ಲೂನಾವನ್ನು ಸ್ಟಾರ್ಟ್‌ ಮಾಡಲೂ ಬಾರದ ಕಾಲವೊಂದಿತ್ತು…


Team Udayavani, Mar 21, 2017, 3:45 AM IST

PAGE-4.jpg

ಸೋಮಂತಡ್ಕಕ್ಕೆ ಹೋಗಬೇಕಿತ್ತು. ಅಲ್ಲಿಗಿದ್ದ ಕೊನೆಯ ಜೀಪು ಹೋಗಿಯಾಗಿತ್ತು. “ಅದಕ್ಕೆ ಯಾಕೆ ಯೋಚೆ° ಮಾಡ್ತೀಯ ಮಂಜಣ್ಣ? ಹೆಂಡ್ತೀನ ಕಳ್ಕೊಂಡೋನ ಥರ ಆಡ್ತೀಯಲ್ಲೋ… ತಗೋ…’ ಅಂತ ದೂರದಲ್ಲಿ ನಿಲ್ಲಿಸಿದ್ದ ಸ್ಕೂಟಿ ತೋರಿಸಿ ಕೀ ಎಸೆದಳು ಕ್ಲಾಸ್‌ಮೇಟ್‌ ಸೀಮಾ. ಹುಡುಗಿ ಮುಂದೆ ಅವಮಾನ ಆಗೋದು ಬೇಡ ಅಂತ ಸ್ಕೂಟಿ ಬಿಡಲು ಗೊತ್ತಿರೋನ ಹಾಗೇ ನಟಿಸಿದ್ದೆ.

ಅಪರೂಪದ ಜೀರಿಗೆ ಅಪ್ಪೆಮಿಡಿಯ ಪರಿಮಳವನ್ನು ಸಂಗ್ರಹಿಸಿ ಪಲ್ಯ ಪದಾರ್ಥ ತಂಬುಳಿಗಳಿಗೆ ಉಪಯೋಗಿಸಿ ವರುಷ ಪೂರ್ತಿ ಅಪ್ಪೆಯ ಹಸಿತನವನ್ನು ಉಳಿಸಿ ಊಟವನ್ನು ಮಾವುಮಯ ಮಾಡೋ ವಿಧಾನ ತುಂಬಾನೇ ಇಷ್ಟವಾಯಿತು. ನಾಲಗೆಯಲ್ಲಿನ್ನೂ ಅದ್ರದ್ದೇ ಪರಿಮಳ. 

ಘಟ್ಟದಿಂದ ಇಳಿದು ಬಸೂÅರಿನಿಂದ ಗುಡ್ಡೆಟ್ಟು ದಾರಿಯಾಗಿ ಉಡುಪಿಗೆ ಬರುತ್ತಿದ್ದಾಗ ಅದೇ ದೇವಸ್ಥಾನ ನೋಡಿದೆ. ಅದೇ ಹೊತ್ತು ಸ್ನೇಹಿತ ಅಶ್ವತ್‌ಗೆ ಯಾರದೋ ಕರೆ ಬಂದಿತ್ತು. ಕಾಳಿಂಗನೂ ನಿಂತು ಬಿಟ್ಟ. ಅವ್ರು ಅದೇನೋ ಗಂಭೀರ ಮಾತಲ್ಲಿ ಮುಳುಗಿದ್ದಾಗ  ಜೀಣೊìàದ್ಧಾರವಾಗಿ ತಿಂಗಳು ಕಳೆದಿಲ್ಲವೆಂಬಂತಿದ್ದ ಆ ದೇವಸ್ಥಾನಕ್ಕೊಂದು ಸುತ್ತು ಬಂದೆ. ಫೋಟೋ ತೆಗೆದೆ. ಹಿಂದೆ ನೋಡಿದ್ದುದ್ದರ ನೆನಪಿಗೆ ಹೋಲಿಕೆಯೇ ಇಲ್ಲದಂತೆ ದೇವಸ್ಥಾನ ಮತ್ತದರ ಸುತ್ತಲ ಜಾಗ ಬದಲಾಗಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿಬಂದ ಕಾರಣಕ್ಕೆ ಊರ ಜನರೆಲ್ಲ ಸೇರಿ ಹೊಸ ದೇವಸ್ಥಾನ ಮಾಡಿದ್ದಾರೆ. ಎಲ್ಲವೂ ಕಲ್ಲಿನದು.

ಹೊಸ ದೇವಸ್ಥಾನದ ತೀರ್ಥಮಂಟಪ ಸೊಗಸಾಗಿದೆ. ಹಿಂದೆ ಸಣ್ಣದಿದ್ದ ಮೂರ್ತಿ ಹೊಸತಾಗುವಾಗ ದೊಡ್ಡದನ್ನೇ ಸ್ಥಾಪಿಸಿದ್ದಾರೆ. ತ್ರಿಕಾಲ ಪೂಜೆ. ಶಿವಪ್ಪನಾಯಕನ ಕಾಲದ್ದು ಎನ್ನಲಾಗುವ, ಓದಲಾಗದ ಶಿಲಾ ಶಾಸನ ಹೊರಗೆ ಮರವೊಂದಕ್ಕೆ ಒರಗಿ ನಿಂತಿದೆ. ಕಪ್ಪುಕಟ್ಟಿದ್ದ ಕಲ್ಲನ್ನು ಜೀಣೊìàದ್ಧಾರದ ಹೊತ್ತಲ್ಲಿ ತಿಕ್ಕಿ ತೊಳೆದು ಬೆಳ್ಳಗಾಗಿಸಿದ್ದಾರೆ. ಆದರೆ ಅದರ ಮೇಲೆ ಬರೆದಿರುವ ಲಿಪಿ ಏನೆಂದು ತಿಳಿಯುವುದಿಲ್ಲ. ಹಿಂದೆಯೂ ಪ್ರತಿದಿನ ಪೂಜೆಯಾಗುತ್ತಿತ್ತಂತೆ. ಅಭಿವೃದ್ಧಿ ಇರಲಿಲ್ಲವಷ್ಟೇ. ಆದರೂ ನನಗೆ ಆ ದಿನ ಮತ್ತು ಎರಡು ವರುಷದ ನಂತರದ ಈ ದಿನ ದೇವಸ್ಥಾನವನ್ನು ಕಂಡಾಗ ಅನಿಸೋದು ಇಷ್ಟೇ… ಹಳೆಯದೇ ಚಂದ ಇತ್ತು ಅಂತ.

ಇವತ್ತು ನಾನು ಬುಲೆಟ್ಟು ಬಿಟ್ಕೊಂಡು ಓಡಾಡುತ್ತಿರಬಹುದು. ಆದ್ರೆ ಸ್ಕೂಟಿಯನ್ನು ಸ್ಟಾರ್ಟ್‌ ಮಾಡೋದಕ್ಕೂ ಹರಸಾಹಸ ಪಡುತ್ತಿದ್ದ ಸಮಯವೊಂದಿತ್ತು. ಯಾವೊªà ಅಸೈನ್‌ಮೆಂಟು. ಪ್ರಿಂಟ್‌ ತೆಗು ಬೈಂಡಿಂಗ್‌ ಮಾಡೋವಾಗ ಲೇಟಾಗೋಯ್ತು. ಸೋಮಂತಡ್ಕಕ್ಕೆ ನಾನು ಹೋಗಬೇಕಿತ್ತು. ಅಲ್ಲಿಗಿದ್ದ ಕೊನೆಯ ಜೀಪು ಹೋಗಿಯಾಗಿತ್ತು. “ಅದಕ್ಕೆ ಯಾಕೆ ಯೋಚೆ° ಮಾಡ್ತೀಯ ಮಂಜಣ್ಣ? ಹೆಂಡ್ತೀನ ಕಳ್ಕೊಂಡೋನ ಥರ ಆಡ್ತೀಯಲ್ಲೋ. ತಗೋ…’ ಅಂತ ದೂರದಲ್ಲಿ ನಿಲ್ಲಿಸಿದ್ದ ಸ್ಕೂಟಿ ತೋರಿಸಿ ಕೀ ಎಸೆದಳು ಸೀಮಾ. ಕೊಪ್ಪಳದ ಹುಡುಗಿ. ನನ್ನ ಕ್ಲಾಸ್‌ಮೇಟ್‌.

ಉಜಿರೆಯಲ್ಲಿ ಎಂ.ಸಿ.ಜೆ ಓದುತ್ತಿದ್ದ ದಿನಗಳು. ನಮ್ಮ ರೂಮು ಚಾರ್ಮಾಡಿ ರಸ್ತೆಯಲ್ಲಿ  7 ಕಿ.ಮೀ ದೂರ. ಸೋಮಂತಡ್ಕದ ಕಾಡಿನ ಒಳಗೆ. ವಡಕ್ಕನ್‌ ನರ್ಸರಿ ನಮ್ಮ ಸ್ಟಾಪು.  ಗವರ್ನಮೆಂಟು ಬಸ್ಸಿದೆ. ಆದ್ರೂ ಜನ ಜೀಪುಗಳಲ್ಲೇ  ಹೆಚ್ಚು ಓಡಾಡೋದು. ಆ ಕತ್ತಲಿಗೆ ಏನೂ ಇಲ್ಲ ಅಂದಾಗ ಅವಳ ಸ್ಕೂಟಿ ಇದೆ. ಕೈಯಲ್ಲಿ ಕೀ. ಆಗ ಎಲ್ಲಿವರೆಗಿನ ದಡ್ಡತನವೆಂದರೆ ಕೀ ಹಾಕಿದ್ದೇನೆ. ಸ್ಟಾರ್ಟ್‌ ಮಾಡೋದು ಗೊತ್ತಿರಲಿಲ್ಲ. ಆದ್ರೆ ಹುಡುಗಿ ಮುಂದೆ ಅವಮಾನ ಬೇಡ ಅಂತ ಗೊತ್ತಿರೋನ ಹಾಗೇ ನಟಿಸಿದ್ದೆ. ಆದ್ರೆ ಸ್ಟಾರ್ಟ್‌ ಆಗ್ಬೇಕಲ್ಲಾ.

ಕ್ಲಾಸಲ್ಲಿ ಯಾವತ್ತೂ ಮಲಗೋನು ನಾನು. ಚಂದ್ರಕಲಾ ಮೇಡಂ “ಮಂಜುನಾಥ್‌… ಮಂಜುನಾಥ್‌…’ ಅಂತ ರಾಗವೆಳೆದು ನನ್ನನ್ನು ಎಬ್ಬಿಸೋದನ್ನು ಕೇಳಿ ಕೇಳಿ ಇಡೀ ಕ್ಲಾಸಿಗೆ ಬೇಜಾರಾಗಿತ್ತು. ಆ ಹೊತ್ತಿಗೆ “ಅಯ್ಯೋ ಮಂಜಣ್ಣ ಯಾಕ್‌ ಹೀಗೆ ದಿನಾಲೂ ಬೈಗುಳ ತಿಂತೀಯಾ? ಇನ್ನು ನಾನು ನಿನ್ನ ಜೊತೆ ಕೂರ್ತೆàನೆ. ನಿದ್ದೆ ಬಂದಾಗ್ಲೆಲ್ಲ ಎಬ್ಬಿಸ್ತೇನೆ’ ಅಂತ ಪಕ್ಕ ಕೂತವಳು ಇವತ್ತಿಗೂ ಆತ್ಮೀಯ ಸ್ನೇಹಿತೆ.

ಆದ್ರೆ ಆ ದಿನ ಮಾತ್ರ ಜೀವ ಬಾಯಿಗೆ ಬಂದಿತ್ತು. ಹುಡುಗನಾಗಿ ಸೋಲೊಪ್ಪಬಾರದು. ಸ್ಟಾರ್ಟ್‌ ಆದ್ಮೇಲೆ ಏನೂ ಕಷ್ಟವಿಲ್ಲ. ಅಪರೂಪಕ್ಕೊಮ್ಮೆ, ಮನೆಯಲ್ಲಿದ್ದ ಲೂನಾವನ್ನು ನಾನೇ ಬಿಟ್ಕೊಂಡು ಹೋಗಬೇಕೆಂದಾಗ ಅಪ್ಪನೇ ಸ್ಟಾರ್ಟ್‌ ಮಾಡಿಕೊಡುತ್ತಿದ್ದರು. 

ಈಗ ಇವಳನ್ನೇ, “ಸ್ಟಾರ್ಟ್‌ ಮಾಡಿ ಕೊಡೇ ಸೀಮಾ’ ಅನ್ನಲು ನಾಚಿಕೆ. ಅವಳಿಗೆ ಗೊತ್ತಾಗೊØàಯ್ತು. “ಅಯ್ಯೋ ಮಂಜಣ್ಣ ಮೊದಲೇ ಹೇಳ್ಳೋದಲ್ವಾ?’ ಅಂತ ಸ್ಟಾರ್ಟ್‌ ಮಾಡಿ ಕೊಟ್ಟಳು. ಅಷ್ಟೇ ಅಲ್ಲ, ಸ್ಟಾರ್ಟ್‌ ಮಾಡಲು ಕಲಿಸಿದಳು. ಆಮೇಲೆ ಒಂದು ವರುಷಗಳವರೆಗೆ ಆ ಸ್ಕೂಟಿ ನನ್ನದೇ ಅನ್ನೋ ರೀತಿ ಇತ್ತು. ಆ ಸ್ಕೂಟಿ ಅವಳ ಹತ್ರ ಇರೋಕಿಂತ ಜಾಸ್ತಿ ನನ್ನ ಬಳಿಯೇ ಜಾಸ್ತಿ ಇರುತ್ತಿತ್ತು. 

ಆ ಸ್ಕೂಟೀಲೂ ಚಾರ್ಮಾಡಿ ಹತ್ತಿದ್ದೇನು, ದಿಡುಪೆ ಸುತ್ತಿದ್ದೇನು! ಸೀಮಾ ಯಾವತ್ತೂ ಭೂತದ ಕೋಲವನ್ನು ನೋಡಿಯೇ ಇರಲಿಲ್ಲವಂತೆ. ಅವಳಿಗಾಗಿ ಎಲ್ಲಿ ಕೋಲವಿದೆ ಅಂತ ಹುಡುಕಾಡಿ ಗಡಾಯಿಕಲ್ಲಿನ ಬಳಿ ಯಾವುದೋ ಹಳ್ಳಿಯಲ್ಲಿದ್ದ ಕೊರಗಜ್ಜ ದೈವದ ಕೋಲವನ್ನು ತೋರಿಸಲು ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿಬಂದಿದ್ದೆ. ವಿದ್ಯಾರ್ಥಿಗಳೇ ತಯಾರಿಸುತ್ತಿದ್ದ “ನಮ್ಮೂರ ವಾರ್ತೆ’ ನ್ಯೂಸ್‌ ಬುಲೆಟಿನ್‌ಗಾಗಿ ವಿಡಿಯೋ ತರಲು ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ ಅಂತೆಲ್ಲಾ ಸುತ್ತಿದ್ದೇನು!

ಹೀಗೆ ಸ್ಕೂಟೀಲಿ ಹುಟ್ಟಿದ ಸುತ್ತಾಟದ ಪ್ರೀತಿ ಬುಲೆಟ್‌ವರೆಗೆ ತಲುಪಿದೆ. ಮುಂದೆ ಇಂಡಿಯಾದಿಂದ ಲಂಡನ್ನಿಗೆ ಕಾಳಿಂಗನೊಂದಿಗೆ ಪಯಣಿಸುವ ಕನಸು. ಪಾಕಿಸ್ತಾನ ಸೇರಿದಂತೆ 13 ದೇಶಗಳ ಗಡಿ ದಾಟುವ ಮನಸು. ವಿಶ್ವಶಾಂತಿಗಾಗಿ ನನ್ನದೂ, ಕಾಳಿಂಗನದೂ ಸಣ್ಣದೊಂದು ಪ್ರವಾಸ ಪ್ರಯತ್ನದ ಕನಸೂ ಇದೆ, ಮುಂದೆ. ನೋಡೋಣ…
(ಮುಗಿಯಿತು)

– ಮಂಜುನಾಥ್‌ ಕಾಮತ್‌

ಟಾಪ್ ನ್ಯೂಸ್

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Bomb Threat: ಹೋಟೆಲ್‌, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ

Bomb Threat: ಹೋಟೆಲ್‌, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.