ಪ್ರಜ್ಞಾವಂತರನ್ನು ಶಾಸನ ಸಭೆಗೆ ಕಳುಹಿಸಿ
Team Udayavani, Mar 21, 2017, 4:27 PM IST
ಅಫಜಲಪುರ: ಕಳೆದ ಎರಡು-ಮೂರು ದಶಕಗಳಿಂದ ಅಫಜಲಪುರದಲ್ಲಿ ಕಾಲೂರಿರುವ ಪಾಳೆಗಾರಿಕೆ ಸಂಸ್ಕೃತಿಗೆ ಮಂಗಳ ಹಾಡಿ ಪ್ರಜ್ಞಾವಂತರನ್ನು ಗೆಲ್ಲಿಸಿ ಶಾಸನ ಸಭೆಗೆ ಕಳುಹಿಸಿ. ಆಗಲೇ ಈ ತಾಲೂಕು ಶಾಪ ಮುಕ್ತವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಗುಡುಗಿದರು.
ಕರವೇ ಜಿಲ್ಲಾಧ್ಯಕ್ಷ ಶಿವಕುಮಾರ ನಾಟೀಕಾರ ಅವರ 31ನೇ ಜನ್ಮದಿನಾಚರಣೆ ಪ್ರಯುಕ್ತ ನಗರದ ನ್ಯಾಷನಲ್ ಹಾಲ್ ನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 42 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರವೇ ಆರಂಭವಾದಾಗಿನಿಂದ ಇವತ್ತಿನವರೆಗೆ ನೆಲ, ಜಲ, ಭಾಷೆ ವಿಷಯದಲ್ಲಿ ಸ್ವಾಭಿಮಾನದಿಂದ ಸಂಘಟನಾತ್ಮಕವಾಗಿ ನಾಡ ಸೇವೆಗೆ ನಿಂತಿದ್ದೇವೆ.
ಅದರಂತೆಈ ತಾಲೂನಲ್ಲಿ ಶಿವಕುಮಾರ ಕೂಡ ಹೋರಾಟಕ್ಕೆ ನಿಂತಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ಹುಡುಗ ಇವತ್ತು ಇಪ್ಪತ್ತು ಮೂವತ್ತು ಸಾವಿರ ಜನರನ್ನು ಸೇರಿಸಿ ಸಾಮೂಹಿಕ ವಿವಾಹ ಮಾಡಿರುವುದು ಸಣ್ಣ ಮಾತಲ್ಲ. ಇದು ನಿಮ್ಮ ಮನೆ ಮಗ ಮಾಡಿರುವುದು. ಅದರಂತೆ ಆತನಿಗೆ ನೀವು ಅಧಿಕಾರವನ್ನು ಕೊಟ್ಟರೆ ಆತ ಇನ್ನಷ್ಟು ಸೇವೆ ಮಾಡುತ್ತಾನೆ ಎಂದು ಹೇಳಿದರು.
ಶಿವಕುಮಾರ ನಾಟೀಕಾರ ಭೀಮಾ ನದಿ ರಕ್ಷಣೆಗೆ ನಿಂತಿದ್ದಾರೆ. ನದಿಯಲ್ಲಿನ ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಭೀಮೆ ರಕ್ಷಣೆಗೆ ಕರವೇ ಸದಾ ಸನ್ನದ್ಧವಾಗಿದೆ. ಸರ್ಕಾರಗಳು ಕೂಡ ನದಿ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಇಲ್ಲದಿದ್ದರೆ ದುರಂತ ದಿನಗಳು ಸಮೀಪಸಲಿವೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ್ಯ ಸ್ವಾಮೀಜಿ, ಬದಲಾವಣೆ ಬಯಸ್ಸುವ ಮನಸ್ಸುಗಳಿಗೆ ಇದೊಂದು ಉತ್ತಮ ಸಮಯ.
ಯಾರೂ ಬದಲಾವಣೆಗೆ ಟೊಂಕ ಕಟ್ಟಿ ನಿಲ್ಲುತ್ತಾರೋ, ಯಾರೂ ಅಭಿವೃದ್ಧಿ ಕುರಿತು ಚಿಂತಿಸುತ್ತಾರೋ.. ಯಾರು ಸಮಾಜಮುಖೀ, ವಿಚಾರವಂತರಾಗಿರುತ್ತಾರೋ ಅಂತಹವರ ಕೈಗೆ ಅಧಿಕಾರವನ್ನು ನೀಡುವುದರಿಂದ ಅ ಭಅಗದ ಮುಂದಿನ ದಿನಗಳ ಉತ್ತಮವಾಗಿರಲಿವೆ ಎಂದು ಹೇಳಿದರು.
ನಾಟೀಕಾರ ಕೇವಲ 31 ವರ್ಷಕ್ಕೆ ಇಷ್ಟು ಜನರನ್ನು ಸಂಪಾದಿಸಿಕೊಂಡಿರುವುದು ಆತನಲ್ಲಿ ಸಂಘಟನಾ ಶಕ್ತಿಯನ್ನು ತೋರುತ್ತದೆ. ಮುಂದಿನ ದಿನಗಳಲ್ಲಿ ಇಷ್ಟು ಜನಮುಖೀಯಾಗಿ ಕೆಲಸ ಮಾಡಲು ಇವತ್ತು ಜನರು ಶಾಶ್ವತ ಅಧಿಕಾರ ನೀಡಿದ್ದಾರೆ. ಸಾಮೂಹಿಕ ವಿವಾಹ ಮಾಡುವ ಮೂಲಕ ಸಾಮಾನ್ಯ ಜನರು ಕೂಡ ಸಮಾಜ ಸೇವೆಗೆ ಶಕ್ತರು ಎನ್ನುವ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.