ಹಳಿಯಾಳದ ಯುವತಿ ನಾಪತ್ತೆ: ಹಲವು ಅನುಮಾನ
Team Udayavani, Mar 18, 2017, 12:37 PM IST
ಉಳ್ಳಾಲ: ಉಳ್ಳಾಲದ ಫಿಶ್‌ಮಿಲ್‌ಗೆ ಕೆಲಸಕ್ಕೆ ಬಂದಿದ್ದ ಹಳಿಯಾಳ ರಾಯ ಪಟ್ಟಣ ನಿವಾಸಿ ದೋಂಡಿಬಾೖ ಚಿಮನು ಬಾಜಾರಿ (20) ನಾಪತ್ತೆಯಾಗಿದ್ದು, ಆಕೆಯನ್ನು ಹುಡುಕಿ ಕೊಡು ವಂತೆ ಯುವತಿಯ ಸಂಬಂಧಿಕರು ಉಳ್ಳಾಲ ಪೊಲೀಸರ ಮೊರೆ ಹೋಗಿದ್ದಾರೆ.
ಏಜೆಂಟ್ ಮೂಲಕ ಬಂದಿದ್ದ ಯುವತಿ :ಉತ್ತರ ಕನ್ನಡದಲ್ಲಿ ಕೆಲಸದ ಅಭಾವದಿಂದ ಅಲ್ಲಿನ ಯುವಕ, ಯುವತಿಯರು ಉಳ್ಳಾಲ ಸಹಿತ ರಾಜ್ಯದ ವಿವಿಧೆಡೆ ಕೆಲಸಕ್ಕೆ ತೆರಳುವುದು ಸಹಜ. ಅದೇ ರೀತಿಯಲ್ಲಿ ದೋಂಡಿಬಾೖ ಕೂಡಾ ಉಳ್ಳಾಲದ ಕೈಕೋದಲ್ಲಿರುವ ಫಿಶ್‌ಮಿಲ್‌ನಲ್ಲಿ ಕೆಲಸಕ್ಕೆ ಎಂಟು ತಿಂಗಳ ಹಿಂದೆ ಸೇರಿದ್ದರು. ಆಕೆಯನ್ನು ಸುನಿತಾ ಹೆಸಧಿರಿನ ಯಲ್ಲಾಪುರದ ಯುವತಿ ಉಳ್ಳಾಲಕ್ಕೆ ಕರೆದುಕೊಂಡು ಬಂದಿದ್ದರು. ಸುನೀತಾ ಫಿಶಮಿಲ್ ಮತ್ತು ಕಾರ್ಮಿಕರ ನಡುವೆ ಎಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ ಒಬ್ಬಳ ಸಂಬಳದಲ್ಲಿ 500ರೂ, ನಂತೆ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಆಕೆ ಈ ಸಾಗರೋತ್ಪನ್ನ ಪ್ಯಾಂಕಿಂಗ್ ಮಾಡುವ ಸಂಸ್ಥೆಗೆ ಸುಮಾರು 20 ಯುವತಿಯರನ್ನು ಕರೆದುಕೊಂಡು ಬಂದಿದ್ದರು.ಎನ್ನಲಾಗಿದೆ.
ಹೋಳಿ ಉತ್ಸವಕ್ಕೆ ಗೈರು : ಉತ್ತರಕನ್ನಡ ಸಿದ್ಧಿ ಮತ್ತು ಗೌಳಿ ಜನಾಂಗ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಹಬ್ಬಕ್ಕೆ ದೂರದೂರಿಗೆ ಕೆಲಸಕ್ಕೆ ತೆರಳಿದವರು ಊರಿಗೆ ಮರಳುವುದು ವಾಡಿಕೆ. ಅದೇ ರೀತಿ ಈ ಸಂಸ್ಥೆಯಲ್ಲಿದ್ದ ಕೆಲವರು ಹಬ್ಬಕ್ಕೆ ರಜೆ ಹಾಕಿ ತೆರಳಿದ್ದು, ದೊಂಡಿ ಬಾೖ ಕೂಡ 15 ದಿನಗಳ ಹಿಂದೆ ರಜೆ ಹಾಕಿ ತೆರಳಲಿದ್ದು, ಉಳಿದವರು ಊರಿಗೆ ತಲುಪಿದರೆ ದೊಂಡಿ ಬಾೖ ತಲುಪದೇ ಇದ್ದಾಗ ಮನೆಯವರು ದೂರವಾಣಿ ಕರೆ ಮಾಡಿದ್ದು, ದೂರವಾಣಿ ಕರೆ ಸ್ವೀಕರಿಸಿರಲಿಲ್ಲ.
ಬಳಿಕ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಸುನಿತಾ ಅವಧಿರಿಗೆ ಕರೆ ಮಾಡಿದಾಗ ಅಕೆಯೂ ಕರೆ ಸ್ವೀಕರಿಸದೇ ಇದ್ದಾಗ ಮನೆಯವರಿಗೆ ಆತಂಕ ಮೂಡಿತ್ತು. ದೊಂಡಿ ಬಾೖಯಿಂದ ಆಕೆಯ ಸಹೋದರನಿಗೆ ಮೊಬೈಲ್ ಮೆಸೇಜ್ ಮಾಡಿದ್ದು, ಹುಡುಕುವ ಪ್ರಯತ್ನ ಮಾಡಬೇಡಿ ನಾನು ನಿಮಗೆ ಮುಖ ತೋರಿಸುವ ಹಂತದಲ್ಲಿಲ್ಲ. ತಪ್ಪು ಮಾಡಿದ್ದೇನೆ ಎಂಬ ಸಂದೇಶದಿಂದ ಆತಂಕ ಗೊಂಡ ಆಕೆಯ ಮನೆಯವರು ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದರು. ಆಲ್ಲಿಯ ಪೊಲೀಸರ ಮಾಹಿತಿಯಂತೆ ಶುಕ್ರವಾರ ಉಳ್ಳಾಲಕ್ಕೆ ಆಗಮಿಸಿರುವ ಆಕೆಯ ಸಂಬಂಧಿಕರು ಉಳ್ಳಾಲ ಪೊಲೀಸರ ಮೊರೆ ಹೋದರು.
ಸಂಶಯಕ್ಕೀಡು ಮಾಡಿದ ಮೆಸೇಜ್ : 5ನೇ ತರಗತಿ ತನಕ ಮಾತ್ರ ಕಲಿತಿರುವ ದೋಂಡಿಬಾೖ ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡದ ಮೆಸೇಜ್ ಹಾಕಿರುವುದು ಆಕೆಯನ್ನು ಯಾರಾದರೂ ಅಪಹರಿಸಿರಬಹುದು ಎನ್ನುವ ಸಂಶಯ ಆಕೆಯ ಸಂಬಂಧಿಕರೊಂದಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದಾರೆ. ಆಕೆಗೆ ಸರಿಯಾಗಿ ಇಂಗ್ಲಿಷ್ ಓದಲು ಬರುವುದಿಲ್ಲ, ಆದರೆ ಆಕೆಯ ಮೊಬೈಲ್ ನಂಬ್ರದಿಂದ ಇಂಗ್ಲಿಷ್ ಮೆಸೇಜ್ ಬಂದಿರುವುದರಿಂದ ಆಕೆಯೊಂದಿಗೆ ಯಾರಿದ್ದಾರೆ ಎನ್ನುವ ಸಂಶಯದಿಂದ ಯುವತಿಯನ್ನು ಮಾರಾಟ ಮಾಡಲಾಗಿದೆಯಾ ಎನ್ನುವ ಊಹಾಪೋಹಗಳು ಹುಟ್ಟಿಕೊಂಡಿದೆ. ಪೊಲೀಸರು ತನಿಖೆ ನಡೆಸಿದಾಗ ಆಕೆಯ ಮೊಬೈಲ್ ಟವರ್ ಉಳ್ಳಾಲ – ಕೋಟೆಕಾರು ಮದ್ಯದಲ್ಲಿ ಇರುವುದರಿಂದ ಆಕೆಯನ್ನು ಯಾರಾದರೂ ಗೃಹ ಬಂಧನಲ್ಲಿ ಇರಿಸಿದ್ದಾರ ಎನ್ನುವ ಸಂಶಯ ವ್ಯಕ್ತವಾಗಿದೆ. ಇನ್ನೊಂದೆಡೆ ಆಕೆಯ ಏಜೆಂಟ್ ಸುನಿತಾ ಮತ್ತು ಸಂಸ್ಥೆಯ ಪ್ರಬಂಧಕ ಗೋವಿಂದ ಅವರು ಮನೆಯವರ ಕರೆಗೆ ಸರಿಯಾಗಿ ಉತ್ತರಿ ಸದ ಕಾರಣ ಅವರ ಇಬ್ಬರ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಲಾಗಿದೆ.
ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಎಸ್ ರಾಜೇಂದ್ರ ಅವರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.