ಶರಣಬಸವೇಶ್ವರ ರಥೋತ್ಸವ: ಅನ್ನಸಂತರ್ಪಣೆ
Team Udayavani, Mar 18, 2017, 3:25 PM IST
ಕಲಬುರಗಿ: ಮಹಾದಾಸೋಹಿ ಶರಣಬಸವೇಶ್ವರರ 195ನೇ ಜಾತ್ರಾ ಮಹೋತ್ಸವ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಅನ್ನಸಂತರ್ಪಣೆ, ತಂಪು ಪಾನೀಯ, ಮಜ್ಜಿಗೆ ವಿತರಣೆಯಂತಹ ದಾಸೋಹ ಕಾರ್ಯಕ್ರಮಗಳನ್ನು ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದವು.
ನಗರದ ರಾಮಮಂದಿರ ಬಳಿ ಸಾಯಿ ಏಕದಂತ ಯುವ ಮಂಡಳಿ ಹಾಗೂ ದಿಲೀಪ ಆರ್. ಪಾಟೀಲ ಅಭಿಮಾನಿ ಬಳಗದಿಂದ ಶರಣಬಸವೇಶ್ವರ ಜಾತ್ರೆ ಅಂಗವಾಗಿ ಮಾಜಿ ಉಪಮೇಯರ್ ಮಹೇಶ ಹೊಸೂರಕರ ಪ್ರಸಾದ ವಿತರಣೆಗೆ ಚಾಲನೆ ನೀಡಿದರು.
ಈರಣ್ಣ ಪಾಟೀಲ ಝಳಕಿ, ಶರಣು ಸರಡಗಿ, ಶಿವು ಸ್ವಾಮಿ ಹಿರೇಮಠ, ರಾಚಣ್ಣ ಮ್ಯಾಕೇರಿ, ರವಿ ಪೂಜಾರಿ, ವಿರೇಶ ಪಡಶೆಟ್ಟಿ, ಗಿರೀಶ ಹೊನೂರಕರ, ಅಮರ ಶಿರವಾಳ, ಶಶಿಕಾಂತ, ಶರಣು ವಾರದ ಹಾಗೂ ಇತರರಿದ್ದರು.
ನಗರದ ರಾಷ್ಟ್ರಪತಿ ಚೌಕ್‌ನಿಂದ ಶರಣಬಸವೇಶ್ವರ ಕಾಲೇಜು ಮಾರ್ಗದಲ್ಲಿನ ರಸ್ತೆ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾ ನ್ಯಾಯಾಲಯದ ರಸ್ತೆ, ನೂತನ ವಿದ್ಯಾಲಯ ಮಾರ್ಗ, ಜಗತ್ ವೃತ್ತ, ದೇವಸ್ಥಾನದ ಆವರಣ, ನಗರದ ಗೋವಾ ಹೋಟೆಲ್ ಬಳಿ ವಿವಿಧ ಸಂಘಟನೆಗಳು ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ತಂಪು ಪಾನೀಯ ವಿತರಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.