ಫೇಸ್‌ಬುಕ್‌ ಮಾಧ್ಯಮದ ಪ್ರಮುಖ ಪಾತ್ರ: ರೋಹನ್‌ ಸಮರಾಜೀವ


Team Udayavani, Mar 18, 2017, 12:21 PM IST

170317Astro01.jpg

ಉಡುಪಿ: ವಿವಿಧ ಮಾಧ್ಯಮಗಳ ಕಾಲ ಉರುಳಿ ಈಗ ಫೇಸ್‌ಬುಕ್‌ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಲಿರ್ನೆ ಏಷ್ಯಾ ಸ್ಥಾಪಕಾಧ್ಯಕ್ಷ, ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ನೀತಿಯ ಚಿಂತನ ಚಿಲುಮೆ, ಕಮ್ಯುನಿಕೇಶನ್‌ ಪಾಲಿಸಿ ರಿಸರ್ಚ್‌ ಸೌತ್‌ ಅಧ್ಯಕ್ಷ ರೋಹನ್‌ ಸಮರಾಜೀವ ಹೇಳಿದರು.

ಮಣಿಪಾಲದ ಸ್ಕೂಲ್‌ ಆಫ್ ಕಮ್ಯುನಿಕೇಶನ್‌ನ (ಎಸ್‌ಒಸಿ)ಮಾಧ್ಯಮ ಸಂಶೋಧನ ಕೇಂದ್ರ(ಎಂಆರ್‌ಸಿ) ಎಸ್‌ಒಸಿ ಸಭಾಂಗಣ ದಲ್ಲಿ ಆಯೋಜಿಸಿದ “ಅಭಿವೃದ್ಧಿಗಾಗಿ ಭಾರತದ ಸಂಪರ್ಕ ನೀತಿ ಮತ್ತು ಕಾರ್ಯತಂತ್ರ’ ವಿಷಯದ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು, “ಫೇಸ್‌ಬುಕ್‌ ಕಾಲದಲ್ಲಿ ಸಂಪರ್ಕ ನೀತಿ’ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು.

ಮ್ಯಾನ್ಮರ್‌ನಂತಹ ದೇಶಗಳಲ್ಲಿಯೂ ಫೇಸ್‌ಬುಕ್‌ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇನ್ಯಾದಲ್ಲಿ ಹಣಕಾಸು ಸೇವೆಗಳಿಗೂ ಅಂತರ್‌ಸಂಪರ್ಕ ಸಾಧಿಸಲು ಚಿಂತನೆ ನಡೆದಿದೆ. ಇಂಟರ್‌ನೆಟ್‌, ಮೊಬೈಲ್‌ ನಿರ್ವಹಣೆ ಜಗತ್ತನ್ನು ವೇಗದಲ್ಲಿ ಮುನ್ನುಗ್ಗುವಂತೆ ಮಾಡುತ್ತಿದೆ. ಸಂವಹನ ನೀತಿ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ ಎಂದರು. 

ಸಂವಹನ ನೀತಿಯ ನಿರ್ವಹಣೆ ಸರಕಾರಗಳಿಗೆ ಸವಾಲಾಗಿದೆ. ಥಿಯರಿಗೂ ಪ್ರಯೋಗಕ್ಕೂ ವ್ಯತ್ಯಾಸವಿದೆ. ಜನರ ನಡತೆಯಲ್ಲಿ ಸುಧಾರಣೆಯಾದರೆ ಮಾಧ್ಯಮ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಬಹುದು. “ಹೊಸ ಮನುಷ್ಯ’ ಅಭಿವೃದ್ಧಿ ಆರ್ಥಿಕತೆ ತರಬಹುದು. ಬಹುತೇಕ ಅಭಿವೃದ್ಧಿಶೀಲ ಮಾರುಕಟ್ಟೆ ಆರ್ಥಿಕತೆಗಳು ಸಂವಹನ ನೀತಿ ಅಥವಾ ಕಾರ್ಯತಂತ್ರ ಅನುಸರಿಸುತ್ತಿವೆ. ಮಾಧ್ಯಮಗಳ ಆಯಾಮಗಳು ಈಗ ವಿಶಾಲವಾಗಿದೆ. ಸರಕಾರದ ಬಹು ಸಂಸ್ಥೆಗಳನ್ನು ಒಳಗೊಂಡು ನೀತಿ ಅನುಸರಿಸಬೇಕಾಗುತ್ತದೆ. ಆದರೆ ಮಾಧ್ಯಮಗಳು ಆರ್ಥಿಕತೆ ಭಾಗವಲ್ಲದ ಕಾರಣ ಅಸ್ಥಿರತೆ ಇದೆ. ಮಾಧ್ಯಮ ಆರ್ಥಿಕತೆ ಒಂದು ಭಾಗವಾಗಿದೆ. ಸಂವಹನ ನೀತಿಯ ಎಲ್ಲೆ ವಿಶ್ಲೇಷಿಸುವುದು ಕಷ್ಟಸಾಧ್ಯ ಎಂದರು. 

ಭಾರತ, ಶ್ರೀಲಂಕಾ, ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಮೊದಲಾದ ದೇಶಗಳಲ್ಲಿ ಆಗುತ್ತಿರುವ ಮಾಧ್ಯಮದ ಬದಲಾವಣೆ, ಪಾತ್ರಗಳನ್ನು ಸಮರಾಜೀವ ವಿಶ್ಲೇಷಿಸಿದರು. 

ಎಂಆರ್‌ಸಿ ಸಮನ್ವಯಕಾರರಾದ ಡಾ| ಪದ್ಮಾ ರಾಣಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಶುಭಾ ಕಾರ್ಯಕ್ರಮ ನಿರ್ವಹಿಸಿ, ಡಾ| ಉಣ್ಣಿಕೃಷ್ಣನ್‌ ವಂದಿಸಿದರು. ಹಿರಿಯ ಸಂವಹನ ಸಂಶೋಧಕ ಡಾ| ವಿನೋದ ಅಗ್ರವಾಲ್‌ ಉಪಸ್ಥಿತರಿದ್ದರು. 

ನ್ಯೂಸ್‌ ಪೇಮೆಂಟ್‌-
ಪೇಡ್‌ ನ್ಯೂಸ್‌!

ಮುದ್ರಣ ಮಾಧ್ಯಮ, ಬಳಿಕ ರೇಡಿಯೋ, ಟಿವಿ, ಈಗ ವಾಟ್ಸಪ್‌, ಫೇಸ್‌ಬುಕ್‌ ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಕೊಡುತ್ತಿವೆ. ಈ ಸುದ್ದಿಗಳಿಗೆ ಗ್ರಾಹಕರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಣ ತೆರು ತ್ತಾರೆ. ಇದು “ನ್ಯೂಸ್‌ ಪೇಮೆಂಟ್‌’. ಆದರೆ ಈಗ “ಪೇಡ್‌ ನ್ಯೂಸ್‌’ ಅಪಾಯ ತಲೆ ಎತ್ತಿದೆ ಎಂದು ಗೌರವ ಅತಿಥಿಯಾಗಿದ್ದ ಮಣಿಪಾಲ ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಕಳವಳ ವ್ಯಕ್ತಪಡಿಸಿದರು. 

ಟಾಪ್ ನ್ಯೂಸ್

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ

1-h-d-r

ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್‌ ಸಿಂಗ್

Shrigeri-Mutt

Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ

1-tunel

ನಾಳೆ ಕಾಶ್ಮೀರದ ಸೋನಾ ಮಾರ್ಗ್‌ ಸುರಂಗ ಉದ್ಘಾಟನೆ

Basanagowda-Yatnal

ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Karkala: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

Karkala: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ

1-h-d-r

ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್‌ ಸಿಂಗ್

Shrigeri-Mutt

Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.