ಸುಳಿಗೆ ಸಿಕ್ಕ ದಿನಗಳು
Team Udayavani, Mar 21, 2017, 3:45 AM IST
ಅದೊಂದು ದಿನ ಅವನನ್ನು ನೋಡಿದೆ. ಯಾಕೋ ಗೊತ್ತಿಲ್ಲ, ಏನೋ ಡಿಫರೆಂಟ್ ಫೀಲಿಂಗ್. ನೋಡಿದಾಕ್ಷಣ, ನನಗಾಗಿ ಹುಟ್ಟಿರೋ ಜೀವ ಇವನು ಅನ್ನಿಸ್ತು . ಲವ್ ಎಟ್ ಫಸ್ಟ್ ಸೈಟ್ ಅಂತಾರಲ್ಲ ಹಾಗೆ. ಮೊದ ಮೊದಲು ಅವನ ಹತ್ತಿರ ಏನೂ ಹೇಳದೆ ಇದ್ರೂ, ಮಾತಾಡದೆ ಇದ್ರೂ ಅವನನ್ನ ನೋಡೋದೇ ನನಗೆ ಒಂಥರಾ ಖುಷಿ ಅನ್ನಿಸ್ತಿತ್ತು. ಅದೇ ಕಾರಣಕ್ಕೋ ಏನೋ, ಒಂದು ನೆಪ ಹುಡುಕುತ್ತ ಅವನನ್ನ ನೋಡೋದು, ಒಂದ್ ಸ್ಟೈಲ್ ಮಾಡೋದೇ ನನ್ನ ದಿನನಿತ್ಯದ ಕೆಲಸ ಆಗೋಯ್ತು… ಏನಾದ್ರು ಅವನು ನನ್ನ ನೋಡಿ ಮುಗುಳ್ನಗೆ ಬೀರಿದ ಅಂದ್ರೆ ಸಾಕು: ಏನೋ ಲೈಫ್ ಅಲ್ಲಿ ತುಂಬಾ ದೊಡ್ಡ ಗಿಫ್ಟ್ ಸಿಕ್ಕ ಹಾಗೆ.
ದಿನ ಕಳೆದ ಹಾಗೆ ತುಂಬಾ ಇಷ್ಟ ಪಡ್ತಾ ಹೋದೆ… ಆದ್ರೆ ಅವನಿಗೆ ಬಾಯಿ ಬಿಟ್ಟು ಹೇಳ್ಳೋದು ಹೇಗೆ? ನಾನು ನಿನ್ನನ್ನು ಇಷ್ಟಪಡ್ತೀನಿ ಅಂದ್ರೆ ಏನು ಅಂದೊRàತಾನೋ? ಅಕಸ್ಮಾತ್, ನನಗೆ ಅಂಥಾ ಫೀಲಿಂಗ್ಸ್ ಇಲ್ಲ ಅಂದುಬಿಟ್ರೆ? ಅವನು ಇಷ್ಟಪಡಲ್ಲ ಅಂದ ಮಾತ್ರಕ್ಕೆ ನಾನು ಅವನನ್ನ ಲವ್ ಮಾಡೋದನ್ನ ಬಿಡೋಕೂ ಆಗಲ್ಲ. ಪ್ರತಿ ದಿನ ಅವನದೇ ಯೋಚನೆ. ಸುರಿಯುವ ಮಳೆಯಲಿ ಕೈ ಕೈ ತಾಗಿಸುತ್ತ ನಡೆಯೋ ಆಸೆ… ಆ ಹಿತವಾದ ಮಳೆಯಲ್ಲಿ ಅವನೊಟ್ಟಿಗೆ ನೆನೆಯೋ ಆಸೆ… ಅವನನ್ನ ಮರೆಯಲಾರದೆ ಇದ್ದಾಗ ಅವನ ನಂಬರ್ ಹೇಗೋ ಸಿಕ್ಕಿತು… ಅವನಿಗೆ ನನ್ನ ಎಲ್ಲ ಫೀಲಿಂಗ್ಸ್ ಹೇಳಲಾ? ಬೇಡವಾ? ಅನ್ನೋ ಯೋಚನೆ.
ಇಷ್ಟೆಲ್ಲ ಗೊಂದಲದ ಮದ್ಯೆನೇ ನನ್ನವನ ಮನ ಸೆಳೆಯಲು ಪ್ರಯತ್ನ ಪಟ್ಟೆ. ಕೊನೆಗೂ ನನ್ನ ಕಡೆ ಒಲಿದ. ಅಂದು ನನ್ನ ಮನಸು ಕದ್ದು ಆಟ ಆಡಿದವ ಇಂದು ನಾನು ಅವನ ಜೀವ ಎನ್ನುವಷ್ಟು ಪ್ರೀತಿಸುತ್ತಿದ್ದಾನೆ.
– ಭೂಮಿ ಭಟ್, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.