾಜವಾದಿ ಪಕ್ಷದ ವಕ್ತಾರ ದೀಪಕ್ ಮಿಶ್ರಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಅಜಂ ಖಾನ್ ಅವರಂತಹ ನಾಯಕರ ದುರ್ವರ್ತನೆಯಂದಲೇ ಸಮಾಜವಾದಿ ಪಕ್ಷಕ್ಕೆ ರಾಜ್ಯದಲ್ಲೀಗ ಈ ಗತಿ ಬಂದಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಅಮರ್ ಸಿಂಗ್ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು, ಉನ್ನತ ಮಟ್ಟ ಸರಕಾರಿ ಅಧಿಕಾರಿಯೊಂದಿಗೆ ಅಜಂ ಖಾನ್ ತೋರಿರುವ ದುರ್ವರ್ತನೆಯನ್ನು ಖಂಡಿಸಿದ್ದಾರೆ.
ಬಿಜೆಪಿ ನಾಯಕ ವಿಜಯ್ ಬಹಾದ್ದೂರ್ ಪಾಠಕ್ ಅವರು “ಅಜಂ ಖಾನ್ ಅವರಂತಹ ಎಸ್ಪಿ ನಾಯಕರು ತಾವೀಗ ಅಧಿಕಾರದಲ್ಲಿ ಇಲ್ಲ ಎಂಬುದನ್ನು ಇನ್ನೂ ಅರಿತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.