ಹೋರಾಡಿ ಶರಣಾದ ಅಯರ್‌ಲ್ಯಾಂಡ್
Team Udayavani, Mar 18, 2017, 10:20 AM IST
ಗ್ರೇಟರ್ ನೋಯ್ಡಾ: ಆರಂಭಿಕ ಪಾಲ್ ಸ್ಟರ್ಲಿಂಗ್ ಅವರ ಆಲ್‌ರೌಂಡ್ ಆಟದ ಹೊರತಾಗಿಯೂ ಅಯರ್‌ಲ್ಯಾಂಡ್ ತಂಡವು ಶುಕ್ರವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರಬಲ ಹೋರಾಟ ಸಂಘಟಿಸಿ ಅಫ್ಘಾನಿಸ್ಥಾನ ವಿರುದ್ಧ 34 ರನ್ನುಗಳಿಂದ ಶರಣಾಯಿತು.
ಬೃಹತ್ ಮೊತ್ತದ ಈ ಹೋರಾಟದಲ್ಲಿ ಸ್ಟರ್ಲಿಂಗ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದರೂ ತಂಡಕ್ಕೆ$ಗೆಲುವು ದೊರಕಿಸಿಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನವು ಸರಿಯಾಗಿ 50 ಓವರ್‌ಗಳಲ್ಲಿ 338 ರನ್ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ದಿಟ್ಟ ಹೋರಾಟ ಸಂಘಟಿಸಿದ ಅಯರ್‌ಲ್ಯಾಂಡ್ ಅಂತಿಮವಾಗಿ 47.3 ಓವರ್‌ಗಳಲ್ಲಿ 304
ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಈ ಗೆಲುವಿನಿಂದ ಅಫ್ಘಾನಿಸ್ಥಾನ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಮೂರನೇ ಪಂದ್ಯ ಮಾ. 19ರಂದು ನಡೆಯಲಿದೆ.
ಅಫ್ಘಾನಿಸ್ಥಾನ ಬೃಹತ್ ಮೊತ್ತ ಪೇರಿಸಿದ್ದರೂ ಸ್ಟರ್ಲಿಂಗ್ ತನ್ನ 10 ಓವರ್‌ಗಳ ದಾಳಿಯಲ್ಲಿ 55 ರನ್ನಿಗೆ 6 ವಿಕೆಟ್ ಕಿತ್ತು ಗಮನ ಸೆಳೆದರು. ಅಸYರ್ ಸ್ಟಾನಿಜಾಯ್ 101 ರನ್ ಗಳಿಸಿದರು. 90 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿದರು.
ಬ್ಯಾಟಿಂಗ್‌ನಲ್ಲೂ ಮಿಂಚಿದ ಸ್ಟರ್ಲಿಂಗ್ 80 ಎಸೆತ ಎದುರಿಸಿ 95 ರನ್ ಹೊಡೆದರು. 9 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದ್ದರು. ಅಯರ್‌ಲ್ಯಾಂಡಿನ ಕುಸಿತಕ್ಕೆ ಕಾರಣರಾದ ರಶೀದ್ ಖಾನ್ ತನ್ನ 9.3 ಓವರ್‌ಗಳ ದಾಳಿಯಲ್ಲಿ 43 ರನ್ನಿಗೆ 6 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು: ಅಫ್ಘಾನಿಸ್ಥಾನ 338 (ಮೊಹಮ್ಮದ್ ಶಾಜಾದ್ 63, ನೂರ್ ಅಲಿ ಜದ್ರಾನ್ 25, ರಹಮತ್ ಶಾ 68, ಅಸYರ್ ಸ್ಟಾನಿಜಾಯ್ 101, ಶಫೀಖುಲ್ಲ 35, ಜಾರ್ಜ್ ಡಾಕ್ರೆಲ್ 45ಕ್ಕೆ 2ಪಾಲ್ ಸ್ಟರ್ಲಿಂಗ್ 55ಕ್ಕೆ 6); ಅಯರ್‌ಲ್ಯಾಂಡ್ 47.3 ಓವರ್‌ಗಳಲ್ಲಿ 304 ಆಲೌಟ್ (ಎಡ್ ಜಾಯ್ಸ 55, ಪಾಲ್ ಸ್ಟರ್ಲಿಂಗ್ 95, ವಿಲಿಯಮ್ ಪೋರ್ಟರ್‌ಫೀಲ್ಡ್ 45, ಸ್ಟುವರ್ಟ್ ಥಾಮ್ಸನ್ 37, ದೌಲತ್ ಜದ್ರಾನ್ 52ಕ್ಕೆ 3, ರಶೀದ್ ಖಾನ್ 43ಕ್ಕೆ 6).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.