ಭಾರತದ 11 ವನಿತೆಯರಿಗೆ ಪ್ರಶಸ್ತಿ
Team Udayavani, Mar 19, 2017, 3:50 AM IST
ಸಿಂಗಾಪುರ: ಸಮಾಜಸೇವೆಗೆ ತಮ್ಮ ಬದುಕನ್ನೇ ಮುಡುಪಿಟ್ಟ ಭಾರತದ 11 ಮಹಿಳೆಯರು ಈ ಬಾರಿಯ “ವಿಮೆನ್ ಐಕಾನ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಿಂಗಾಪುರ ನನ್ಯಾಂಗ್ ತಾಂತ್ರಿಕ ವಿವಿ ನೆರವಿನೊಂದಿಗೆ ಬ್ಯುಸಿನೆಸ್ ಎಕ್ಸೆಲೆನ್ಸ್ ಆಂಡ್ ರಿಸರ್ಚ್ ಗ್ರೂಪ್ ನೀಡುವ ಈ ಪ್ರಶಸ್ತಿ ಪಡೆದ ಏಷ್ಯಾದ 25 ಮಂದಿ ಮಹಿಳೆಯರ ಪೈಕಿ ಭಾರತದ 11 ಮಹಿಳೆಯರೂ ಇದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಾಧಕಿಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಸಶಸ್ತ್ರಪಡೆಯಲ್ಲಿ ದಶಕದ ಕಾಲ ಕಾರ್ಯನಿರ್ವಹಿಸಿ, “ಸಮವಸ್ತ್ರದಲ್ಲಿರುವ ಮಹಿಳೆ’ ಕುರಿತು ಇದ್ದ ಹಲವು ಪೂರ್ವಗ್ರಹಗಳನ್ನು ತೊಡೆದುಹಾಕಿದ, ನಂತರ ಕಾರ್ಪೊರೇಟ್ ಜಗತ್ತಿಗೂ ಲಗ್ಗೆಯಿಟ್ಟ ವಂದನಾ ಶರ್ಮಾ, ಸಾಧಕಿಯರಲ್ಲಿ ಒಬ್ಬರು.
2007ರಲ್ಲಿ ಪತಿ ನಿಧನರಾದ ನಂತರ ಹತ್ತು ತಿಂಗಳ ಕಾಲ ಮುಂಬೈನಲ್ಲಿ ಟ್ಯಾಕ್ಸಿ ಓಡಿಸಿ, ಕುಟುಂಬ ನಿರ್ವಹಣೆ ಮಾಡಿದ ದಿಟ್ಟ ಮಹಿಳೆ ರೇವತಿ ಸಿದ್ಧಾಥೆì ರಾಯ್ ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸ್ತುತ “ಜಫಿ#àರೊ ಲರ್ನಿಂಗ್’ ಎಂಬ ಚಾಲನಾ ತರಬೇತಿ ಕೇಂದ್ರ ನಡೆಸುತ್ತಿರುವ ರೇವತಿ, ನೂರಾರು ಮಹಿಳೆಯರಿಗೆ ದ್ವಿಚಕ್ರವಾಹನ ಚಾಲನೆ ತರಬೇತಿ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ 120 ಮಹಿಳೆಯರು ಬೆಂಗಳೂರು, ಮುಂಬೈನಲ್ಲಿ ಇ-ಕಾಮರ್ಸ್ ಮಾರುಕಟ್ಟೆ ಉತ್ಪನ್ನಗಳ ಪೂರೈಕೆಯಲ್ಲಿ ತೊಡಗಿದ್ದಾರೆ. ಇವರಲ್ಲದೆ, ಡಾ. ಅಪರ್ಣಾ ಹೆಗ್ಡೆ, ಡಾ. ಶ್ರೀಮತಿ ಕೇಶನ್, ದೀಕ್ಷಿತಾ ಸೇರಿ 11 ಭಾರತೀಯರು “ವಿಮೆನ್ ಐಕಾನ್’ ಗೌರವಕ್ಕೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.