ಕಾಪು ತಾಲೂಕು ರಚನೆ ಚರಿತ್ರಾರ್ಹ: ಡಾ| ದೇವಿಪ್ರಸಾದ್‌ ಶೆಟ್ಟಿ


Team Udayavani, Mar 17, 2017, 11:36 AM IST

deve-17.jpg

ಕಾಪು: ತಾಲೂಕು ಕೇಂದ್ರವಾಗಿ ಕಾಪುವನ್ನು ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವುದು ಚರಿತ್ರಾರ್ಹ ನಿರ್ಧಾರ. ಕಾಪು ಹಿಂದಿನಿಂದಲೂ ತನ್ನ ಐತಿಹಾಸಿಕತೆಯಿಂದಲೂ ಅನಿವಾಸಿ ಭಾರತೀಯರಿಂದಾಗಿಯೂ ಪ್ರಸಿದ್ಧಿ ಹೊಂದಿದೆ ಹಾಗೂ ವಿಧಾನಸಭಾ ಕ್ಷೇತ್ರವಾಗಿ ಕೇಂದ್ರಸ್ಥಾನದಲ್ಲಿ ಗುರುತಿಸಲ್ಪಟ್ಟಿತ್ತು. ಕಾಪು ಶಾಸಕ ವಿನಯಕುಮಾರ್‌ ಸೊರಕೆ ಶ್ರಮದಿಂದ ಇದೀಗ ಕಾಪು ತಾಲೂಕು ರಚನೆ ಸಾಧ್ಯವಾಗಿದೆ ಎಂದು ಪಂಚಾಯತ್‌ ಸದಸ್ಯರ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ.

ತಾಲೂಕು ರಚನೆಗಾಗಿ ಕಾಪು ಶಾಸಕ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಹೋರಾಟ ಸಮಿತಿ ರಚನೆಯಾದಾಗ ಬೆಂಬಲಿಸಿದ್ದ ವಿಪಕ್ಷದಮಂದಿ ಮುಂದೆ ಹೋರಾಟ ತೀವ್ರಗೊಂಡಾಗ ರಾಜಕೀಯ ಕಾರಣಗಳಿಂದ ದೂರ ಉಳಿದಿದ್ದರು. ಇದೀಗ ಕಾಪು ತಾಲೂಕು ಘೋಷಣೆಯಾಗಿರುವುದು ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದೆ ಎಂದು ಡಾ| ಶೆಟ್ಟಿ ಹೇಳಿದರು.

ತಾಲೂಕು ರಚನೆಯಿಂದ 19 ಗ್ರಾ.ಪಂ.ವ್ಯಾಪ್ತಿ 1.36 ಲಕ್ಷ ಜನರು ಕಾಪು ತಾಲೂಕುವ್ಯಾಪ್ತಿಗೆ ಬರುತ್ತಿದ್ದು, ಆಡಳಿತ ವಿಕೇಂದ್ರೀ ಕರಣವಾಗಿ ಜನತೆಗೆ ಕೈಗೆಟುಕುವಷ್ಟರಲ್ಲಿ ಸರಕಾರಿಸೌಲಭ್ಯಗಳು ನಿಲುಕಲಿವೆ. 33 ಸರಕಾರಿ ಅಧೀನ ಕಚೇರಿಗಳು, ತಾಲೂಕು ಆರೋಗ್ಯಕೇಂದ್ರ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ನ್ಯಾಯ ಸಂಕೀರ್ಣವೂ ಕಾಪುವಿಗೆ ಆಗಮಿಸಲಿದ್ದು, ಇದರಿಂದ ಸಹಾಯ ವಾಗಲಿದೆ ಎಂದು ಡಾ| ಶೆಟ್ಟಿ ಹೇಳಿದರು.
 
ಜನತೆಯ ಮೂಲ ಆಶಯದತೆ ಐತಿಹಾಸಿಕ ಕಾಪು ಪಟ್ಟಣ ಐಎಸ್‌ಪಿಆರ್‌ಎಲ್‌, ಯುಪಿಸಿ ಎಲ್‌, ಸುಜ್ಲಾನ್‌ನಂತಹ ಬೃಹತ್‌ ಕೈಗಾರಿಕೆಗಳಿಂದ, ಕಾಪು ದ್ವೀಪಸ್ತಂಭ, ಪಡುಬಿದ್ರಿ ಬೀಚ್‌ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಂದ ಪ್ರವಾಸೋದ್ಯಮ ನಿಟ್ಟಿನಲ್ಲಿಯೂ ಮಂಗಳೂರು ವಿ.ವಿ. ವಿಜ್ಞಾನ ಕೇಂದ್ರ ಸ್ಥಾಪನೆ, ಐಟಿಐ ಸ್ಥಾಪನೆಯಿಂದ ಶೈಕ್ಷಣಿಕ ಕೇಂದ್ರವಾಗಿಯೂ ಮಾರ್ಪಟಾಗಿದ್ದು, ಈಗಾಗಲೇ ಕೇಂದ್ರ ಸ್ಥಾನವಾಗಿ ಗುರುತಿಸಲ್ಪಟ್ಟಿದೆ. ತಾನು ಶಾಸಕನಾಗಿ ಆಯ್ಕೆಯಾದ ಬಳಿಕದ ಪ್ರಥಮ ಸಭೆಯಲ್ಲೇ ಕಾಪುವನ್ನು ಪುರಸಭೆ, ಕಾಪು ತಾಲೂಕು ಕೇಂದ್ರವನ್ನಾಗಿಸುವ ಪಣತೊಟ್ಟ ಸೊರಕೆ ಅವರು ನುಡಿದಂತೆ ನಡೆದು ತೋರಿಸಿದ ಧೀಮಂತ ರಾಜಕಾರಣಿ ಎಂದೂ ಡಾ| ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ. 

ಟಾಪ್ ನ್ಯೂಸ್

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

10

Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್‌ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

9

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

8

Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.