4.30 ಕೋಟಿ ರೂ. ಮಿಗತೆ ಆಯ-ವ್ಯಯ ಮಂಡನೆ


Team Udayavani, Mar 21, 2017, 3:11 PM IST

hub2.jpg

ಹುಬ್ಬಳ್ಳಿ: ಮಹಾನಗರ ಪಾಲಿಕೆಯ 2017-18ನೇ ಸಾಲಿಗೆ ಒಟ್ಟಾರೆ 4.30ಕೋಟಿ ರೂ.ಗಳ ಉಳಿತಾಯ ಆಯ-ವ್ಯಯವನ್ನು ಮಂಡಿಸಲಾಗಿದ್ದು, ತೆರಿಗೆ ಹೊರೆ ಇಲ್ಲದೆ ವಿವಿಧ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಒಟ್ಟು 548.26 ಕೋಟಿ ರೂ.ಗಳ ಆದಾಯ ನಿರೀಕ್ಷೆ, 543.95 ಕೋಟಿ ರೂ.ಗಳ ಅಂದಾಜು ವೆಚ್ಚದ ಮುಂಗಡಪತ್ರವನ್ನು ತೆರಿಗೆ ನಿರ್ಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ಸೋಮವಾರ ಮಂಡನೆ ಮಾಡಿದರು. 

ಆದಾಯ ಮೂಲ: ಪಾಲಿಕೆಗೆ ಆದಾಯ ಮೂಲವಾಗಿ ಆಸ್ತಿ ತೆರಿಗೆಯಿಂದ 2017-18ನೇ ಸಾಲಿಗೆ ಅಂದಾಜು 38.70ಕೋಟಿ ರೂ. ಹಾಗೂ ಆಸ್ತಿ ತೆರಿಗೆ ದಂಡವಾಗಿ 6 ಕೋಟಿ ರೂ. ಗಳನ್ನು ನಿರೀಕ್ಷಿಸಲಾಗಿದೆ. ಸ್ಥಿರಾಸ್ತಿ ವರ್ಗಾವಣೆ ಅದಿಭಾರ ಶುಲ್ಕದಿಂದ ಸುಮಾರು 1.40 ಕೋಟಿ ರೂ., ಖಾತೆ ಬದಲಾವಣೆ ಶುಲ್ಕವಾಗಿ 95ಲಕ್ಷ ರೂ., ಉಪಕರಣ ಸೇವಾ ಶುಲ್ಕವಾಗಿ 96ಲಕ್ಷ ರೂ., ವಾಣಿಜ್ಯ ಸಂಕೀರ್ಣ ಬಾಡಿಗೆ ರೂಪದಲ್ಲಿ 4.06 ಕೋಟಿ ರೂ.,

ಕೈಗಾರಿಕೆ ಉದ್ದಿಮೆ ಪರವಾನಗಿಯಿಂದ 5.16ಕೋಟಿ ರೂ., ಸಾರ್ವಜನಿಕ ಕಾಮಗಾರಿ-ರಸ್ತೆ ಕಡಿಯುವುದು, ಭೂಗತ ತಂತಿಗಳ ಬಾಡಿಗೆಯಾಗಿ 13.70 ಕೋಟಿ ರೂ., ಜನನ ಮರಣ ಪ್ರಮಾಣ ಪತ್ರ ಮತ್ತು ಸಾರ್ವಜನಿಕ ಆರೋಗ್ಯದಿಂದ 1.16ಕೋಟಿ ರೂ., ಘನ ತ್ಯಾಜ್ಯ ನಿರ್ವಹಣೆ ಶುಲ್ಕ, ಗೊಬ್ಬರ ಮಾರಾಟದಿಂದ 16.91ಕೋಟಿ ರೂ. ಗಳನ್ನು ನಿರೀಕ್ಷಿಸಲಾಗಿದೆ. ಸಾರ್ವಜನಿಕ ಸೌಲಭ್ಯಗಳು, ನೆಹರು ಮೈದಾನ ಶುಲ್ಕದಿಂದ 21.45ಲಕ್ಷ ರೂ.,

ಮಾರುಕಟ್ಟೆ ಶುಲ್ಕಗಳಿಂದ 1.31ಕೋಟಿ ರೂ., ಜಾಹೀರಾತು ಶುಲ್ಕವಾಗಿ 2.19ಕೋಟಿ ರೂ., ಇತರೆ ರಾಜಸ್ವ ಸ್ವೀಕೃತಿಗಳು, ಒಳಚರಂಡಿ ಶುಲ್ಕ, ಬ್ಯಾಂಕ್‌ ಬಡ್ಡಿ ಇತ್ಯಾದಿಯಾಗಿ 7ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ. ಅದೇ ರೀತಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿವಿಧ ರೀತಿಯ ಅನುದಾನ ರೂಪದಲ್ಲಿ ಸುಮಾರು 255.23 ಕೋಟಿ ರೂ. ಗಳನ್ನು ನಿರೀಕ್ಷಿಸಲಾಗಿದೆ. 

ವೆಚ್ಚದ ಬಾಬತ್ತು: ಪಾಲಿಕೆಯಲ್ಲಿನ ವಿವಿಧ ಕಾರ್ಯಗಳಿಗೆ ವೆಚ್ಚದ ಬಾಬತ್ತಿನಡಿ ಸಿಬ್ಬಂದಿ ವೇತನ, ಸೌಲಭ್ಯಗಳಿಗೆ 57.76ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ. ಹೊರಗುತ್ತಿಗೆ ಮಾನವ ಸಂಪನ್ಮೂಲಕ್ಕೆ 5.62 ಕೋಟಿ ರೂ., ಪಾಲಿಕೆಯಿಂದ ಯೋಜನಾ ವಂತಿಕೆಯಾಗಿ 5ಕೋಟಿ ರೂ., ಘನ ತ್ಯಾಜ್ಯ ನಿರ್ವಹಣೆಗೆ 36 ಕೋಟಿ ರೂ.,

ಸಾರ್ವಜನಿಕ ಬೀದಿ ದೀಪ ನಿರ್ವಹಣೆ ಹಾಗೂ ಅಭಿವೃದ್ಧಿಗೆ 27.81ಕೋಟಿ  ರೂ., ಉದ್ಯಾನವನ ಅಭಿವೃದ್ಧಿಗೆ 11.83ಕೋಟಿ ರೂ., ಒಳಚರಂಡಿ ಮತ್ತು ನಾಲಾಗಳ ಅಭಿವೃದ್ಧಿಗೆ 24.06ಕೋಟಿ ರೂ., ಕಂಪ್ಯೂಟರ್‌ ಇತರೆ ಸಲಕರಣೆಗಳಿಗೆ 1.65 ಕೋಟಿ ರೂ., ಸಾರ್ವಜನಿಕ ಮೂಲಭೂತ ಆಸ್ತಿಗಳ ನಿರ್ವಹಣೆಗೆ 14.26 ಕೋಟಿ ರೂ.,

ಸಾರ್ವಜನಿಕ ಮೂಲಭೂತ ಆಸ್ತಿಗಳ ನಿರ್ಮಾಣ, ಬಂಡವಾಳ ಲೆಕ್ಕ ಶೀರ್ಷಿಕೆಯಡಿ 22.22ಕೋಟಿ ರೂ., ಸಾರ್ವಜನಿಕ ರಸ್ತೆಗಳು, ಕಲ್ಲು ಹಾಸು, ಪಾದಚಾರಿ ರಸ್ತೆ, ರಸ್ತೆಬದಿ ಚರಂಡಿಗೆ 60.77ಕೋಟಿ ರೂ., ನೀರು ಸರಬರಾಜುವಿಗೆ 16.21ಕೋಟಿ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ.  

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.