ನಿರೀಕ್ಷೆಯಲ್ಲೇ ಬಂದು ನಿರೀಕ್ಷೆಯಲ್ಲೇ ಸಾಗುವ ಅಂಬಾರಿ ಆಗದಿರಲಿ..


Team Udayavani, Mar 21, 2017, 3:08 PM IST

hub1.jpg

ಹುಬ್ಬಳ್ಳಿ: ವಿವಿಧ ಹೊಸ ಯೋಜನೆ, ಹಲವು ನಿರೀಕ್ಷೆಗಳನ್ನು ಹೊತ್ತು ತಂದಿರುವ ಮಹಾನಗರ ಪಾಲಿಕೆಯ ಆಯ-ವ್ಯಯ, ಸ್ವಯಂ ಆದಾಯ ವೃದ್ಧಿಗೆ ಗಮನಾರ್ಹ ಯತ್ನ ಕೈಗೊಳ್ಳದೆ, ಕೇಂದ್ರ-ರಾಜ್ಯ ಸರಕಾರಗಳ ಅನುದಾನದ ಅವಲಂಬನೆಯಲ್ಲೇ ಮುಂದುವರಿದಿದೆ. ಹಿಂದಿನಂತೆ ಕೇವಲ ನಿರೀಕ್ಷೆಗಳೊಂದಿಗೆ ಬಂದು ನಿರೀಕ್ಷೆಯಲ್ಲೇ ಸಾಗುವ ಅಂಬಾರಿ ಆಗದಿರಲಿ ಎಂಬುದು ಹಲವರ ಆಶಯ. 

ಪಾಲಿಕೆಯ 2017-18ನೇ ಸಾಲಿನ ಆಯ-ವ್ಯಯ ಹಿಂದಿನ ಬಜೆಟ್‌ ಗಳಿಗಿಂತ ಹೆಚ್ಚು ಗಮನ ಸೆಳೆದಿರುವುದು ಮುಂಗಡಪತ್ರದ ಗಾತ್ರ ಹೆಚ್ಚಳ,  ಜನಪ್ರಿಯ ಘೋಷಣೆಗಳಿಂದ ಅಲ್ಲ ಬದಲಾಗಿ ಅನುಷ್ಠಾನ ಯೋಗ್ಯ ಆಯ-ವ್ಯಯವಿದು ಎಂಬ ಘೋಷಣೆಯಿಂದ. 

ಪರಾವಲಂಬಿ ಸ್ಥಿತಿ: ಸ್ಥಳೀಯ ಸರಕಾರಗಳು ಸ್ವಯಂ ಆದಾಯ ಸೃಷ್ಟಿಗೆ ಒತ್ತು ನೀಡಬೇಕೆಂಬ ಒತ್ತಡದ ನಡುವೆಯೂ ಬಹುತೇಕ ಸ್ಥಳೀಯ ಸರಕಾರಗಳು ಸ್ವಯಂ ಆದಾಯ ಸೃಷ್ಟಿಯ ಸಾಹಸಕ್ಕೆ ಮುಂದಾಗಿಲ್ಲ. ಇದಕ್ಕೆ ಪೂರಕ ಎನ್ನುವಂತೆ ಸುಮಾರು 548 ಕೋಟಿ ರೂ. ಗಾತ್ರದ ಆಯ-ವ್ಯಯ ಮಂಡಿಸಿರುವ ಹು.ಧಾ.ಮಹಾನಗರ ಪಾಲಿಕೆಯ ಸ್ವಯಂ ಆದಾಯ ಕೇವಲ 129.76ಕೋಟಿ ರೂ.ಮಾತ್ರ. 

ಪಾಲಿಕೆ ಆದಾಯ ವೃದ್ಧಿಗೆ ಅವಕಾಶ ಇಲ್ಲವೆಂದಲ್ಲ. ಪ್ರಾಮಾಣಿಕ ಯತ್ನ, ಇಚ್ಛಾಶಕ್ತಿಯ ಕೊರತೆ ಬಹುದೊಡ್ಡ ಅಡ್ಡಿಯಾಗಿದೆ. ಪ್ರತಿ ಆಯ-ವ್ಯಯದಲ್ಲೂ ಸ್ವಯಂ ಆದಾಯ ವೃದ್ಧಿಯ ಪ್ರಸ್ತಾಪ, ಒತ್ತಾಯ, ಭರವಸೆ ಬಂದು ಮಾಯವಾಗಿ, ಮುಂದಿನ ಆಯ- ವ್ಯಯದಲ್ಲಿ ಗೋಚರಿಸುತ್ತವೆ. ಕರ ವಸೂಲಿಗೆ ಆಯಾ ವಿಭಾಗಗಳು, ಸಿಬ್ಬಂದಿ, ಅಧಿಕಾರಿಗಳು ಇದ್ದರೂ ಆಸ್ತಿ ಕರ, ನೀರಿನ ಕರ, ವಾಣಿಜ್ಯ ಶುಲ್ಕಗಳ ಬಾಕಿ ಮೊತ್ತ ಬೆಳೆಯುತ್ತಲೇ ಸಾಗುತ್ತಿದೆ. 

ನೀರಿನ ಕರ ಬಾಕಿ ಮತ್ತು ದಂಡ ಸರಿ ಸುಮಾರು 100 ಕೋಟಿ ರೂ.ಇದೆ. ಮುಖ್ಯವಾಗಿ ಪಾಲಿಕೆಗೆ ತನ್ನ ಆಸ್ತಿ ಎಷ್ಟು, ಅದರ ಮೌಲ್ಯವೇನು ಎಂಬುದರ ಸ್ಪಷ್ಟತೆ ಇಲ್ಲವಾಗಿದೆ. ಹಲವಾರು ದಶಕಗಳ ಹಿಂದೆ ಭೂ ಬಾಡಿಗೆ ರೂಪದಲ್ಲಿ ನೀಡಿದ ಆಸ್ತಿ ಇಂದು ಕೋಟ್ಯಂತರ ರೂ.ಮೌಲ್ಯ ಹೊಂದಿದೆ. ಭೂ ಬಾಡಿಗೆ ಪಡೆದವರಿಗೆ ಕಲ್ಯಾಣ ಮಂಟಪ, ಇನ್ನಿತರ ಕಟ್ಟಡಗಳ ರೂಪದಲ್ಲಿ ನಿರಂತರ ಆದಾಯ ಒದಗಿಸುವ ಕಾಮಧೇನು ಆಗಿದ್ದರೆ, ಭೂಮಿಯ ಮಾಲಿಕ ಪಾಲಿಕೆಗೆ ಬರಡು ಹಸುವಾಗಿ ಗೋಚರಿಸುತ್ತಿವೆ.

ಅನೇಕ ಸದಸ್ಯರು, ಅಧಿಕಾರಿಗಳು ಭೂ ಬಾಡಿಗೆ ಆಸ್ತಿ ಮಾರಾಟಕ್ಕೆ ನೋಡುತ್ತಿದ್ದಾರೆಯೇ ವಿನಃ ಹಿರಿಯರು ಗಳಿಸಿಟ್ಟ ಆಸ್ತಿ ಉಳಿಸಿಕೊಂಡು, ಬರಬೇಕಾದ ವರಮಾನ ವಸೂಲಿಗೆ ಪ್ರಾಮಾಣಿಕ ಯತ್ನ ನಡೆಯುತ್ತಿಲ್ಲ. ಪಾಲಿಕೆ ಒಡೆತನದಲ್ಲಿ ಸುಮಾರು 2600ಕ್ಕೂ ಮಿಕ್ಕ ಆಸ್ತಿಗಳು ಇವೆ. ಒಂದು ರೀತಿಯಲ್ಲಿ “ಎಪ್ಪತ್ತು ಎಕರೆ ಭೂಮಿ ಇದ್ದರೂ ಒಪ್ಪತ್ತು ಊಟಕ್ಕೆ ಗತಿ ಇಲ್ಲ’ ಎಂಬ ಸ್ಥಿತಿಯಲ್ಲಿ ಪಾಲಿಕೆಯದ್ದಾಗಿದೆ. 

ಅದೇ ರೀತಿ ಜಾಹೀರಾತು ಮೂಲದಿಂದ ಏನಿಲ್ಲವೆಂದರೂ ಪಾಲಿಕೆಗೆ ಕನಿಷ್ಠ3ರಿಂದ 5ಕೋಟಿ ರೂ. ಆದಾಯ  ಬರಬಹುದಾಗಿದೆ. ಆದರೆ ಅಧಿಕಾರಿಗಳು ಮಾತ್ರ ಈಗಲೂ ಇನ್ನು 2ಕೋಟಿ ರೂ. ಆಚೆ-ಈಚೆ ಉಳಿದಿದ್ದಾರೆ. ದಿನ ಬೆಳಗಾದರೆ ಜಾಹೀರಾತುಗಳು ಮಹಾನಗರ ತುಂಬೆಲ್ಲ ಹರಡುತ್ತವೆಯಾದರೂ, ಪಾಲಿಕೆಗೆ ಮಾತ್ರ ಆದಾಯ ಬರುತ್ತಿಲ್ಲವಾಗಿದೆ. 

* ಅಮರೇಗೌಡ ಗೋನವಾರ 

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.