ಶತ ದಿನದತ್ತ ಪಿಲಿಬೈಲ್ ಯಮುನಕ್ಕ
Team Udayavani, Mar 18, 2017, 12:01 PM IST
ಮಂಗಳೂರು: ತುಳು ಚಿತ್ರರಂಗದಲ್ಲಿ ಅದ್ವಿತೀಯ ದಾಖಲೆ ಬರೆದಿರುವ “ಪಿಲಿಬೈಲ್ ಯಮುನಕ್ಕ’ ಚಿತ್ರ ಮಾ. 18ರ ಶನಿವಾರ 100ನೇ ದಿನದ ಪ್ರದರ್ಶನ ಕಾಣಲಿದೆ.
ಮಂಗಳೂರಿನ ಪ್ರಭಾತ್ ಹಾಗೂ ಬಿಗ್ ಸಿನೆಮಾಸ್‌ನಲ್ಲಿ ಪ್ರಸ್ತುತ “ಪಿಲಿಬೈಲ್’ ಪ್ರದರ್ಶನ ಕಾಣುತ್ತಿದೆ.ರೋಹನ್ ಶೆಟ್ಟಿ, ಹರೀಶ್ ರಾವ್ ಮತ್ತು ಸಂದೇಶ್ ರಾಜ್ ಬಂಗೇರ ನಿರ್ಮಾಣದ ಚಿತ್ರವನ್ನು ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ನಾಗರಾಜ್ ಅಂಬರ್ ನಾಯಕನಾಗಿ ಮತ್ತು ಎಕ್ಕಸಕ ಚಿತ್ರದ ಸೋನಾಲ್ ಮೊಂತೇರೊ ನಾಯಕಿಯಾಗಿ ನಟಿಸಿದ್ದಾರೆ. ಇವರ ಜತೆಯಲ್ಲಿ ಕರಾವಳಿಯ ಭರವಸೆಯ ಕಲಾವಿದರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ, ಭೋಜರಾಜ್ ವಾಮಂಜೂರು, ಸತೀಶ್ ಬಂದಲೆ, ಮಂಜು ರೈ ಮೂಳೂರು, ವಿಸ್ಮಯ ವಿನಾಯಕ್, ಉಮೇಶ್ ಮಿಜಾರು ಮತ್ತು ಸುನೀಲ್ ನೆಲ್ಲಿಗುಡ್ಡೆ ಮುಂತಾದವರು ಚಿತ್ರದಲ್ಲಿದ್ದಾರೆ. ವಿಶೇಷವಾಗಿ ಕನ್ನಡದ “ಪುಟ್ಟಗೌರಿ ಮದುವೆ’ ಧಾರಾವಾಹಿಯ ಪಾತ್ರಧಾರಿ ಚಂದ್ರಕಲಾ ಮೋಹನ್ ಅವರು ಇಲ್ಲಿ “ಯಮುನಕ್ಕ’ ಪಾತ್ರದಲ್ಲಿ ಮಿಂಚಿದ್ದಾರೆ.
ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರ ಭಾಗವತಿಕೆ ಶೈಲಿಯ ಹಾಡು ಜನಮನ ಗೆದ್ದಿದೆ. ಮೊದಲ ಬಾರಿಗೆ ಕಿಶೋರ್ ಕುಮಾರ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೀರ್ತನ್ ಪೂಜಾರಿ ಛಾಯಾಚಿತ್ರಗ್ರಹಣ ಮಾಡಿದ್ದಾರೆ.
ಚಿತ್ರವು ಮೊದಲ ದಿನದಿಂದಲೇ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಗೆಲುವು ಪಡೆದು ಕೊಂಡಿದೆ. ಇಲ್ಲಿಯವರೆಗೆ ಚಿತ್ರವು 2.80 ಕೋ.ರೂ. ಗಳಿಸುವ ಮೂಲಕ ತುಳುಚಿತ್ರರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.