ಭಗವಂತನ ಮಾರ್ಗದಲ್ಲಿ ಹೋಗಲು ಭಕ್ತಿಯೋಗ ಅಗತ್ಯ
Team Udayavani, Mar 17, 2017, 1:23 PM IST
ಧಾರವಾಡ: ಭಗವಂತನ ಮಾರ್ಗದಲ್ಲಿ ಹೋಗಲು ಕರ್ಮ ಯೋಗ, ಜ್ಞಾನ ಯೋಗ ಹೀಗೆ ಅನೇಕ ಮಾರ್ಗಗಳಿವೆ. ಅದರಲ್ಲಿ ಭಕ್ತಿ ಯೋಗಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಭಕ್ತಿಯೋಗ ಅಳವಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಇಚಲಕರಂಜಿಯ ಭಕ್ತಿಯೋಗಾಶ್ರಮದ ಶ್ರೀ ಮಹೇಶ್ವರನಾಂದ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ಕಾಲೇಜ್ ಮೈದಾನದಲ್ಲಿ ರುವಾರ ಜರುಗಿದ ಯೋಗ, ಆರೋಗ್ಯ ಹಾಗೂ ಭಕ್ತಿ ಯೋಗದ ದರ್ಶನ ಪ್ರವಚನದಲ್ಲಿ ಅವರು ಆರ್ಶೀವದಿಸಿದರು. ಸಾವಿರ ಕಷ್ಟಗಳಿದ್ದರೂ ನಾಲ್ಕು ಜನರನ್ನ ಒಂದೆಡೆ ಕೂಡಿಸಿ ಇಡ್ತಾದಲ್ಲ ಅದು ಪ್ರೀತಿ. ಈ ನಮ್ಮ ಬದುಕು ನಿಂತಿರುವುದು ಪ್ರೀತಿಯ ಮೇಲೆ ಎಂಬುದನ್ನು ಯಾರೊಬ್ಬರೂ ಮರೆಯಬಾರದು ಎಂದರು.
ದೇವರನ್ನು ನಂಬಿ ಬದುಕಿರುವ ದೇಶ ಇದು. ನಮ್ಮ ಸುತ್ತಮುತ್ತವಿರುವ ಜಗತ್ತನ್ನು ನೋಡಿ ಅನುಭವಿಸೋದೆ ದೇವರು. ನಮ್ಮ ನಮ್ಮ ಮನೆಗಳು ಸಣ್ಣದಿರಬಹುದು, ಇಲ್ಲವೇ ದೊಡ್ಡದಿರಬಹುದು. ಆದ್ರೆ ದೇವರ ಜಗಲಿ ಇಲ್ಲದ ಮನೆಯಿಲ್ಲ ಎಂಬುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು. ಹೀಗಾಗಿ ಬದುಕಿಗೆ ಪ್ರೀತಿ ಮುಖ್ಯ. ಸಕ್ಕರೆ ಇಲ್ಲದೆ ರುಚಿಯಿಲ್ಲ ಹಂಗ ಭಕ್ತಿಯಿಲ್ಲದಿದ್ದರೆ ಬದುಕು ಪೂರ್ಣಗೊಳ್ಳಲ್ಲ ಎಂದರು.
ತನ್ನೊಳಗಿನ ಕ್ಷಣಿಕ ಸುಖಕ್ಕಾಗಿ ಹಾತೊರೆಯದೆ ಸಂತ ತುಕಾರಾಮನ ಹಾಗೆ ಸದಾ ಕಾಲ ದೇವರ ನಾಮಸ್ಮರಣೆ ಮಾಡುತ್ತ ಸಿದ್ದೇಶ್ವರ ಶ್ರೀಗಳ ಪ್ರವಚನ ಕೇಳಿ ಗುರುವಿನ ಜ್ಞಾನ ತುಂಬಿಕೊಳ್ಳಬೇಕು. ಮನಸ್ಸಿನ ದುರ್ವಾಸನೆ, ಹೊಲಸು, ಕಾಮ, ಕ್ರೋಧ, ಅಹಂಕಾರ, ಆಸೆಯನ್ನು ತೆಗೆದು ಹಾಕಿದಾಗ ಮನಸ್ಸು ನೀರಿನಂಗ ತಿಳಿ ಆಗ್ತಾದ.
ವಿಜಯಪುರದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ನಮ್ಮೆಲ್ಲರ ಆತ್ಮಗಳನ್ನು ಬೆಳಗುವ ಭಕ್ತಿಯೋಗದ ಪರಂಪರೆಯನ್ನು ಉಣಬಡಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲ ತೋರಿಕೆಯ ಭಕ್ತಿಯ ಮಾಡದೆ, ಅಭಿಮಾನದ ಭಕ್ತಿಯನ್ನು ಆತ್ಮದಿಂದ ಮಾಡಬೇಕು. ಆಗ ಜೀವನ ಪಾವನ ಆಗ್ತಾದ ಎಂದರು.
ಬೆಂಗಳೂರಿನ ಶ್ವಾಸ ಸಂಸ್ಥೆಯ ಯೋಗ ಗುರು ಶ್ರೀ ವಚನಾನಂದ ಶ್ರೀಗಳು ಬಸ್ಸರಿಕಾ, ನಾಡಿ ಶೋಧನಾ ಹಾಗೂ ಬ್ರಾಮರಿ ಆಸನಗಳನ್ನು ಮಾಡಿಸುವ ಮೂಲಕ ಯೋಗದ ಮಹತ್ವ ತಿಳಿಸಿಕೊಟ್ಟರು. ತಿಕೋಟಾ ವಿರಕ್ತಮಠದ ಶ್ರೀ ಚೆನ್ನಮಲ್ಲಿಕಾರ್ಜುನ ಶ್ರೀಗಳು ಅಲ್ಲಮ ಪ್ರಭುಗಳ ತೋರಿದ ಭಕ್ತಿ ಪಥದಲ್ಲಿ ನಮ್ಮನ್ನೆಲ್ಲಾ ಶ್ರೀ ಸಿದ್ದೇಶ್ವರ ಶ್ರೀಗಳು ಕರೆದುಕೊಂಡು ಹೊಂಟಾರ.
ಅವರು ತೋರಿದ ದಾರಿಯಲ್ಲಿ ನಾವೆಲ್ಲ ನಡೆದು ಆನಂದ ಪಡೋದು, ಅಂತಹ ಮಹಾನ್ ಶ್ರೀಗಳ ಜೊತೆಗೆ ಇರೋದು ಒಂದು ದೊಡ್ಡ ಭಾಗ್ಯ ಎಂದರು. ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ವಿಜಯಾನಂದ ಸರಸ್ವತಿ ಶ್ರೀ, ಆತ್ಮಾನಂದ ಶ್ರೀ ಸೇರಿದಂತೆ ನಾಡಿನ ಹತ್ತಾರು ಮಠಾಧೀಶರು, ತಪೋವನದ ಅಧ್ಯಕ್ಷರಾದ ಡಾ|ಗುರುಲಿಂಗ ಕಾಪಸೆ, ಪ್ರವಚನ ಸೇವಾ ಸಮಿತಿಯ ಬಿ.ಡಿ. ಪಾಟೀಲ ಇದ್ದರು. ಶ್ರದ್ಧಾ ಮೂರಶಿಳ್ಳಿ ಪ್ರಾರ್ಥಿಸಿದರು. ಶಂಭು ಹೆಗಡ್ಯಾಳ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.