ತಾಲೂಕುಗಳ ಪಟ್ಟಿಯಿಂದ ಮಾಯಕೊಂಡ ಕೈಬಿಟ್ಟಿದ್ದಕ್ಕೆ ಆಕ್ರೋಶ-ಪ್ರತಿಭಟನೆ
Team Udayavani, Mar 18, 2017, 1:20 PM IST
ಮಾಯಕೊಂಡ: ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ 49 ನೂತನ ತಾಲೂಕುಗಳ ಪಟ್ಟಿಯಲ್ಲಿ ಮಾಯಕೊಂಡ ಹೋಬಳಿ ಕೈಬಿಟ್ಟಿರುವುದನ್ನು ಖಂಡಿಸಿ ಮಾಯಕೊಂಡ ಸೇರಿದಂತೆ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ಮಾಯಕೊಂಡ ತಾಲೂಕು ಹೋರಾಟ ಸಮಿತಿ, ಪುರ ಅಭಿವೃದ್ಧಿ ವೇದಿಕೆಯ ಸಮಿತಿಯವರು ಶುಕ್ರವಾರ ಕರೆ ನೀಡಿದ್ದ ಮಾಯಕೊಂಡ ಬಂದ್ ಯಶಸ್ವಿಯಾಗಿದೆ.
ಗ್ರಾಮದ ಅಂಗಡಿ, ಹೋಟೆಲ್‌ಗಳು, ಶಾಲಾ, ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕಸಾರ್ವಜನಿಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಜನಪ್ರತಿನಿಧಿಧಿಗಳು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಪ್ರದೇಶ ರೈತ ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಮಾತನಾಡಿ, ಮಾಯಕೊಂಡ ವಿಧಾನಸಭಾ ಕ್ಷೇತ್ರವಾಗಿದೆ.
ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಭೌಗೋಳಿಕವಾಗಿ ಮಾಯಕೊಂಡ ಗ್ರಾಮವು ಆನಗೊಡು, ಲೋಕಿಕೆರೆ, ಭರಮಸಾಗರ, ಬಿ.ದುರ್ಗ, ಹೋಬಳಿಗಳ ಮಧ್ಯ ಭಾಗದಲ್ಲಿರುವುದರಿಂದ ತಾಲೂಕು ಕೇಂದ್ರವಾಗಬೇಕೆಂಬ ಹೋರಾಟ ಸುಮಾರು 35-40 ವರ್ಷಗಳಿಂದಲೂ ನಡೆದು ಬಂದಿದೆ ಎಂದರು.
ಮಾಯಕೊಂಡ ತಾಲೂಕು ಸಮಿತಿ ರಚಿಸಿಕೊಂಡು ವಿವಿಧ ಹಂತಗಳ ಹೋರಾಟ ಮಾಡುತ್ತಾ ಹುಂಡಿಕಾರ್, ವಾಸುದೇವರಾವ್, ಗದ್ದಿಗೌಡರ್ ಸಮಿತಿಗಳಿಗೆ ಹೋಬಳಿಯ ಗ್ರಾಪಂಗಳ ನಿರ್ಣಯ ಕೈಗೊಂಡು, ಜನಪ್ರತಿನಿಧಿಗಳ ಮತ್ತು ಗ್ರಾಮಸ್ಥರ ಜೊತೆ ನಿಯೋಗ ತೆರಳಿ ತಾಲೂಕು ಕೇಂದ್ರವಾಗಿಸಲು ಮನವಿ ಮಾಡಿದ್ದರು.
ಸತತವಾಗಿ 35 ವರ್ಷ ಅಧಿಧಿಕಾರ ನಡೆಸಿದ ಸರ್ಕಾರಗಳು ಇಚ್ಛಾಶಕ್ತಿ ತೋರಲಿಲ್ಲ. ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಅವರು, ಪಕ್ಷದ ಪರ ಪ್ರಚಾರಕ್ಕೆ ಬಂದಾಗ ಮಾಯಕೊಂಡ ತಾಲೂಕು ಕೇಂದ್ರವಾಗಿ ಘೋಷಣೆ ಮಾಡುತ್ತೇನೆ ಎಂದು ಮಾತುಕೊಟ್ಟಿದ್ದರು. ಈಗ ಮಾತಿಗೆ ತಪ್ಪಿರುವ ಅವರು ಕ್ಷೇತ್ರದ ಜನರಿಗೆ ಮೋಸ ಮಾಡಿ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.
ಇನ್ನೆರಡು ದಿನಗಳಲ್ಲಿ ಜಿಲ್ಲಾ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್, ಕ್ಷೇತ್ರದ ಶಾಸಕರಾದ ಕೆ. ಶಿವಮೂರ್ತಿ ಹಾಗೂ ಮಾಜಿ ಸಚಿವರು, ಶಾಸಕರುಗಳನ್ನು ಒಳಗೊಂಡ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈಗಿನ ಬಜೆಟ್‌ನಲ್ಲಿಯೇ ಮಾಯಕೊಂಡ ತಾಲೂಕು ಕೇಂದ್ರವಾಗಿಸಬೇಕೆಂಬ ಮನವಿ ಮಾಡಿಕೊಳ್ಳುತ್ತೇವೆ.
ಮಾಯಕೊಂಡ ತಾಲೂಕು ಎಂದು ಘೋಷಣೆ ಮಾಡದೇ ಹೋದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸುವ ಜತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿಜೆಪಿ ಮುಖಂಡ ಆನಂದಪ್ಪ ಮಾತನಾಡಿ, ಮಾಯಕೊಂಡ ಗ್ರಾಮವು ತಾಲೂಕಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಸಹ ಇಚ್ಛಾಶಕ್ತಿಯ ಕೊರತೆಯಿಂದ ಕಡೆಗಣಿಸಲಾಗಿದೆ.
ನಾಡ ಕಚೇರಿ, ರೈಲ್ವೆ ನಿಲ್ದಾಣ, ಕೃಷಿ ಇಲಾಖೆ, ಪೊಲೀಸ್ ಠಾಣೆ, ಉಪ ಖಜಾನೆ, ಕೆನರಾ ಬ್ಯಾಂಕ್, ಪಪೂ, ಪ್ರಥಮ ದರ್ಜೆ ಕಾಲೇಜುಗಳಿವೆ. ಹೀಗಾಗಿ ಮಾಯಕೊಂಡವನ್ನು ತಾಲೂಕು ಮಾಡಬೇಕು ಎಂದು ಒತ್ತಾಯಿಸಿದರು. ಜಿಪಂ ಮಾಜಿ ಸದಸ್ಯ ವೆಂಕಟೇಶ್, ಗ್ರಾಪಂ ಅಧ್ಯಕ್ಷ ಲಕ್ಷಣ, ಸದಸ್ಯ ರುದ್ರೇಶ್, ಸಂಡೂರ್ ರಾಜಶೇಖರ್, ಮುಖಂಡ ನೀಲಪ್ಪ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಗಿರಿಜಾ ರಮೇಶ್, ಸದಸ್ಯರಾದ ಮಲ್ಲಿಕಾರ್ಜುನ, ಗಂಗಾಧರಪ್ಪ, ಪರುಶುರಾಮ ಜಯ್ಯಪ್ಪ, ಸುಲೋಚನಮ್ಮ, ದಾಕ್ಷಾಯಣಮ್ಮ, ರೂಪಾ, ಕನ್ನಡ ಯುವಶಕ್ತಿ ಕೇಂದ್ರದ ಅಧ್ಯಕ್ಷ ಗಾಳೆರ ಶ್ರೀನಿವಾಸ, ಗುರುನಾಥ ರವಿಕುಮಾರ್, ರಾಘವೇಂದ್ರ, ಮುಖಂಡರಾದ, ಬಿ.ಟಿ. ಹನುಮಂತಪ್ಪ, ಮುಪ್ಪಣ್ಣ, ಪ್ರೊ| ಲಿಂಗಣ್ಣ, ಎಂಜಿ ಗೋಪಾಲ್, ಬೀರಪ್ಪ, ಗೌಡ್ರ ಅಶೋಕ, ಶ್ರೀರಾಮ್ ಬಾಲರಾಜ,
ಗುಡ್ಲಿ ಕುಬಣ್ಣ, ತಿಪ್ಪೇಶ್, ಉಮ್ಮಾರ್‌ಸಾಬ್, ಬಿ.ಸಿ. ಬಸವರಾಜು ಪ್ರಕಾಶ್, ಉಮಾಶಂಕರ್, ದಿಂಡದಹಳಿ ರಂಗಪ್ಪ,ಹಿಂಡಸಘಟ್ಟೆ ರಾಮಚಂದ್ರ, ಮಾಗಡಿ, ಹೆದೆ°, ಹುಚ್ಚವನಹಳ್ಳಿ ಬಸವಾಪುರ, ನಲ್ಕುಂದ, ಅಣಬೇರು, ಬುಳ್ಳಾಪುರ, ಬಾವಿಹಾಳು ಗ್ರಾಮಸ್ಥರು ಬಂದ್‌ಗೆ ಬೆಂಬಲ ನೀಡಿದರು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.