ಎ.3ರಿಂದ ಎಚ್‌1- ಬಿ ವೀಸಾಕ್ಕೆ ಅರ್ಜಿ


Team Udayavani, Mar 17, 2017, 8:05 AM IST

17-NATIONAL-1.jpg

ವಾಷಿಂಗ್ಟನ್‌: ಎಚ್‌1-ಬಿ ವೀಸಾಗಳ ನಿಯಂತ್ರಣಕ್ಕೆ ಅಮೆರಿಕ ಸಂಸತ್‌ನಲ್ಲಿ ಆರು ಮಸೂದೆಗಳು ಮಂಡನೆಯಾಗಿರುವಂತೆಯೇ 2018ನೇ ಸಾಲಿಗೆ ವೀಸಾ ನೀಡಲು ಡೊನಾಲ್ಡ್‌ ಟ್ರಂಪ್‌ ಸರಕಾರ ಮುಂದಾಗಿದೆ. ಅದಕ್ಕೆ ಪೂರಕವಾಗಿ ಎ.3ರಿಂದ ವೀಸಾ ನೀಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಎಚ್‌1-ಬಿ ವೀಸಾ ಅರ್ಜಿಗಳನ್ನು ವಾರದ 5 ದಿನಗಳ ಕಚೇರಿ ಅವಧಿಯಲ್ಲಿ ಸ್ವೀಕರಿಸಲಾಗುತ್ತದೆ. “ಕೆಲ ದಿನಗಳ ಹಿಂದಷ್ಟೇ ಸರಕಾರ ಇನ್ನು 6 ತಿಂಗಳು ಯಾವುದೇ ಎಚ್‌1-ಬಿ ವೀಸಾ ಅರ್ಜಿ ಸ್ವೀಕರಿಸುವುದಿಲ್ಲ. ಸಾಕಷ್ಟು ಅರ್ಜಿಗಳಿಗೆ ಈಗಾಗಲೇ ವೀಸಾ ವಿಲೇವಾರಿ ಆಗಿಲ್ಲ’ ಎಂದು ಹೇಳಿತ್ತಾದರೂ ಅಮೆರಿಕ ದಿಢೀರ್‌ ಈ ನಿರ್ಧಾರ ಘೋಷಿಸಿದೆ. ಒಟ್ಟು 85 ಸಾವಿರ ಅರ್ಜಿ ಸ್ವೀಕಾರಕ್ಕೆ ನಿರ್ಧರಿಸಲಾಗಿದೆ.

ಸಾಮಾನ್ಯ ಶ್ರೇಣಿಯಲ್ಲಿ 65 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಮೆರಿಕ ವಿವಿಗಳಿಗೆ ವ್ಯಾಸಂಗಕ್ಕೆ ಆಗಮಿಸುವವರಿಗೆ 20 ಸಾವಿರ ಎಚ್‌1-ಬಿ ವೀಸಾ ಮೀಸಲಿರಿಸಲಾಗಿದೆ. ಆದರೆ, ಸಂಶೋಧನೆ ಕೈಗೊಳ್ಳಲು ಬರುವ ವಿದೇಶಿಗರಿಗೆ ಈ ಬಾರಿ ಎಚ್‌1- ಬಿ ವೀಸಾ ಅರ್ಜಿ ನೀಡಲಾಗುವುದಿಲ್ಲ. 6 ತಿಂಗಳು ಅರ್ಜಿ ಸ್ವೀಕಾರ ನಡೆಯಲಿದೆ.

ಪರಿಷ್ಕೃತ ನೀತಿಗೂ ಕಾನೂನು ಅಡ್ಡಿ!
ಇರಾಕ್‌ ಅನ್ನು ಕೈಬಿಟ್ಟು 6 ಮುಸ್ಲಿಂ ರಾಷ್ಟ್ರಗಳ ಮೇಲೆ ಪರಿಷ್ಕೃತ ತಾತ್ಕಾಲಿಕ ವಲಸೆ ನಿರ್ಬಂಧ ನೀತಿಗೆ ಸಹಿ ಹಾಕಿದ್ದ ಡೊನಾಲ್ಡ್‌ ಟ್ರಂಪ್‌ಗೆ ಮತ್ತೆ ಹಿನ್ನಡೆಯಾಗಿದೆ. ಕಳೆದ ವಾರವಷ್ಟೇ ಈ ಕಾಯ್ದೆ ಜಾರಿಯಾಗಿತ್ತಾದರೂ ಈಗ ಇದಕ್ಕೆ ಹವಾಯಿಯ ಫೆಡರಲ್‌ ಜಡ್ಜ್ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಖಂಡಿಸಿರುವ ಫೆಡರಲ್‌ ಜಡ್ಜ್ ಡೆರ್ರಿಕ್‌ ವ್ಯಾಟ್ಸನ್‌, ನಿರ್ಬಂಧ ಹೇರಲಾಗಿರುವ ಎಲ್ಲ ದೇಶಗಳಲ್ಲೂ ಶೇ.90ಕ್ಕಿಂತ ಅಧಿಕ ಮುಸ್ಲಿಮರೇ ಇದ್ದಾರೆ. ಇದರಿಂದ ಅಮೆರಿಕ ಇಸ್ಲಾಂ ವಿರೋಧಿ ಎಂದು ಕರೆಯಿಸಿಕೊಳ್ಳುತ್ತದೆ’ ಎಂದಿದ್ದಾರೆ.

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.