ಯುವತಿ ಜತೆ ಅಸಭ್ಯ ವರ್ತನೆ: ನಾಲ್ವರ ಸೆರೆ


Team Udayavani, Mar 21, 2017, 12:43 PM IST

sexual-harradmernt.jpg

ಬೆಂಗಳೂರು: “ಸ್ನೇಹಿತನ ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ವಿನಾಕಾರಣ ಜಗಳ ತೆಗೆದು ಸ್ಥಳೀಯರನ್ನು ಗುಂಪುಗೂಡಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಾನೆ,” ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸುಮಾರು 40 ರಿಂದ 45 ಜನರ ಗುಂಪು ತನ್ನ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖೀಸಿದ್ದಾಳೆ.

ಈ ಸಂಬಂಧ ಪೊಲೀಸರು ಸೊಣ್ಣಪ್ಪನಹಳ್ಳಿ ನಿವಾಸಿಗಳಾದ ಮಂಜುನಾಥ್‌(35), ರವಿ (27), ಕೃಷ್ಣ (28) ಹಾಗೂ ಕಲಿಪುರದ ಪ್ರವೀಣ(25)ನನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು ತಿಂಡ್ಲುವಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದಾರೆ. ಭಾನುವಾರ ರಾತ್ರಿ 9ಗಂಟೆ ಸುಮಾರಿಗೆ ಸ್ನೇಹಿತ ಸುಮಲ್ಯ ಗೌತಮ್‌ ಜತೆ ದ್ವಿಚಕ್ರ ವಾಹನದಲ್ಲಿ ಚಿಕ್ಕಜಾಲದ ಬಳಿ ತೆರಳುತ್ತಿದ್ದಾಗ ಎದುರುಗಡೆಯಿಂದ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ಆರೋಪಿ ಮಂಜುನಾಥ್‌  ನಮ್ಮ ವಾಹನಕ್ಕೆ ಡಿಕ್ಕಿ ಹೊಡೆಯುವಂತೆ ಮಾಡಿದ್ದ.

ಇದರಿಂದ ಗಾಬರಿಯಾದ ಗೌತಮ್‌, ಏಕೆ ಈ ರೀತಿ ರಾಂಗ್‌ ರೂಟ್‌ನಲ್ಲಿ ಬರ್ತೀರಾ? ಎಂದು ಅಶ್ಲೀಲ ಪದ ಬಳಸಿದ. ಇದರಿಂದ ಕುಪಿತನಾದ ಮಂಜುನಾಥ್‌, ಗೌತಮ್‌ ಬಳಿ ಬಂದು ದ್ವಿಚಕ್ರ ವಾಹನದ ಕೀ ಕಿತ್ತುಕೊಂಡು ತನ್ನ ಬಗ್ಗೆ ಹಾಗೂ ಗೌತಮ್‌ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಎಂದು ಯುವತಿ ದೂರಿದ್ದಾಳೆ. ಈ ವೇಳೆ ಮಂಜುನಾಥ್‌ ಮತ್ತು ಗೌತಮ್‌ ನಡುವೆ ಹೊಡೆದಾಟ ನಡೆಯಿತು. ಈ ಘಟನೆ ಕಂಡ ಕೂಡಲೇ ಹತ್ತಿರದಲ್ಲೇ ಇದ್ದ  ಪ್ರವೀಣ, ರವಿ, ಕೃಷ್ಣಾ ಸೇರಿದಂತೆ 40ಕ್ಕೂ ಹೆಚ್ಚುಮಂದಿ ಜಮಾಯಿಸಿ ಮಂಜುನಾಥ್‌ ರಕ್ಷಣೆಗೆ ಧಾವಿಸಿದರು. ಅಲ್ಲದೆ ಗುಂಪಿನಲ್ಲಿ  ಕೆಲ ಕಿಡಿಗೇಡಿಗಳು ನನ್ನ ಮೈ ಮುಟ್ಟಿ  ಅಸಭ್ಯವಾಗಿ ವರ್ತಿಸಿದರು.

ಸುಮಾರು ಹತ್ತು ನಿಮಿಷಗಳ ಕಾಲ ನಡೆದ ಈ ತಳ್ಳಾಟ – ನೂಕಾಟದ ನಂತರ, ನಾನು ಮಂಜುನಾಥ್‌ ಬಳಿ ದ್ವಿಚಕ್ರ ವಾಹನದ ಕೀ ಪಡೆದು ಸ್ನೇಹಿತನೊಂದಿಗೆ ತೆರಳಿದೆ ಎಂದು ಪೊಲೀಸರ ಬಳಿ ಯುವತಿ ಘಟನೆ ವಿವರಿಸಿದ್ದಾಳೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರ ಯುವತಿ ಠಾಣೆಗೆ ಬಂದು ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಆರೋಪಿಗಳು ಯುವತಿ ಮೇಲೆ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ನೀಡಿದ ದೂರಿನಲ್ಲಿ ಏನಿದೆ?
ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಕೂಡಲೇ ಫೋನ್‌ ಮಾಡಿ ತನ್ನ ತಾಯಿಗೆ ಮಾಹಿತಿ ತಿಳಿಸಿದ್ದಾಳೆ. ಅಲ್ಲದೆ ಸ್ನೇಹಿತನ ಜತೆ ಚಿಕ್ಕಜಾಲ ಠಾಣೆಗೆ ತೆರಳಿ, ಆರೋಪಿ ಮಂಜುನಾಥ್‌ ಸೇರಿದಂತೆ ಸುಮಾರು 40-45 ಮಂದಿ ವಿರುದ್ಧ ದೂರು ನೀಡಿದ್ದಾಳೆ. “ಸ್ಥಳೀಯರು ಪ್ರಾಣ ಬೆದರಿಕೆಯೊಡ್ಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಜತೆಗೆ ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ನನಗಾದ ಈ ಸ್ಥಿತಿ ಬೇರೆಯವರಿಗೆ ಆಗಬಾರದು. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ,” ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.

ಸ್ಥಳೀಯರ ಆರೋಪ ವಿದ್ಯಾರ್ಥಿನಿ ಮೇಲೆ 
ಆದರೆ, ಪ್ರಕರಣದ ಬಗ್ಗೆ ಪ್ರತ್ಯಕ್ಷದರ್ಶಿಗಳು, ಸ್ಥಳೀಯರು ಹೇಳುವುದೇ ಬೇರೆ. ಇದೊಂದು ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ. ಮಂಜುನಾಥ್‌ ಬೈಕ್‌ ಓಡಿಸಿಕೊಂಡು ಹೋಗುವಾಗ ವಿದ್ಯಾರ್ಥಿನಿಯಿದ್ದ ಮತ್ತು ಗೌತಮ್‌ ಇದ್ದ ಬೈಕ್‌ಗೆ ಆಕಸ್ಮಿಕವಾಗಿ ಅಡ್ಡ ಬಂದಿದ್ದ. ಆಗ ಗೌತಮ್‌, ಹಿಂದಿ ಭಾಷೆಯಲ್ಲಿ ಮಂಜುನಾಥ್‌ ವಿರುದ್ಧ ತೀರ ಕೆಟ್ಟ ಪದ ಪ್ರಯೋಗ ಮಾಡಿದ.

ಇದರಿಂದ ಕೋಪಗೊಂಡ ಮಂಜುನಾಥ್‌ ಗೌತಮ್‌ನನ್ನು ಪ್ರಶ್ನಿಸಿದ್ದ. ಆಗ ಜಗಳ ಆರಂಭವಾಯಿತು. ಈ ವೇಳೆ ಮಂಜುನಾಥ್‌ ಬೈಕ್‌  ಕೀ ಕಿತ್ತುಕೊಂಡ. ಅದೇ ವೇಳೆ ಅಲ್ಲಿದ್ದ ಪ್ರವೀಣ್‌, ಕೃಷ್ಣ ಜಗಳ ಬಿಡಿಸಲೆಂದು ತೆರಳಿದರು. ಅಷ್ಟು ಹೊತ್ತಿಗೆ ಸ್ಥಳೀಯರೆಲ್ಲರೂ ಜಮಾಯಿಸಿದ್ದಾರೆ. ಕೆಲ ಸಮಯದ ವಾಗ್ವಾದದ ನಂತರ ರಾಜೀ ಸಂಧಾನ ನಡೆದು ವಿದ್ಯಾರ್ಥಿನಿ ಹಾಗೂ ಯುವಕನನ್ನು ಜನರೇ ಕಳುಹಿಸಿಕೊಟ್ಟರು.

ಇದಾದ ಬಳಿಕ ವಿದ್ಯಾರ್ಥಿನಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಈ ವಿಷಯ ಗೊತ್ತಾದ ಕೂಡಲೇ ಮಂಜುನಾಥ್‌ ಖುದ್ದಾಗಿ ಠಾಣೆಗೆ ಹೋಗಿ ಪೊಲೀಸರಿಗೆ ನಡೆದ ವಿಷಯ ತಿಳಿಸಿದ್ದ. ಮಂಜುನಾಥ್‌ ಮತ್ತು ಗೌತಮ್‌ ನಡುವೆ ಜಗಳ ನಡೆಯುತ್ತಿದ್ದಾಗ ಸ್ಥಳದಲ್ಲಿದ್ದವರು ಜಗಳ ಬಿಡಿಸಿದರು. ಆದರೆ ವಿದ್ಯಾರ್ಥಿನಿ ಅವರ ಮೇಲೂ ದೂರು ದಾಖಲಿಸಿದ್ದಾಳೆ ಎಂದು ಹೇಳಿದ್ದಾರೆ. 

ಟಾಪ್ ನ್ಯೂಸ್

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

1-tirupati-laddu

Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

1-pavan

Tirupati laddu; ಪ್ರಾಯಶ್ಚಿತ ಎಂಬಂತೆ 11 ದಿನಗಳ ಉಪವಾಸ ಕೈಗೊಳ್ಳಲಿರುವ ಪವನ್ ಕಲ್ಯಾಣ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆ ಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್

LadduCase; ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

2

Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

9

Karkala: ವಿದ್ಯಾರ್ಥಿನಿ ರೂಪಿಸಿದ ವಿಜ್ಞಾನ ಮಾದರಿಗೆ  ರಾಷ್ಟ್ರ ಪ್ರಶಸ್ತಿ ಗರಿ

8

Kundapura-ಬೈಂದೂರು ಹೆದ್ದಾರಿ: ಬೆಳಗದ ಬೀದಿ ದೀಪಗಳು

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

puttige

Puthige Swamiji; ಗೀತಾರ್ಥ ಚಿಂತನೆ 42: ಆನಂದಕ್ಕಾಗಿ ಕೆಲಸ, ಕೆಲಸದಲ್ಲಿ ಆನಂದ

7(1)

Health: ಆಹಾರ ಚೆನ್ನಾಗಿ ಜಗಿದು ನುಂಗಿ ನೆತ್ತಿಗೆ ಹತ್ತದಿರಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.