ಕಗ್ಗ ಬದುಕಿನ ಭಗವದ್ಗೀತೆ
Team Udayavani, Mar 18, 2017, 5:23 PM IST
ರಾಮನಗರ: ಡಿವಿಜಿ ರಚಿಸಿರುವ ಮಂಕುತಿಮ್ಮನ ಕಗ್ಗ ಸರಳ ಮತ್ತು ಜೀವನಕ್ಕೆ ಪ್ರೇರಣೆ ನೀಡುತ್ತದೆ ಎಂದು ಚಿಂತಕ ಹಾಗೂ ಪಶುವೈದ್ಯಕೀಯ ಇಲಾಖೆ ಜಾನುವಾರು ಅಧಿಕಾರಿ ಬಿ.ಎಸ್.ಬಸವರಾಜು ಅಭಿಪ್ರಾಯಪಟ್ಟರು.
ಡಿ.ವಿ.ಗುಂಡಪ್ಪ ಅವರ 130ನೇ ಜನ್ಮದಿನದ ಅಂಗವಾಗಿ ನಗರದ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ “ಡಿವಿಜಿ ಒಂದು ನೆನಪು’ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಮಂಕುತಿಮ್ಮನ ಕಗ್ಗ ಬದುಕಿನ ಭಗವದ್ಗೀತೆ ಎಂದು ಹೇಳಿದರು.
ಸಮಾಜಕ್ಕೆ ಕೊಡುಗೆ: ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲದೆ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ಮತ್ತು ದಾರಿತೋರಿಸುವ ಅಕ್ಷರ ಕ್ರಾಂತಿ ಮಾಡಿದ ಡಿವಿಜಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು, ಇಂದಿನ ತಲೆಮಾರಿಗೂ ಅಗತ್ಯವಾಗಿ ಬೇಕಾದ ಮಾರ್ಗದರ್ಶನವನ್ನು ಕಳೆದ 7ದಶಕಗಳ ಹಿಂದೆ ಡಿವಿಜಿ 945 ಕಗ್ಗಗಳ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ನುಡಿದಂತೆ ನಡೆದು, ಬರೆದಂತೆ ಬದುಕಿದರು: ಹತ್ತನೇ ತರಗತಿಯಲ್ಲಿ ನಪಾಸಾದ ಡಿವಿಜಿಯವರದ್ದು ಬಹುಮುಖ ಸೃಜನಶೀಲ ವ್ಯಕ್ತಿತ್ವ. ಬರಹದಿಂದಲೇ ಬದುಕು ಸಾಗಿಸಿದ ವಿರಳಾತಿ ವಿರಳ ಸಾಹಿತಿಗಳಲ್ಲಿ ಡಿವಿಜಿ ಪ್ರಥಮರಾಗಿ ನಿಲ್ಲುತ್ತಾರೆ. ನುಡಿದಂತೆ ನಡೆದು, ಬರೆದಂತೆ ಬದುಕಿದ ಮಹಾನ್ ವ್ಯಕ್ತಿ ಡಿವಿಜಿ ಎಂದು ನುಡಿದರು.
ಪ್ರಶಸ್ತಿಗೂ ಮೀರಿದ ವ್ಯಕ್ತಿತ್ವ: ಕೆಲವರು ಡಿವಿಜಿ ಅವರಿಗೆ ಮರಣೋತ್ತರ ಜಾnನಪೀಠ ಪ್ರಶಸ್ತಿ ಬರಬೇಕು ಎಂದು ಹಕ್ಕೋತ್ತಾಯ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿಯವರು ನೋಬೆಲ್ ಪ್ರಶಸ್ತಿಗೆ ಅರ್ಹರಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಗಾಂಧಿ ಮತ್ತು ಡಿವಿಜಿ ಅವರ ಕೊಡುಗೆಗಳು ಮತ್ತು ಅವರ ವ್ಯಕ್ತಿತ್ವ ಜಾನಪೀಠ ಪ್ರಶಸ್ತಿ ಮತ್ತು ನೋಬೆಲ್ ಪ್ರಶಸ್ತಿಗಳನ್ನು ಮೀರಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಾಸವಿ ಶಾಲೆ ಅಧ್ಯಕ್ಷ ಬಿ.ಎನ್.ಸುರೇಂದ್ರನಾಥ ಗುಪ್ತ ಮಾತನಾಡಿ, ಕಲಿಯುವ ಮಕ್ಕಳಿಗೆ ಸಾಧಕರ ಮಾರ್ಗದರ್ಶನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಸಾಹಿತಿಗಳನ್ನು ಪರಿಚಯಿಸುವ ಕೆಲಸವನ್ನು ಶಾಲೆಗಳಲ್ಲಿ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಇನ್ನು ದೊಡ್ಡ ಪ್ರಮಾಣದ ಕಾರ್ಯಕ್ರಮ ಆಯೋಜಿಸಿದಲ್ಲಿ ಸೂಕ್ತ ಸಹಕಾರ ನೀಡುವುದಾಗಿ ಹೇಳಿದರು.
ಮಾಧ್ಯಮ ಕ್ಷೇತ್ರಕ್ಕೆ ಡಿವಿಜಿ ಮಾದರಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜ್, ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲದೆ ದಾರಿತಪ್ಪುತ್ತಿರುವ ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಡಿವಿಜಿ ಮಾದರಿಯಾಗಿದ್ದಾರೆ. ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾಗುವ ಅಪಾಯದ ಬಗ್ಗೆ ಅಂದೇ ಡಿವಿಜಿಯವರು ಎಚ್ಚರಿಸಿದ್ದು, ಈಗ ನಿಜವಾಗಿದೆ ಎಂಬುದಕ್ಕೆ ಅವರ ಚಿಂತನೆಯು ಎಷ್ಟರ ಪ್ರಮಾಣದಲ್ಲಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಡಿವಿಜಿ ಅವರ ಕಗ್ಗಗಳನ್ನು ಪೋಷಕರು ಮಕ್ಕಳಿಗೆ ಮನೆಯಲ್ಲಿ ಹೇಳಿಕೊಡುವ ಮೂಲಕ ಅವರ ಅದರ್ಶ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಣೆ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಬಿ.ವಿ. ಸೂರ್ಯಪ್ರಕಾಶ್, ಗಾಯಕರಾದ ಚೌ.ಪು.ಸ್ವಾಮಿ, ಜಿ.ಕೃಷ್ಣಾನಾಯಕ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಚ್.ಎಸ್.ರೂಪೇಶ್ ಕುಮಾರ್, ವಿಜಯ್‌ರಾಂಪುರ, ಕೋಶಾಧ್ಯಕ್ಷ ಎಚ್.ಪಿ.ನಂಜೇಗೌಡ, ವಾಸವಿ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಪಿ.ವಿ.ಬದರಿನಾಥ್, ಪ್ರಮುಖರಾದ ಕೆ.ವಿ.ಉಮೇಶ್, ಎಂ.ಬಿ.ಜನಾರ್ಧನ, ಶಿಕ್ಷಕ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ
By Election: ಸಿ.ಪಿ.ಯೋಗೇಶ್ವರ್ ಬಾಯಿ ಮಾತಿನ ಭಗೀರಥ: ಎಚ್.ಡಿ.ದೇವೇಗೌಡ ವಾಗ್ದಾಳಿ
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.