10 ಶಾಲೆಗಳಿಗೆ ಹಸಿರು, 10 ಶಾಲೆಗಳಿಗೆ ಹಳದಿ ಪ್ರಶಸ್ತಿ
Team Udayavani, Mar 19, 2017, 5:05 PM IST
ಮಡಿಕೇರಿ: ಉತ್ತಮ ಪರಿಸರ ಮತ್ತು ವೈವಿಧ್ಯಮಯ ಪರಿಸರ ಚಟುವಟಿಕೆಗಳನ್ನು ಅಳವಡಿಸಿ ಕೊಂಡಿರುವ ಸುಂಟಿಕೊಪ್ಪ ಸಮೀಪದ ಗರಗಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಲ್ಪಡುವ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿಗೆ ಆಯ್ಕೆಗೊಂಡಿದೆ.
ಈ ಶಾಲೆಗೆ ಪ್ರಶಸ್ತಿಯೊಂದಿಗೆ ರೂ. 30 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ತಿಳಿಸಿದ್ದಾರೆ.
ದ್ವಿತೀಯ ಸ್ಥಾನ ಪಡೆದ 10 ಹಸಿರು ಶಾಲೆಗಳಿಗೆ ತಲಾ ರೂ. 5 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ 10 ಹಳದಿ ಶಾಲೆಗಳಿಗೆ ತಲಾ ರೂ. 4 ಸಾವಿರ ನಗದು ಬಹುಮಾನ, ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.
ಪರಿಸರ ಮಿತ್ರ ಪ್ರಶಸ್ತಿ ಪಡೆದ ಶಾಲೆಗಳ ವಿವರ
ಹಸಿರು ಶಾಲಾ ಪ್ರಶಸ್ತಿ: ಸರಕಾರಿ ಪ್ರೌಢಶಾಲೆ, ಹಾಕತ್ತೂರು, ಮಡಿಕೇರಿ (ತಾ.), ಸರಕಾರಿ ಪ್ರೌಢ ಶಾಲೆ, ಸುಂಟಿಕೊಪ್ಪ, ಸೋಮವಾರಪೇಟೆ (ತಾ.), ಪಾರಾಣೆ ಪ್ರೌಢಶಾಲೆ, ಪಾರಾಣೆ, ಮಡಿಕೇರಿ (ತಾ.), ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಬಸವನಹಳ್ಳಿ, ಸೋಮವಾರಪೇಟೆ (ತಾ.), ಬಾಲಕಿಯರ ಸರಕಾರಿ ಪ್ರೌಢಶಾಲೆ, ಕುಶಾಲನಗರ, ಸೋಮವಾರಪೇಟೆ (ತಾ.), ಸರಕಾರಿ ಪ್ರೌಢಶಾಲೆ, ಗೋಣಿ ಮರೂರು, ಸೋಮವಾರಪೇಟೆ (ತಾ.), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೋಣಿಮ ರೂರು, ಸೋಮವಾರಪೇಟೆ (ತಾ.), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಕ್ಕೆಸೊಡೂÉರು, ವಿರಾಜಪೇಟೆ (ತಾ.), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಡಿಗೋಡು, ವಿರಾಜಪೇಟೆ (ತಾ.), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳಗದಾಳು, ಮಡಿಕೇರಿ (ತಾ.).
ಹಳದಿ ಶಾಲಾ ಪ್ರಶಸ್ತಿ ಪಡೆದ 10 ಶಾಲೆಗಳು:
ಸರಕಾರಿ ಪ್ರೌಢಶಾಲೆ, ಬಸವನಹಳ್ಳಿ, ಸೋಮವಾರ ಪೇಟೆ (ತಾ.), ಸರಕಾರಿ ಪ್ರೌಢಶಾಲೆ, ಕಡಗದಾಳು, ಮಡಿಕೇರಿ (ತಾ.), ಸರಕಾರಿ ಪ್ರೌಢಶಾಲೆ, ಕಿರಗಂದೂರು, ಸೋಮವಾರಪೇಟೆ (ತಾ.), ಸರಕಾರಿ ಪ್ರೌಢಶಾಲೆ, ತೊರೆನೂರು, ಸೋಮವಾರಪೇಟೆ (ತಾ.), ಸರಕಾರಿ ಪ್ರೌಢಶಾಲೆ, ಸೂರ್ಲಬ್ಬಿ, ಸೋಮವಾರಪೇಟೆ (ತಾ.), ಸರಕಾರಿ ಪ್ರೌಢಶಾಲೆ, ಬೆಸೂರು, ಸೋಮವಾರಪೇಟೆ (ತಾ.), ಸರಕಾರಿ ಪ್ರೌಢಶಾಲೆ, ಮೂರ್ನಾಡು, ಮಡಿಕೇರಿ(ತಾ.), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಚೂರಿಕಾಡು, ವಿರಾಜಪೇಟೆ (ತಾ.), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಣಗೂರು, ಸೋಮವಾರಪೇಟೆ (ತಾ.), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾಟೇಕಾಡು ಹೊದ್ದೂರು, ಮಡಿಕೇರಿ (ತಾ.)
ಶಾಲೆಯ ಕುರಿತ ಮಾಹಿತಿ: ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಭಾಜನಗೊಂಡ ಗರಗಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ಸ್ವತ್ಛ ಸುಂದರ ಪರಿಸರ ಶಾಲೆ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಭಾಜನಗೊಂಡಿರುವ ಸುಂಟಿಕೊಪ್ಪ ಸಮೀಪದ ಗರಗಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸದಾ ಹಸಿರಿನಿಂದ ಕಂಗೊಳಿಸುತ್ತಿದೆ. ಸ್ವತ್ಛ ಹಾಗೂ ಹಸಿರು ಪರಿಸರ ಹೊಂದಿರುವ ಈ ಶಾಲೆಯು ಸುಂಟಿಕೊಪ್ಪದಿಂದ ಮಾದಾಪುರಕ್ಕೆ ತೆರಳುವ ಮಾರ್ಗಮಧ್ಯೆ 4 ಕಿ.ಮೀ.ದೂರದಲ್ಲಿ ಎಡಭಾಗದಲ್ಲಿದೆ.
ಶಾಲೆಯಲ್ಲಿ ಕ್ರಿಯಾಶೀಲ ಮುಖ್ಯೋಪಾಧ್ಯಾ ಯಿನಿ ಎಚ್.ಕೆ. ಪಾರ್ವತಿ ಮತ್ತು ಶಿಕ್ಷಕರ ತಂಡವು ಶಾಲೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ. ಶಿಕ್ಷಕರು ಪ್ರತಿನಿತ್ಯ ವಿದ್ಯಾರ್ಥಿಗಳಲ್ಲಿ ಪಠ್ಯ ಅಭ್ಯಾಸ ದೊಂದಿಗೆ ಪರಿಸರ ಪ್ರಜ್ಞೆ ಬೆಳೆಸುವ ದಿಸೆಯಲ್ಲಿ ಪರಿಸರದ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುತ್ತಿದ್ದಾರೆ.
ಶಾಲೆಯ ಮುಂಭಾಗದಲ್ಲಿ ಸದಾ ಹಸಿರಿನಿಂದ ಕಂಗೊಳಿಸುವ ಸುಂದರವಾದ ಕೈ ತೋಟವಿದೆ. ಕೈ ತೋಟದಲ್ಲಿ ವಿವಿಧ ಬಗೆಯ ಹೂಗಳು ಹಾಗೂ ದಿನನಿತ್ಯ ಬಳಸುವ ಔಷಧೀಯ ಸಸ್ಯಗಳು ಹಾಗೂ ತರಕಾರಿಗಳನ್ನು ಬೆಳೆಸಲಾಗಿದೆ.
ಶಾಲೆಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ಜೈವಿಕ ಹಾಗೂ ಅಜೈವಿಕ ಕಸವನ್ನಾಗಿ ವಿಂಗಡಿಸಲಾಗಿದೆ. ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಸಿತ್ಯಾಜ್ಯ ಮತ್ತಿತರ ಜೈವಿಕ ಕಸದಿಂದ ಕಾಂಪೋಸ್ಟ್ ಮಾಡಲಾಗುತ್ತಿದೆ.
ಘನತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಶಾಲೆಯ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸಲಾಗಿದೆ. ಶಾಲೆಯ ಹಿಂಭಾಗದಲ್ಲಿ ಬೆಳೆಸಿರುವ ಶಾಲಾವನ ನೋಡುಗರನ್ನು ಆಕರ್ಷಿಸುತ್ತಿದೆ ಎಂದು ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ತಿಳಿಸಿದ್ದಾರೆ.
ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಎಚ್.ಕೆ.ಪಾರ್ವತಿ ತಮ್ಮ ಶಿಕ್ಷಕರು ಹಾಗೂ ಮಕ್ಕಳೊಳಗೂಡಿ ಪ್ರತಿನಿತ್ಯ ಸ್ವತ್ಛತಾ ಕಾರ್ಯ ಹಾಗೂ ನೀರು ಮತ್ತು ಕಸದ ನಿರ್ವಹಣೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ.
ಶಿಕ್ಷಕರೊಡಗೂಡಿ ವಿದ್ಯಾರ್ಥಿಗಳೇ ಈ ಎಲ್ಲ ಕಾರ್ಯಗಳನ್ನು ಚಾಚೂತಪ್ಪದೇ ನಿರ್ವಹಿಸುತ್ತಾರೆ. ಮಳೆನೀರು ಮತ್ತು ನಿತ್ಯ ಬಳಸುವ ನೀರನ್ನು ಅಪವ್ಯಯ ವಾಗದಂತೆ ಕೈತೋಟ,ತರಕಾರಿ ತೋಟ ಹಾಗೂ ಗಿಡ-ಮರಗಳಿಗೆ ಹರಿಯಬಿಡಲಾಗಿದೆ.
ವಿಶ್ವ ಪರಿಸರ ದಿನಾಚರಣೆ ಹಾಗೂ ಓಝೊàನ್ ದಿನ ಸೇರಿದಂತೆ ಪರಿಸರಕ್ಕೆ ಸಂಬಂಧಿಸಿದಂತೆ ಎಲ್ಲಾ ದಿನಗಳನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲಾಗುತ್ತಿದೆ.
ಈ ಸಂದರ್ಭ ಮಕ್ಕಳಿಗೆ ಸ್ವತ್ಛತೆ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಭಾಷಣ, ಪ್ರಬಂಧ, ಆಶುಭಾಷಣ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸುವ ಮೂಲಕ ಮಕ್ಕಳು ಸದಾ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುವಂತೆ ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸುತ್ತಿದ್ದಾರೆ.
ಶಾಲೆಯಲ್ಲಿ ಶಾಲಾ ಶಿಕ್ಷಕ ವೃಂದವು ಶೈಕ್ಷಣಿಕ ಚಟುವಟಿಕೆಗಳ ಶ್ರೇಯೋಭಿವೃದ್ಧಿಯೊಂದಿಗೆ ಮಕ್ಕಳನ್ನು ನಿರಂತರವಾಗಿ ಪರಿಸರ ಅಧ್ಯಯನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯವು ಶ್ಲಾಘನೀಯ ಹಾಗೂ ಮಾದರಿಯಾದುದು ಎಂದು ಕಾರ್ಯಕ್ರಮದ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.