ನಗರದಲ್ಲಿ ವಿಶ್ವ ಕೊಂಕಣಿ ಲೋಕ ಕಲಾ ಉತ್ಸವ ಶಿಗ್ಮೋತ್ಸವಕ್ಕೆ ಚಾಲನೆ
Team Udayavani, Mar 19, 2017, 5:29 PM IST
ಮುಂಬಯಿ: ಉಡುಪಿ, ಮಂಗಳೂರು, ಉತ್ತರ ಕನ್ನಡ, ಗೋವಾ, ಕೊಚ್ಚಿನ್ ಕೊಂಕಣಿ ಎನ್ನುವ ಭಿನ್ನತೆಗಳು ನಮ್ಮಲ್ಲಿವೆ. ಆದರೆ ಎಲ್ಲರಲ್ಲೂ ಇರುವ ವಿಚಾರ ಒಂದೇ. ಅದೇನೆಂದರೆ ನಮ್ಮ ಮಾತೃಭಾಷೆ ಕೊಂಕಣಿ. ಇದೇ ನಮ್ಮನ್ನು ವಿಶ್ವಕ್ಕೆ ಪರಿಚುಸಿದೆ. ಆದುದರಿಂದಲೇ ನಾವೆಲ್ಲರೂ ಜಾಗತಿಕವಾಗಿ ಪಸರಿಸಿದರೂ ಕೊಂಕಣಿಗರು ಎಂದೇ ಮಾನ್ಯರೆನಿಸಿದ್ದೇವೆ. ಅದೇ ನಮ್ಮ ಹೆಗ್ಗಳಿಕೆಯಾಗಿದೆ ಎಂದು ನಾಗಲ್ಯಾಂಡ್‌ನ ರಾಜ್ಯಪಾಲ ಪಿ. ಬಿ. ಆಚಾರ್ಯ ನುಡಿದರು.
ಮಾ. 18ರಂದು ಸಂಜೆ ಮಾಹಿಮ್‌ನ ಸಾರಸ್ವತ್ ವಿದ್ಯಾ ಮಂದಿರದ ಏಕನಾಥ್ ಠಾಕೂರ್ ರಂಗಮಂಟಪದ ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇದರ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಫೌಂಡೇಶನ್ ಸಂಸ್ಥೆಯು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ವಿಶ್ವ ಕೊಂಕಣಿ ಲೋಕ ಕಲಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು. ಮಾತೃಭಾಷೆ ಭವಿಷ್ಯ ರೂಪಿಸುವ ಶಕ್ತಿಯನ್ನು ಹೊಂದಿದೆ. ಮಾತƒಭಾಷೆಯ ಮೂಲಕ ಸಮƒದ್ಧಿ ಸಾಧಿಸಿದ ಕೊಂಕಣಿಗರು ಸರ್ವಶ್ರೇಷ್ಠರು. ಭಾರತದ ಅಭಿವೃದ್ಧಿಗೆ ಕೊಂಕಣಿಗರ ಪಾತ್ರವೂ ಮಹತ್ತರವಾಗಿದ್ದು ವಿವಿಧತೆಯಲ್ಲಿ ಏಕತೆ ಕಂಡ ಕೊಂಕಣಿಗರ ಅಭೂತಪೂರ್ವ ಸಾಧನೆ ಸ್ತುತ್ಯರ್ಹ. ಮಾತೃಭಾಷೆ ವ್ಯಕ್ತಿತ್ವದ ವಿಕಾಸಕ್ಕೆ ಮೂಲವಾಗಿದ್ದು, ಮಾನವನ ಗುರುತರ ಸೇವೆಗೆ ಮಾತೃಭಾಷೆ ಅಸ್ಮಿತೆಯಾಗಿದೆ. ಸಂಸ್ಕೃತಿಯ ಅನುಭವ ಆದಾಗ ಮಾತೃ ಭಾಷಾಭಿಮಾನ ತನ್ನಷ್ಟಕ್ಕೇ ಪುಳಕಿತಗೊಳ್ಳುತ್ತದೆ ಎಂದರು.
ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇದರ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋವಾದಲ್ಲಿ ಫಾಲ್ಗುಣಿ ಮಾಸದಲ್ಲಿ ಸಂಭ್ರಮಿಸುವ ಮಹತ್ತರವಾದ ಸಾಂಸ್ಕೃತಿಕ ಉತ್ಸವವೇ ಶಿಗೊ¾àತ್ಸವ. ಇಂತಹ ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ಸಮುದಾಯದ ನಾಯಕತ್ವಕ್ಕಾಗಿ ಇಂತಹ ಕಾರ್ಯಕ್ರಮ ಅವಶ್ಯವಾಗಿದ್ದು, ಕೊಂಕಣಿಯ ಯುವ ಜನತೆಯನ್ನು ಪ್ರೋತ್ಸಾಹಿಸಿದಾಗ ನಮ್ಮ ಭಾಷೆ, ಸಂಸ್ಕೃತಿ ತನ್ನಿಂತಾನೇ ಬೆಳೆಯುವುದು. ಮಾತೃಭಾಷಾ ಪರಿಣತೆಯ ತರಬೇತಿ ಇತ್ಯಾದಿಗಳೊಂದಿಗೆ ನಾವೂ ಭಾಷಾಭಿಮಾನ ಬೆಳೆಸಬೇಕಾಗಿದ್ದು ಇದು ರಕ್ತಗತವಾಗಿ ಮುನ್ನಡೆಯಬೇಕಾಗಿದೆ ಎಂದು ನುಡಿದರು.
ಗೌರವ ಅತಿಥಿಗಳಾಗಿ ಕವಿತಾ ಪಿ. ಆಚಾರ್ಯ ಉಪಸ್ಥಿತರಿದ್ದರು. ಸತೀಶ್ ರಾಮ ನಾಯಕ್, ಉಲ್ಲಾಸ್ ಡಿ.ಕಾಮತ್, ಉಮೇಶ್ ಪೈ, ಟಿ. ವಿ. ಶೆಣೆ„, ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಲಿಯೋ ಫೆರ್ನಾಂಡಿಸ್, ಪಿಲಿಫ್ ಕಾಂಜೂರ್‌ಮಾರ್ಗ್, ಯು.ಎನ್ ಕಿಣಿ, ಬೆನೆಡಿಕ್ಟಾ ರೆಬೆಲ್ಲೊ ಸೇರಿದಂತೆ ನೂರಾರು ಕೊಂಕಣಿ ಕಲಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆದಿಯಲ್ಲಿ ದಿ| ವಿಜಯನಾಥ ಶೆಣೈ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಉತ್ಸವದ ಮುಂಬಯಿ ಸಮಿತಿ ಸಂಚಾಲಕ ಡಾ| ಚಂದ್ರಶೇಖರ್ ಎನ್. ಶೆಣೆ„ ಸ್ವಾಗತಿಸಿದರು. ಕಲಾಕೋಸ್ಟ್ ಬಳಗವು ಮುಕುಂದ್ ಪೈ ನಿರ್ದೇಶನದಲ್ಲಿ ಸ್ವಾಗತ ಗೀತೆಯನ್ನಾಡಿದರು. ಅನುಪಮಾ ಶೆಣೈ ಅವರಿಂದ ಒಡಿಸ್ಸಿ ನೃತರೂಪಕ ನಡೆಯಿತು.
ಸುಧಾ ಶೆಣೆ„ ಮತ್ತು ತಂಡದವರು ಕವಿತಾ ಆಚಾರ್ಯ ಅವರನ್ನು ಗೌರವಿಸಿದರು. ಬಳಿಕ ಕಿಶೋರ್ ಕುಲಕರ್ಣಿ ಅವರ “ಉಪನಿಷದ್’ ಕೃತಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಫೌಂಡೇಶನ್‌ನ ಕಾರ್ಯದಶಿ ಬಿ. ಪ್ರಭಾಕರ್ ಪ್ರಭು, ಕಮಾಲಾಕ್ಷ ಜಿ. ಸರಾಫ್, ಸುಧಾ ಶೆಣೈ ಅತಿಥಿಗಳನ್ನು ಗೌರವಿಸಿದರು. ಉದಯ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಉಪಾಧ್ಯಕ್ಷ ವೆಂಕಟೇಶ್ ಎನ್. ಬಾಳಿಗಾ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಉಪ್ಪಿನಕುದ್ರು ಭಾಸ್ಕರ್ ಕೊಗ್ಗ ಕಾಮತ್ ಬಳಗದಿಂದ ಬೊಂಬೆಯಾಟ ಹಾಗೂ ಮಾಲತಿ ಯು. ಕಾಮತ್ ಮತ್ತು ತಂಡವು ಉಡಿದಾ ಮುಹೂರ್ತ್ ಹೊವ್ಯೊ (ಪಾಡªನ) ಕಾರ್ಯಕ್ರಮ ಪ್ರಸ್ತುತಪಡಿಸಿತು.
ಉದ್ದೇಶಭರಿತ ಜೀವನಕ್ಕೆ ಈ ಉತ್ಸವ ಮಾರ್ಗದರ್ಶಕವಾಗಿದೆ. ಕೊಂಕಣಿ ಮಹಿಳೆಯರೂ ಸಾಧನೆಯ ಮುಂಚೂಣಿಯಲ್ಲಿದ್ದಾರೆ. ದೇಶದಲ್ಲಿ ಕೊಂಕಣಿ ಜನತೆ ಮಾಡಿದಷ್ಟು ಕೆಲಸ ಬೇರ್ಯಾರೂ ಮಾಡಿಲ್ಲ. ಇದನ್ನು ನಾವೆಲ್ಲರೂ ಏಕತೆುಂದ ಮುನ್ನಡೆಸಿ ಕೊಂಕಣಿ ಮೂಲಕ ರಾಷ್ಟ್ರವನ್ನು ಜಾಗತಿಕವಾಗಿ ಮೆರೆಸೋಣ
– ಮೇಡಂ ಪಿಂಟೋ (ಪ್ರವರ್ತಕಿ: ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ).
ಭಾಷೆಗೆ ಪ್ರಾದೇಶಿಕ ವಿಚಾರವಿದ್ದರೂ ಮಾತೃಭಾಷೆ ಎಂದಿಗೂ ಮಾತೃಭಾಷೆಯೇ ಆಗಿರುತ್ತದೆ. ಕೊಂಕಣಿ ವ್ಯಕ್ತಿಗಳು ಸಾಧನೆಯಲ್ಲಿ ನಿಪುಣರು. ಆದ್ದರಿಂದ ಇನ್ನೂ ಕೊಂಕಣಿ ವ್ಯಕ್ತಿಗಳು ಮತ್ತು ಕೊಂಕಣಿ ಸಂಸ್ಥೆಗಳು ಜತೆ ಜತೆಯಾಗಿ ಮುನ್ನಡೆಯಲಿ. ಆ ಮೂಲಕ ಭಾಷೆ ಶಿಖರದತ್ತ ಸಾಗಲಿ
– ಕಿಶೋರ್ ರಂಗ್ನೇಕರ್ (ನಿರ್ದೇಶಕರು : ಸಾರಸ್ವತ್ ಬ್ಯಾಂಕ್).
ಭವಿಷ್ಯತ್ತಿನ ಪೀಳಿಗೆಗೆ ಮಾತೃ ಭಾಷಾ ಅರಿವು ಮೂಡಿಸಲು ಇಂತಹ ಉತ್ಸವಗಳು ಪೂರಕವಾಗಿವೆ. ಸಮಗ್ರ ಜನತೆಯು ಕೊಂಕಣಿಗರನ್ನು ಬುದ್ಧಿವಂತರು, ಗೌರವಾನ್ವಿತರು ಎನ್ನುವಷ್ಟು ನಮ್ಮ ಭಾಷೆ ನಮಗೆ ಗೌರವ ತಂದಿದೆ. ನಿರುದ್ಯೋಗಿಗಳನ್ನೆವುದು ನಮ್ಮಲ್ಲಿ ಇರದೆ ಮಹಿಳೆಯರೂ ಸಮಾನತೆಯತ್ತ ಯೋಚಿಸುವ ಅಗತ್ಯ ನಮಗಿದೆ. ಇದಕ್ಕೂ ಕೊಂಕಣಿ ಭಾಷೆ ಪ್ರೇರಕವಾಗಲಿ -ಉಲ್ಲಾಸ್ ಕಾಮತ್ (ಉದ್ಯಮಿ).
ಕೊಂಕಣಿ ಭಾಷೆ ರಾಷ್ಟ್ರ ಮಾನ್ಯತೆ ಪಡೆದಿರುವುದೇ ಅಭಿನಂದನೀಯ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಕೊಂಕಣಿಗರ ಪಾತ್ರ ಹಿರಿದಾಗಿದೆ. ಇಂತಹ ಭಾಷೆಯ ಉಳಿವು ನಮ್ಮೆಲ್ಲರ ಕರ್ತವ್ಯವಾಗಿದೆ
– ಕಿಶೋರ್ ಕುಲ್ಕರ್ಣಿ (ಕಾರ್ಯಾಧ್ಯಕ್ಷರು: ಎನ್‌ಕೆಜಿಎಸ್‌ಬಿ ಬ್ಯಾಂಕ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.