“ಆಸಕ್ತಿಯಿಂದ ಮುನ್ನಡೆದರೆ ಉದ್ಯೋಗಾವಕಾಶ’
Team Udayavani, Mar 17, 2017, 2:48 PM IST
ಬೆಳ್ತಂಗಡಿ : ಶ್ರದ್ಧೆ – ಆಸಕ್ತಿಯೊಂದಿಗೆ ಮುನ್ನಡೆದರೆ ಉದ್ಯೋಗಾವಕಾಶ ದಕ್ಕಿಸಿಕೊಂಡು ಗೆಲುವು ಸಾಧ್ಯವಾಗಿಸಿಕೊಳ್ಳಬಹುದು ಎಂದು ಮಂಗಳೂರಿನ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ಹರೀಶ್ ಶೆಟ್ಟಿ ಹೇಳಿದರು.ಅವರು ಮಂಗಳವಾರ ಉಜಿರೆ ಇಂದ್ರಪ್ರಸ್ಥ ಸಭಾಂಗಣದಲ್ಲಿ ಜರಗಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಕಲರವ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ಅಪೂರ್ವ ಸಾಧನೆಗೈದ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಕೆ. ಎ. ನಿರೂಪಿಸಿದರು. ಮೇರಿ ಸ್ಮಿತಾ ಸ್ವಾಗತಿಸಿದರು. ಶಂಕರ್ ಭಟ್ ವಂದಿಸಿದರು.
ಕೇವಲ ಅಂಕಕ್ಕಾಗಿ ಶಿಕ್ಷಣ ಪಡೆಯದಿರಿ
ಕೆಲಸದಲ್ಲಿ ಆಸಕ್ತಿ, ಶ್ರದ್ಧೆ ಇದ್ದರೆ ಗೆಲುವು ಕಟ್ಟಿಟ್ಟ ಬುತ್ತಿ. ಕ್ರಿಯಾತ್ಮಕ ಯೋಚನೆ, ಹೊಸತನ ವಿದ್ಯಾರ್ಥಿಗಳಿಗೆ ಇರಬೇಕಾದ ಪ್ರಮುಖ ಲಕ್ಷಣ ಗಳು. ಕೇವಲ ತಿಳಿದುಕೊಂಡರೆ ಪ್ರಯೋಜನವಿಲ್ಲ. ತಿಳಿದುಕೊಂಡಿದ್ದನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದು ಕೂಡ ತಿಳಿದಿರಬೇಕು. ವಿಷಯವಸ್ತು ಗ್ರಹಿಸಲು ಇಂದಿನ ಯುವಜನತೆ ಸೋಲುತ್ತಿದೆ. ವಸ್ತು ನಿಷ್ಠತೆಯೊಂದಿಗೆ ವಿಶ್ಲೇಷಿಸಿದಾಗ ಜ್ಞಾನ ವೃದ್ಧಿಯಾಗುತ್ತದೆ. ಕೇವಲ ಅಂಕಗಳಿಗಾಗಿ ಶಿಕ್ಷಣವನ್ನು ಪಡೆಯಬಾರದು. ಕಲಿತ ವಿದ್ಯೆ ಆಧರಿಸಿ ಹೊಸತನದೊಂದಿಗೆ ಹೆಜ್ಜೆ ಇಟ್ಟಾಗ ಸಮಾಜದಲ್ಲಿ ಬದಲಾವಣೆ ಕಂಡು ಬರುತ್ತದೆ .
– ಹರೀಶ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.