14 ಕೋಟಿ ರೂ. ಪರಿಹಾರ: ಸಿಜೆಐ, ನ್ಯಾಯಮೂರ್ತಿಗಳಿಗೆ ಕರ್ಣನ್ ಆಗ್ರಹ
Team Udayavani, Mar 17, 2017, 12:30 PM IST
ಹೊಸದಿಲ್ಲಿ : “ನನ್ನನ್ನು ಬಹಿರಂಗವಾಗಿ ಅವಮಾನಿಸಿರುವುದಕ್ಕೆ ಮತ್ತು ಮಾನಸಿಕ ಕ್ಷೋಭೆಯನ್ನು ಉಂಟು ಮಾಡಿರುವುದಕ್ಕೆ 14 ಕೋಟಿ ರೂ.ಗಳ ಪರಿಹಾರ ನೀಡಬೇಕು’ ಎಂದು ಕಲ್ಕತಾ ಹೈಕೋರ್ಟಿನ ನ್ಯಾಯಾಧೀಶ, ಚೀಫ್ ಜಸ್ಟಿಸ್ ಸಿ ಎಸ್ ಕರ್ಣನ್ ಅವರು ದೇಶದ ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ಮತ್ತು ಸುಪ್ರೀಂ ಕೋರ್ಟಿನ ಇತರ ಸಾಂವಿಧಾನಿಕ ಪೀಠದ ನ್ಯಾಯಾಧೀಶರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ನಡುವೆ ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್, ನ್ಯಾಯಾಲಯ ನಿಂದನೆಗಾಗಿ, ಕಳೆದ ವಾರ ಜಾರಿ ಮಾಡಿದ್ದ ಜಾಮೀನು ಪಡೆಯಬಹುದಾದ, ವಾರೆಂಟ್ ಅನ್ನು ಅವರಿಗೆ ತಲುಪಿಸಲು ಪಶ್ಚಿಮ ಬಂಗಾಲದ ಡಿಜಿಪಿ ಮತ್ತು ಕೋಲ್ಕತ ಪೊಲೀಸ್ ಕಮಿಷನರ್ ಅವರು ಕರ್ಣನ್ ಅವರ ನಿವಾಸಕ್ಕೆ ಹೋಗಿದ್ದಾರೆ.
ಜಸ್ಟಿಸ್ ಕರ್ಣನ್ ಅವರು ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಬೇಕೆಂದು ಆದೇಶಿಸುವ ಸಮನ್ಸ್ ಧಿಕ್ಕರಿಸಿದ್ದು ಮಾತ್ರವಲ್ಲದೆ ಸುಪ್ರೀಂ ಕೋರ್ಟಿನ ಎಲ್ಲ 7 ಮಂದಿ ಸಂವಿಧಾನ ಪೀಠದ ನ್ಯಾಯಾಧೀಶರ ವಿರುದ್ಧ ಸಿಬಿಐ ತನಿಖೆಯನ್ನು ಆದೇಶಿಸಿದ್ದರು.
ಸುಪ್ರೀಂ ಕೋರ್ಟ್ ಸಮನ್ಸ್ ಪ್ರಕಾರ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗದಿದ್ದ ಜಸ್ಟಿಸ್ ಕರ್ಣನ್ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಜಾಮೀನು ಪಡೆಯಬಹುದಾದ ವಾರಂಟನ್ನು ಕಳೆದ ವಾರ ಜಾರಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.