ಮತ ಬೇಟೆಗೆ ಮುಖಂಡರ ಸೆಳೆಯಲು ಕಸರತ್ತು


Team Udayavani, Mar 17, 2017, 12:27 PM IST

mys3.jpg

ಮೈಸೂರು: ಭೀಕರ ಬರ ಪರಿಸ್ಥಿತಿ ಹಾಗೂ ಬೇಸಿಗೆ ಬಿಸಿಲಿನ ಪ್ರಖರತೆ ನಡುವೆ ಎದುರಾಗಿರುವ ನಂಜನಗೂಡು ಉಪ ಚುನಾವಣೆ ಮೆಲ್ಲನೆ ಕಾವು ಪಡೆದುಕೊಳ್ಳುತ್ತಿದೆ. ಈ ಉಪ ಚುನಾವಣೆಯಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಹಾಕದಿರಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಇಲ್ಲಿ ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಹಾಗೂ ಕಾಂಗ್ರೆಸ್‌ನ ಕಳಲೆ ಎನ್‌. ಕೇಶವಮೂರ್ತಿ ಅವರ ನಡುವೆ ನೇರ ಹಣಾಹಣಿ ನಡೆಯಲಿದ್ದು,

ಉಳಿದಂತೆ ಬಿಎಸ್ಪಿ, ಆರ್‌ಪಿಐ ಮತ್ತಿತರೆ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಒಂದಷ್ಟು ಜನ ಪಕ್ಷೇತರರೂ ಉಪ ಚುನಾವಣೆಯ ಸ್ಪರ್ಧೆಬಯಸಿ ಅರ್ಜಿ ಹಾಕುವ ಸಾಧ್ಯತೆ ಇದೆ. ಚುನಾವಣೆ ಅಧಿಸೂಚನೆ ಹೊರಡಿಸುವುದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ಮೂರು ದಿನಗಳ ಕಳೆದರೂ ಇದುವರೆಗೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಬದಲಿಗೆ ತಮ್ಮ ಬೆಂಬಲಿಗರ ಮೂಲಕ ಚುನಾವಣಾಧಿಕಾರಿಗಳ ಕಚೇರಿಯಿಂದ ಸುಮಾರು 10 ಮಂದಿ ನಾಮಪತ್ರದ ನಮೂನೆಯನ್ನು ತರಿಸಿಕೊಂಡಿದ್ದಾರೆ. 

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಬಿಜೆಪಿಗೆ: ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಅವರೊಂದಿಗೆ ನಂಜನಗೂಡು ಹಾಗೂ ಹುಲ್ಲಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳು ಬಿಜೆಪಿ ಸೇರಿದ್ದರಿಂದ ಈ ಎರಡೂ ಸ್ಥಾನಗಳು ಖಾಲಿಯಿದ್ದು, ತಗಡೂರು ಬ್ಲಾಕ್‌ನಲ್ಲಿ ಮಾತ್ರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡಿ ಶ್ರೀನಿವಾಸಪ್ರಸಾದ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಚುನಾವಣೆ ಎದುರಿ ಸುತ್ತಿರು ವುದರಿಂದ ಎರಡೂ ಪಕ್ಷಗಳಿಗೆ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರಕ್ಕೆ ಹೊಂದಿಕೊಂಡಿರುವ ನಂಜನಗೂಡು ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದರೆ, ಮುಖ್ಯಮಂತ್ರಿ ವಿರುದ್ಧ ತೊಡೆತಟ್ಟಿರುವ ಶ್ರೀನಿವಾಸಪ್ರಸಾದ್‌ ಅವರಿಗೂ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಹೀಗಾಗಿಯೇ ಮುಖ್ಯ ಮಂತ್ರಿಯವರು ನಂಜನಗೂಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿಯನ್ನು ತಮ್ಮ ಪರಮಾಪ್ತರಾದ ಲೋಕೋಪ ಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪಹಾಗೂ ಸಂಸದ ಆರ್‌. ಧ್ರುವನಾರಾಯಣ ಅವರಿಗೆ ವಹಿಸಿದ್ದಾರೆ. ಇತ್ತ ಶ್ರೀನಿವಾಸಪ್ರಸಾದ್‌ ಜೊತೆಗೆ ಬಿಜೆಪಿ ಸ್ಥಳೀಯ ಮುಖಂಡರು ಉತ್ಸಾಹದಿಂದ ಓಡಾಡುತ್ತಿದ್ದಾರೆ.

ಮತಬೇಟೆ: ಕಾಂಗ್ರೆಸ್‌ ಪರ ಸ್ವತಃ ಮುಖ್ಯಮಂತ್ರಿಯೇ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಉತ್ಸಾಹ ತುಂಬಿ ಹೋಗಿದ್ದರೆ, ಬಿಜೆಪಿ ಪರ ಎರಡು ದಿನಗಳ ಕಾಲ ಪಕ್ಷದ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರತಿ ಗ್ರಾಮಪಂಚಾಯ್ತಿ ಕೇಂದ್ರದ ಹಳ್ಳಿಗಳಿಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಹುರುಪು ತುಂಬಿ ಹೋಗಿದ್ದಾರೆ. ಮಾಜಿ ಸಚಿವರಾದ ರಾಮದಾಸ್‌, ವಿ.ಸೋಮಣ್ಣ ಹಳ್ಳಿ ಹಳ್ಳಿ ಸುತ್ತಿ ಮತಬೇಟೆಯಲ್ಲಿ ತೊಡಗಿದ್ದಾರೆ. ನಂಜನಗೂಡು ಪಟ್ಟಣದಲ್ಲಿ ಬಿಜೆಪಿ ಚುನಾವಣಾ ಕಚೇರಿ ತೆರೆದಿದ್ದರೆ, ಕಾಂಗ್ರೆಸ್‌ಗೆ ಸದ್ಯ ಕಳಲೆ ಕೇಶವಮೂರ್ತಿ ಮನೆ ಚುನಾವಣಾ ಕಚೇರಿಯಾಗಿದೆ.

ಇನ್ನೂ ಕಾವೇರಿಲ್ಲ: ಎಲ್ಲರ ಗಮನ ನಂಜನಗೂಡು ಕ್ಷೇತ್ರದ ಮೇಲಿದೆ. ಆದರೆ, ಇಲ್ಲಿ ಇನ್ನೂ ಅಂತಾ ಪ್ರಚಾರ ಶುರುವಾಗಿಲ್ಲ ಎನ್ನುತ್ತಾರೆ ಕ್ಷೇತ್ರ ವ್ಯಾಪ್ತಿಯ ಬದನವಾಳು ಗ್ರಾಪಂ ಅಧ್ಯಕ್ಷ ಬಿ.ಎಂ.ಮಹೇಶ, “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಕಸಬಾ ಹೋಬಳಿಯ ಬದನವಾಳು, ಚಿನ್ನದಗುಡಿ ಹುಂಡಿ, ವೀರೇಗೌಡನ ಹುಂಡಿ ಹಾಗೂ ಮಹದೇವು ನಗರ ಬಡಾವಣೆ ಒಳಗೊಂಡ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ದಲಿತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಕುರುಬರು, ದಲಿತರು, ಗಾಣಿಗರು, ಅಲ್ಪ ಸಂಖ್ಯಾತರು ಸೇರಿದಂತೆ ಸಣ್ಣಪುಟ್ಟ ಸಮುದಾಯಗಳ ಸುಮಾರು 5 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.

ಈ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳ ಪಕ್ಷ ಬದಲಾಗಿರುವುದರಿಂದ ಸ್ಥಳೀಯವಾಗಿ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಕೆಯಾದ ಬಳಿಕ ಚುನಾವಣೆ ಕಾವೇರಲಿದೆ ಎನ್ನುತ್ತಾರೆ. ಕಳಲೆ ಪಂಚಾಯ್ತಿ ಸದಸ್ಯ ಕುಮಾರ ಮಾತನಾಡಿ, ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಯಕರು, ದಲಿತರು, ಕುರುಬರು ಹಾಗೂ ತೆಲಗುಶೆಟ್ಟಿ ಜನಾಂಗ ಸೇರಿದಂತೆ 7 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಗುರುವಾರ ಕಳಲೆ ಲಕ್ಷ್ಮೀಕಾಂತ ದೇವರ ಜಾತ್ರೆಯಲ್ಲಿ ಸಂಸದ ಧ್ರುವನಾರಾಯಣ ಹಾಗೂ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಭಾಗಿಯಾಗಿದ್ದರು.

ಹೆಡಿಯಾಲ ಪಂಚಾಯ್ತಿ ವ್ಯಾಪ್ತಿಯ 9 ಬೂತ್‌ಗಳಲ್ಲಿ ಮುಸ್ಲಿಮರು, ದಲಿತರು, ಪರಿಶಿಷ್ಟ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎರಡು ದಿನಗಳ ಹಿಂದೆ ಇಲ್ಲಿನ ಕಂತೆ ಮಾದಪ್ಪನ ಬೆಟ್ಟದಲ್ಲಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸುನೀಲ್‌ ಬೋಸ್‌, ಕಳಲೆ ಕೇಶವಮೂರ್ತಿ ಮೊದಲಾದವರು ಪಾಲ್ಗೊಂಡು ವಿಶೇಷಪೂಜೆ ಸಲ್ಲಿಸಿಹೋಗಿದ್ದಾರೆ. ಇನ್ನು ಸ್ಥಳೀಯ ಮುಖಂಡರ‌ನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದ್ದು, ಬಹಿರಂಗ ಪ್ರಚಾರ ಆರಂಭವಾಗಿಲ್ಲ ಎನ್ನುತ್ತಾರೆ ಹೆಡಿಯಾಲ ಪಂಚಾಯ್ತಿ ಸದಸ್ಯ ಗೋವಿಂದರಾಜು.

* ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

SERBIA

Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

Bowler-Siraj

IPL Auction: ಗುಜರಾತ್‌ ಟೈಟಾನ್ಸ್‌ ಪಾಲಾದ ಸಿರಾಜ್‌; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ

sambit-patra

EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

SERBIA

Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ

court

Kasaragod: 300 ಪವನ್‌ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.