ಅಂತೂ ಇಂತೂ ನಾಮ ಪತ್ರ ಸಲ್ಲಿಕೆ ಪ್ರಾರಂಭವಾಯ್ತು
Team Udayavani, Mar 18, 2017, 12:46 PM IST
ನಂಜನಗೂಡು: ಇಲ್ಲಿನ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಬೇಕಾದ ನಾಲ್ಕನೇ ದಿನವಾದ ಶುಕ್ರವಾರ ಮೂರು ನಾಮಪತ್ರ ಸಲ್ಲಿಕೆಯೊಡನೆ ಇಲ್ಲಿನ ಚುನಾವಣಾ ಕಾವು ಏರತೊಡಗಿದೆ. ಮಂಗಳವಾರದಿಂದಲೇ ನಾಮಪತ್ರ ಸ್ವಿಕರಿಸಲು ಕಾದು ಕುಳಿತಿದ್ದ ಚುನಾವಣಾಧಿಕಾರಿ ಜಿ. ಜಗದೀಶರ ಪಾಲಿಗೆ ಇಂದು ನಾಮಪತ್ರಸ್ವಕರಿಸುವ ಶುಭಗಳಿಗೆ ಕೂಡಿ ಬಂದಿದೆ.
6 ನಾಮಪತ್ರ ಸಲ್ಲಿಸುವುದಾಗಿ ಹೇಳಿ ಈವರಿಗೆ 13 ಅರ್ಜಿ ವಿತರಣೆಯಾಗಿದ್ದು ಇಂದು ನಾಮಪತ್ರಸಲ್ಲಿಸಿದವರೆಲ್ಲರೂ ಪಕೇತರರಾಗಿಯೇ ಸಲ್ಲಿಸಿರುವದು ಕುತೂಹಲ ಮೂಡಿಸಿದೆ. ಚಾಮರಾಜ ನಗರ ಜಿಲ್ಲೆಯ ಹನೂರಿನ ಯುವಕ ಪ್ರದೀಪ ಕುಮಾರ ಈ ಉಪ ಚುನಾವಣೆಯ ಪ್ರಥಮರಾಗಿ ನಾಮಪತ್ರ ಸಲ್ಲಿಸಿದರೇ ಪಟ್ಟಣದ ಅಶೋಕಪುರಂ ನಿವಾಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 19000 ಮತ ಪಡೆದು ಕಣದಲ್ಲಿದ್ದ ಸುಬ್ಬಯ್ಯ ದ್ವಿತೀಯರಾಗಿ ಉಮೇದುವಾರಿಕೆ ಪತ್ರ ಸಲ್ಲಿಸಿದರು.
ಹಿರಿಯ ಧಿಮಂತ ರಾಜಕಾರಣಿ, ದೇವರಸನಹಳ್ಳಿಯ ಮಲ್ಲಣ್ಣ ಈ ಬಾರಿ ಮತ್ತೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದೂ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಉಮೇದುದಾರರು ಸೋಮವಾರ ನಾಮಪತ್ರ ಸಲ್ಲಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.