ಮಕ್ಕಳಿಗಾಗಿ ಕುಡಿತ, ಸಿಗರೇಟು ತ್ಯಜಿಸಲಿರುವ ಶಾರೂಕ್
Team Udayavani, Mar 21, 2017, 4:19 PM IST
ಮುಂಬಯಿ: ಮಕ್ಕಳ ಜತೆಗೆ ಹೆಚ್ಚು ವರ್ಷಗಳನ್ನು ಕಳೆಯುವ ಹಂಬಲದಿಂದ ಕುಡಿತ ಮತ್ತು ಸಿಗರೇಟು ಬಿಟ್ಟು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಮೇರುನಟ ಶಾರೂಕ್ ಖಾನ್ ಹೇಳಿಕೊಂಡಿದ್ದಾರೆ.
ಇಂಡಿಯಾ ಟುಡೇ ಸಮಾವೇಶದಲ್ಲಿ ಭಾಗ ವಹಿಸಿ ಮಾತನಾಡಿದ ಶಾರೂಕ್ ತನ್ನ ಕುಟುಂಬದ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದರು. 50 ವರ್ಷದ ಶಾರೂಕ್ ಚೈನ್ ಸ್ಮೋಕರ್ ಎನ್ನುವದು ಎಲ್ಲರಿಗೂ ಗೊತ್ತಿರುವ ಸಂಗತಿ. ನಡು ಹರೆಯದ ದಾಟಿದ ಬಳಿಕ ಮೂರನೇ ಮಗುವಿನ ತಂದೆಯಾಗಿರುವ ಶಾರೂಕ್‌ಗೆ ಮಗನ ಜತೆಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ ಎಂಬ ವ್ಯಥೆಯೂ ಇದೆಯಂತೆ.
50 ವರ್ಷದಲ್ಲಿ ಮಗುವಿನ ತಂದೆ ಯಾಗುವುದು ಒಂದರ್ಥದಲ್ಲಿ ಉತ್ತಮ. ಇದು ನನ್ನನ್ನು ಜಿವನ್ಮುಖೀಯಾಗಿಸಿದೆ ಮತ್ತು ಮುಗ್ಧತೆ ಮತ್ತು ಪ್ರೀತಿಯನ್ನು ಭಿನ್ನ ದೃಷ್ಟಿಯಿಂದ ನೋಡುವಂತೆ ಮಾಡಿದೆ. ಮುಂದಿನ 20-25 ವರ್ಷಗಳನ್ನು ಮಕ್ಕಳ ಜತೆಗೆ ಹಾಯಾಗಿ ಕಳೆಯುವ ಆಶೆಯಿರುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಿದ್ದೇನೆ. ಕುಡಿತ ,ಸಿಗರೇಟು ಮತ್ತಿತರ ದುಶ್ಚಟಗಳನ್ನು ದೂರ ಮಾಡಲಿದ್ದೇನೆ ಎಂದಿದ್ದಾರೆ.
ಈಗ ಮಕ್ಕಳಿಗಾಗಿ ಕಡಿಮೆ ಕುಡಿಯುತ್ತೇನೆ, ಕಡಿಮೆ ಸಿಗರೇಟು ಸೇದುತ್ತೇನೆ ಮತ್ತು ಹೆಚ್ಚು ವ್ಯಾಯಾಮ ಮಾಡುತ್ತೇನೆ. ಕುಡಿತ ಮತ್ತು ಸಿಗರೇಟನ್ನು ಪೂರ್ತಿಯಾಗಿ ಬಿಟ್ಟು ಆರೋಗ್ಯಕರ ಮತ್ತು ಖುಷಿಯ ಜೀವನ ನಡೆಸಲು ಯೋಚಿಸುತ್ತಿದ್ದೇನೆ ಎಂದು ಹೇಳಿ ದ್ದಾರೆ. 15 ವರ್ಷದ ಬಾಲಕನಿರುವಾಗಲೇ ಹೆತ್ತವರನ್ನು ಕಳೆದುಕೊಂಡಿರುವ ಶಾರೂಕ್‌ಗೆ ಜೀವನದಲ್ಲಿ ತಂದೆತಾಯಿಯ ಮಹತ್ವ ಏನೆಂದು ಚೆನ್ನಾಗಿ ಗೊತ್ತಿದೆ. ತನ್ನ ಮಕ್ಕಳು ಈ ಪ್ರೀತಿ ವಂಚಿರಾಗಬಾರದು ಎಂಬ ಕಾಳಜಿ ಅವರಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.