150 ವರ್ಷದ ಬಳಿಕ ತೆರೆಯಿತು ಮಠದ ಕೋಣೆ!


Team Udayavani, Mar 21, 2017, 11:31 AM IST

mutt.jpg

ಆಳಂದ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಮುಗಳಿಯಲ್ಲಿರುವ ಪುರಾತನ ವಿರೂಧಿ ಪಾಕ್ಷೇಶ್ವರ ಮಠದ ಕೋಣೆಯೊಂದರ ಮುಚ್ಚಿದ ಬಾಗಿಲನ್ನು 150 ವರ್ಷಗಳ ಬಳಿಕ ತೆರೆಯಲಾಗಿದ್ದು, ಈ ಸಂದರ್ಭದಲ್ಲಿ ವಿಶೇಷ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ಬಾಗಿಲು ತೆಗೆಯಲು ಹೋಗಿ ಹಿಂದಿನ ಶ್ರೀ ವಿರೂಪಾಕ್ಷ ಮಹಾಸ್ವಾಮೀಜಿಗಳಿಗೆ ತೊಂದರೆಯಾಗಿ 7 ದಿನಗಳ ಬಳಿಕ ಲಿಂಗೈಕ್ಯರಾಗಿದ್ದಾರೆ ಎಂದು ಭಾವಿಸಿ ಈವರೆಗೂ ಕೋಣೆ ಬಾಗಿಲು ತೆರೆದಿರಲಿಲ್ಲ.

ಉತ್ತರಾಧಿಕಾರಿ ಶ್ರೀ ಬಸವಲಿಂಗ ದೇವರು ನಂಬಿಕೆ ಮತ್ತು ಶ್ರದ್ಧೆಯೊಂದಿಗೆ ಗದ್ದುಗೆಗೆ ಎರಡು ಹೊತ್ತು ಪೂಜೆ ಮಾಡುತ್ತ,
ಭಕ್ತರ ಒಪ್ಪಿಗೆ ಮೇರೆಗೆ ಎಂಟು ತಿಂಗಳಿಂದ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಠದ ಗದ್ದುಗೆ ಎದುರಿನಲ್ಲಿ ಮಲಗಿದ್ದಾಗ ಕನಸು ಬಿತ್ತು ಎನ್ನಲಾಗಿದೆ. “ಮಠದಲ್ಲಿ ಕತ್ತಲು ತುಂಬಿಕೊಂಡಿದೆ. ಅಭಿವೃದ್ಧಿಗೆ ಗಮನ ಹರಿಸಬೇಕು’ ಎಂದು ಕನಸಿನಲ್ಲಿ ಪ್ರೇರಣೆ ಆಗಿರುವುದನ್ನು ಉತ್ತರಾಧಿಕಾರಿ ಶ್ರೀ ಬಸವಲಿಂಗ ದೇವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಿರಂಗ ಮಾಡಿದರು. ಆಗ ಭಕ್ತರು, “ಬೇಡ, ನೂರಾರು ವರ್ಷಗಳಿಂದ ಹಿಂದಿನ ಸ್ವಾಮಿಗಳಾÂರೂ
ಬಾಗಿಲು ತೆಗೆಸಿಲ್ಲ. ಈಗ ತೆರೆಯುವುದು ಬೇಡ. ಏಳು ಹೆಡೆ ಸರ್ಪವಿದೆ, ಶನಿಕಾಟ ಹತ್ತುತ್ತದೆ’ ಎಂಬ ಆತಂಕ ವ್ಯಕ್ತಪಡಿಸಿದ್ದರು.

ಭಕ್ತರಿಗೆ ತಿಳಿಹೇಳಿದ ಸ್ವಾಮೀಜಿ,
“ಮೂಢನಂಬಿಕೆ ಬೇಡ. ಮಠದ ಕೋಣೆ ಬಳಕೆಗೆ ಬಾರದಂತೆ ಸಮ್ಮನೆ ಬಿಟ್ಟರೆ ಏನು ಪ್ರಯೋಜನ? ತೆಗೆದು ನೋಡೋಣ. ಏನಾದರೂ ಆಗುವುದಿದ್ದರೆ ನನಗೇ ಆಗಲಿ. ಊರವರಿಗೆ ಏನೂ ಆಗುವುದಿಲ್ಲ. ಮೂಢನಂಬಿಕೆ, ಕಂದಾಚಾರ ತೊಡೆದು ಹಾಕಬೇಕು’ ಎಂದು ಮನವೊಲಿಸಿದಾಗ ಭಕ್ತರು ಸಮ್ಮತಿ ಸೂಚಿಸಿದರು. ಬಳಿಕ ಮುಚ್ಚಿದ ಬಾಗಿಲು ತೆರೆದು ಸ್ವತ್ಛ ಮಾಡುವಾಗ ಹಲವು ಮಹತ್ವದ ಸಾಮಗ್ರಿಗಳು ದೊರೆತವು ಎಂದು ಬವಸಲಿಂಗ ದೇವರು ಮಾಹಿತಿ ನೀಡಿದರು.

ಹಲವು ವಸ್ತುಗಳು ಪತ್ತೆ: ಕೋಣೆ ಬಾಗಿಲು ತೆಗೆದು ಉತVನನ ಮಾಡುತ್ತ ಮುಂದುವರಿದಾಗ ಮೊದಲಿಗೆ ಎತ್ತರದ ಕಂಚಿನ ತೇರು, ಗಂಟೆ, ಜಾಗಟೆಗಳು, ಮಂಗಳಾರತಿ ಸಲಕರಣೆಗಳು, ಧೂಪ ಹಚ್ಚುವ ಚಮಚ, ನಾಗದೇವತೆ ಮುಖದ
ಹಿತ್ತಾಳೆ ನಾಗಬಿಂದಿಗೆ, ಹಿತ್ತಾಳೆ ಪಾದುಕೆ, ತ್ರಿಶೂಲ, ಖಡ್ಗ, ದೀಪ, ಗಂಟೆ, ಬೆಳ್ಳೆ, ಕಮಂಡಲ, ತಂಬಿಗೆ, ತಟ್ಟೆ ಹಾಗೂ ನಗಾರಿ, ಆವುಗೆ, ಹೂಕುಂಡ, ದೀಪ ಹಚ್ಚುವ ಪಣತಿ, ರುದ್ರಾಕ್ಷಿ ರುದ್ರದೇವರ ಮೂರ್ತಿ, ತಾಮದ್ರ ನಾಣ್ಯಗಳು ದೊರೆತು
ಅಚ್ಚರಿ ಮೂಡಿಸಿವೆ. 12ನೇ ಶತಮಾನದಲ್ಲಿ ವಚನ ಸಾಹಿತ್ಯ ರಚಿಸಲು ಬಳಸಲಾಗುತ್ತಿದ್ದ ತಾಡೋಲೆ ಕಟ್ಟು ಮತ್ತು ನಿಜಾಮರ ಕಾಲದ ಎಂಟು ನಾಣ್ಯಗಳೂ ದೊರೆತಿವೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Exam

VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.