ಕೃಷಿಯಲ್ಲಿ ಹೊಸ-ಹೊಸ ಆವಿಷ್ಕಾರವೇ ಇವರ ಕಾಯಕ
Team Udayavani, Mar 18, 2017, 5:34 PM IST
ಕೋಟ : ಕೃಷಿಯಿಂದ ನಷ್ಟವೇ ಜಾಸ್ತಿ ಎನ್ನುವ ಕಾರಣ ನೀಡಿ ಅನೇಕ ಮಂದಿ ಕೃಷಿಯಿಂದ ವಿಮುಖರಾಗುತ್ತಾರೆ. ಇದರ ಜತೆಗೆ ಒಂದಷ್ಟು ಮಂದಿ ಅದರಲ್ಲೇ ಹೊಸತನವನ್ನು ಹುಡುಕುತ್ತ ಆವಿಷ್ಕಾರಗಳನ್ನು ಮಾಡಿ ಯಶಸ್ವಿಯಾಗಿ ಕೃಷಿಯಲ್ಲೇ ಖುಷಿಪಡುತ್ತಿರುತ್ತಾರೆ. ಇಂಥವರ ಸಾಲಿನಲ್ಲಿ ಗುರುತಿಸ ಬಹುದಾದ ಪ್ರಗತಿಪರ ಕೃಷಿಕರೇ ಕೋಟದ ಪಾರಂಪಳ್ಳಿಯ ರವೀಂದ್ರ ಐತಾಳ. ಇವರು ಕೃಷಿಯಲ್ಲಿ ಸದಾ ಹೊಸತನವನ್ನು ಹುಡುಕುವ ತುಡಿತ ಹೊಂದಿರುವವರು ಹಾಗೂ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಲು ಹೊಸ-ಹೊಸ ಆವಿಷ್ಕಾರಗಳಲ್ಲಿ ತೊಡಗಿರುವವರು.
ಪ್ರತಿ ವರ್ಷ ಹೊಸ ತಳಿಗಳ ಪರಿಚಯ ಬೇರೆ-ಬೇರೆ ಜಿಲ್ಲೆಗಳ ಸಮೃದ್ಧವಾದ ಇಳುವರಿ ನೀಡುವ ಭತ್ತದ ತಳಿಗಳ ಕುರಿತು ಕೃಷಿ ಪರಿಣತರಿಂದ ಮಾಹಿತಿ ಪಡೆದು ಹಾಗೂ ಬೇರೆ-ಬೇರೆ ಕಡೆ ನಡೆಯುವ ಕೃಷಿ ಮೇಳಗಳಿಗೆ ತೆರಳಿ ಅಲ್ಲಿನ ಹೊಸತನವನ್ನು ಅಧ್ಯಯನ ಮಾಡಿ, ಹೊಸ ತಳಿಯನ್ನು ತನ್ನೂರಿಗೆ ತಂದು ಪ್ರಯೋಗ ರೀತಿಯಲ್ಲಿ ಬೆಳೆ ಬೆಳೆಯುತ್ತಾರೆ ಹಾಗೂ ಇದರಿಂದ ಉತ್ತಮ ಫಲಿತಾಂಶ ಕೂಡ ಪಡೆದಿದ್ದಾರೆ. ಈ ಬಾರಿ ಒಂದು ಎಕ್ರೆ ಜಮೀನಿನಲ್ಲಿ ತೀರ್ಥಳ್ಳಿ ಕರಿದಡಿ, ಬಿಳಿ ಸೋನಾ ಮಸೂರಿ ಮುಂತಾದ ಹೊಸ ತಳಿಗಳನ್ನು ನಾಟಿ ಮಾಡಿ ಯಶಸ್ವಿಯಾಗಿದ್ದಾರೆ.
ಕೃಷಿಯಿಂದ ವಿಮುಖವಾಗುವವರಿಗೆ
ಧೈರ್ಯ ತುಂಬುವ ಕಾರ್ಯ
ಕಾರ್ಮಿಕರ ಸಮಸ್ಯೆಯಿಂದ ಕೃಷಿಯಿಂದ ವಿಮುಖವಾಗುವ ಆಲೋಚನೆಯಲ್ಲಿರುವ ರೈತರಿಗೆ ಧೈರ್ಯ ತುಂಬುವ ಇವರು, ಅಂತವರ ಜಮೀನಿಗೆ ತನ್ನದೇ ಕಾರ್ಮಿಕರು, ಟಿಲ್ಲರ್ ಮುಂತಾದ ಸಲಕರಣೆಗಳನ್ನು ತೆಗೆದುಕೊಂಡು ಹೋಗಿ ಅವರ ಶ್ರಮವಿಲ್ಲದಂತೆ ಕಡಿಮೆ ಮೊತ್ತದಲ್ಲಿ ಪ್ರತಿ ವರ್ಷ ಅನೇಕ ರೈತರಿಗೆ ನಾಟಿ, ಕಟಾವು ಮಾಡಿಕೊಡುತ್ತಾರೆ. ಈ ಮೂಲಕ ಅವರಲ್ಲಿ ಕೃಷಿ ಮುಂದುವರಿಸಲು ದೈರ್ಯ ತುಂಬುತ್ತಾರೆ.ಒಟ್ಟಾರೆ ಕೃಷಿ ಲಾಭದಾಯಕವಲ್ಲ, ಕೃಷಿಯಿಂದ ಯಾವುದೇ ಪ್ರಯೋಜನ ವಿಲ್ಲ ಎನ್ನುವವರ ನಡುವೆ ಇಂತಹ ಪ್ರಗತಿಪರ ಕೃಷಿಕರು ಸಮಾಜದಲ್ಲಿ ಮಾದರಿಯಾಗಿ ಕಂಡುಬರುತ್ತಾರೆ.
ಕೃಷಿ ಯಂತ್ರಗಳ ಆವಿಷ್ಕಾರ
ಕೃಷಿ ಕಾರ್ಯವನ್ನು ಸರಳಗೊಳಿಸುವ ಸಲುವಾಗಿ ಇವರೇ ಸ್ವತಃ ಹೊಸ-ಹೊಸ ಯಂತ್ರಗಳ ಆವಿಷ್ಕರಣೆಯಲ್ಲಿ ತೊಡಗುತ್ತಾರೆ. ಆದರಲ್ಲೂ ಇವರು ತಯಾರಿಸಿದ ಭತ್ತ ಬೇರ್ಪಡಿಸುವ ಯಂತ್ರ ಬಹಳ ಜನಪ್ರಿಯತೆ ಗಳಿಸಿದೆ ಹಾಗೂ ಕಳೆ ತೆಗೆಯಲು, ಔಷಧ ಸಿಂಪಡಿಸಲು ಹಲವಾರು ಯಂತ್ರಗಳನ್ನು ತಯಾರಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಕೃಷಿಯಲ್ಲಿ ಕಷ್ಟಪಟ್ಟು ತೊಡಗಿಕೊಂಡರೆ ಖಂಡಿತ ಉತ್ತಮ ಫಲಿತಾಂಶ ಸಿಗುತ್ತದೆ ಹಾಗೂ ಕೃಷಿಯಲ್ಲಿ ಸಾಂಪ್ರದಾಯಿಕ ವಿಧಾನಕ್ಕೆ ಜೋತು ಬೀಳದೆ ಹೊಸ-ಹೊಸ ವಿಧಾನಗಳ ಕುರಿತು ಅವಲೋಕಿಸಬೇಕು ಹಾಗೂ ಒಂದಷ್ಟು ಆವಿಷ್ಕಾರಿ ಮನೋಭಾವನೆ ಅಗತ್ಯ. ಕೆಲವು ಸಂದರ್ಭ ಪ್ರಾಣಿ, ಪಕ್ಷಿಗಳ ಹಾವಳಿಯಿಂದ ಕೃಷಿಯಲ್ಲಿ ನಷ್ಟವಾಗುವ ಸಂಭವವಿರುತ್ತದೆ. ಇವುಗಳ ಹತೋಟಿಗೆ ಸೂಕ್ತ ಕ್ರಮಕೈಗೊಳ್ಳುವ ಅಗತ್ಯವಿದೆ.
– ರವೀಂದ್ರ ಐತಾಳ, ಪ್ರಗತಿಪರ ಕೃಷಿಕರು ಪಾರಂಪಳ್ಳಿ
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naveen D. Padil: ನಟ ನವೀನ್ ಡಿ. ಪಡೀಲ್ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.