ಶಾಂತಿ ಕದಡುವವರ ಮೇಲೆ ಕಣ್ಣಿಡಲಿದೆ ಡ್ರೋಣ್: ರಾಣೆ
Team Udayavani, Mar 17, 2017, 1:18 PM IST
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಕೆಲವೇ ದಿನಗಳಲ್ಲಿ ಶಸ್ತ್ರಸಜ್ಜಿತವಾದ ಮಾನವ ರಹಿತ ಅಂತರಿಕ್ಷ ವಾಹನ “ದ್ರೋಣ್’ ಹೊಂದಲಿದೆ. ಕಮೀಷನರೇಟ್ ಘಟಕ ಅವಳಿ ನಗರದಲ್ಲಿ ಮಾನವ ರಹಿತ ವಾಹನ ಪರಿಚಯಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಇದಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಅನುಮೋದನೆ ಅಗತ್ಯವಿದ್ದು, ಅದು ದೊರೆತಿದೆ. ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ “ಉದಯವಾಣಿ’ಯೊಂದಿಗೆ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಮಯದಲ್ಲಿ ದ್ರೋಣ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಇದು 100ರಿಂದ 200 ಅಡಿ ಎತ್ತರದಿಂದ ಹೈರೆಸಲ್ಯೂಷನ್ ಚಿತ್ರಗಳನ್ನು ಸೆರೆ ಹಿಡಿಯಬಲ್ಲದು. ದ್ರೋಣ್ ಸಾಮೂಹಿಕ ಮೆರವಣಿಗೆ, ಪ್ರತಿಭಟನೆ, ಪ್ರಮುಖ ಹಬ್ಬ-ಹರಿದಿನಗಳ ಆಚರಣೆ ಸಂದರ್ಭದಲ್ಲಿ ಸಹಾಯಕವಾಗುತ್ತದೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಸಾಮಾಜಿಕ ವಿರೋಧಿ ಚಟುವಟಿಕೆಗಳಂತಹ ಅಂಶಗಳ ಮೇಲೆ ಕಣ್ಣಿಡಲು ಸೂಕ್ತವಾಗುತ್ತದೆ. ದ್ರೋಣ್‌ಗೆ ಅಂದಾಜು 2ಲಕ್ಷ ರೂ. ವೆಚ್ಚ ತಗುಲಲಿದೆ. ಕಾನೂನು-ವ್ಯವಸ್ಥೆ ಉಲ್ಲಂಸುವ, ಹಿಂಸಾಚಾರ ಸೃಷ್ಟಿಸುವ ಸನ್ನಿವೇಶಗಳ ನಿಯಂತ್ರಣದ ಸಮರ್ಪಕ ಮಾಹಿತಿಗೆ ಇದನ್ನು ಬಳಸಲಾಗುತ್ತದೆ.
ಮುಂಬರುವ ದಿನಗಳಲ್ಲಿ ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ 100ಕ್ಕೂ ಅಧಿಕ ಹೆಚ್ಚಿನ ರೆಸಲ್ಯೂಷನ್‌ವುಳ್ಳ ಕ್ಯಾಮರಾಗಳನ್ನು ಅಳವಡಿಸಲು ಯೋಜಿಸಲಾಗಿದೆ. ಪ್ರತಿ ಕ್ಯಾಮರಾಗೆ ಸುಮಾರು 1ಲಕ್ಷ ರೂ. ವೆಚ್ಚವಾಗಲಿದೆ ಎಂದರು.
ಕಮಾಂಡ್ ವಾಹನ: ಹೈಟೆಕ್‌ನತ್ತ ಕಮೀಷನರೇಟ್ ಘಟಕ ಬೆಂಗಳೂರು ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರವು ಕಮಾಂಡ್ ವಾಹನ ಹೊಂದಲಿರುವ ಎರಡನೆಯ ನಗರವಾಗಲಿದೆ. ಕಮಾಂಡ್ ವಾಹನವು ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರಲಿದ್ದು, ಸ್ಥಳದಿಂದಲೇ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಮಾಹಿತಿಗಳನ್ನು ರವಾನಿಸುತ್ತದೆ.
ಇದು ಅವಳಿ ನಗರದ ಭದ್ರತಾ ವ್ಯವಸ್ಥೆಗೆ ಶಕ್ತಿ ತುಂಬಲಿದೆ ಎಂದರು. ಕಮಾಂಡ್ ವಾಹನವು ಒಂದು ವಿಡಿಯೊ ವಾಲ, ಪಾನ್-ಟಿಲ್ಟ ಜೂಮ ಕ್ಯಾಮರಾ ಸೇರಿದಂತೆ ಎಲ್ಲ ಸಂವಹನ ವ್ಯವಸ್ಥೆ ಹೊಂದಿರುತ್ತದೆ. ಇದು ಮೊಬೈಲ ಪೊಲೀಸ್ ಠಾಣೆಯಂತೆ ಇರಲಿದೆ. ತಂಡದ ಪುರುಷ ಪೊಲೀಸರು ನಿಸ್ತಂತು ಕ್ಯಾಮರಾಗಳನ್ನು ಹಾಕಿಕೊಂಡಿರುತ್ತಾರೆ.
ಮೆರವಣಿಗೆ, ಅಹಿತರ ಘಟನೆ, ಚುನಾವಣೆ ರ್ಯಾಲಿ ಸಂದರ್ಭಗಳಲ್ಲಿ ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿರುವ ಗುಂಪಿನಲ್ಲಿನವರನ್ನು ಗುಪ್ತ ಕ್ಯಾಮೆರಾಗಳನ್ನು ಧರಿಸಿರುವ ಸಿಬ್ಬಂದಿ ಮೂಲಕ ಫೋಟೋ ಸೆರೆ ಹಿಡಿಯಲಾಗುತ್ತದೆ. ಕಮಾಂಡ್ ವಾಹನದಲ್ಲಿ ಸೆರೆ ಹಿಡಿಯಲಾದ ಪೋಟೋಗಳು ಹಾಗೂ ಸಂದೇಶಗಳು ನೇರವಾಗಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತಲುಪುತ್ತವೆ. ಅಲ್ಲಿಂದಲೇ ಮೇಲಾಧಿಕಾರಿಗಳು ಪರಿಸ್ಥಿತಿ ನಿಭಾಯಿಸಬಹುದು ಎಂದು ಪಿ.ಎಚ್. ರಾಣೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.