ಶ್ರೀ ರಜಕ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ
Team Udayavani, Mar 21, 2017, 5:25 PM IST
ಮುಂಬಯಿ: ಶ್ರೀ ರಜಕ ಸಂಘ ಮುಂಬಯಿ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆಯು ಮಾ. 5 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಾಂಜೂರ್ ಮಾರ್ಗ ಪಶ್ಚಿಮದ ಮೆಜಿಸ್ಟಿಕ್ ಕ್ಲಬ್ ಹೌಸ್‌ನಲ್ಲಿ ಜರಗಿತು.
ಅತಿಥಿಗಳಾಗಿ ಪೊವಾಯಿಯ ಸನಾತನ ಧರ್ಮ ಹೈಸ್ಕೂಲ್ ಚೆಂಬೂರಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಪಕಿ ಸರೋಜಾ ಶೆಟ್ಟಿ ಮತ್ತು ಡಾ| ವಾಣಿ ಉಚ್ಚಿಲ್ಕರ್ ಅವರು ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ರಜಕ ಸಂಘದ ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಕುಂದರ್, ಉಪಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್, ಕಾರ್ಯದರ್ಶಿ ಪ್ರೀತಿ ಸಾಲ್ಯಾನ್, ರಜಕ ಸಂಘ ಮುಂಬಯಿ ಸಮಿತಿಯ ಕಾರ್ಯದರ್ಶಿ ಸುಮಿತ್ರಾ ಪಲಿಮಾರು, ಲೈಬ್ರೇರಿಯನ್ ಸುಮಿತಾ ಸಾಲ್ಯಾನ್, ವಿವಿಧ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆಯರುಗಳಾದ ವನಿತಾ ಸಾಲ್ಯಾನ್ ಡೊಂಬಿವಲಿ, ಹೇಮಾ ಕುಂದರ್ ನವಿ ಮುಂಬಯಿ, ಹೇಮಾ ಸಾಲ್ಯಾನ್ ವಸಾಯಿ, ನಳಿನಿ ಕುಂದರ್ ವೆಸ್ಟರ್ನ್ ವಿಭಾಗ, ಶಾಂತಿ ಕುಂದರ್ ಸೆಂಟ್ರಲ್ ಹಾಗೂ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಸುಮಿತ್ರಾ ಬಿ. ಗುಜರನ್, ಶುಭಾ ಡಿ. ಗುಜರನ್ ಉಪಸ್ಥಿತರಿದ್ದರು.
ರಜಕ ಸಂಘದ ಸೆಂಟ್ರಲ್ ಪ್ರಾದೇಶಿಕ ಸಮಿತಿಯ ಬೇಬಿ ಲೇಷ ಅವರು ಹೆಣ್ಣು ಭ್ರೂಣಹತ್ಯೆ ನಿಲ್ಲಿಸಿ ಹೆಣ್ಣು ಮಗುವನ್ನು ಉಳಿಸಿ (ಲಡಿR ಬಚಾವೊ) ಅನ್ನುವ ಸಂದೇಶವನ್ನು ಸಾರುವ ನೃತ್ಯ ರೂಪಕವನ್ನು ಎಲ್ಲರ ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಹೆಣ್ಣು ಮಗಳಿರುವ ಮನೆಯು ಯಾವ ರೀತಿ ಶ್ರೀ ಕೃಷ್ಣ ನೆಲೆಸಿರುವ ನಂದ® ವನದಂತೆ ಕಂಗೊ ಳಿಸುತ್ತಿರುತ್ತದೆ ಎನ್ನುವುದನ್ನು ವಸಾಯಿ ಮಹಿಳಾ ವಿಭಾಗದ ಸದಸ್ಯೆಯರು ಜಾನಪದ ಸಮೂಹಗೀತೆ ಹಾಡಿದರು. ಸೆಂಟ್ರಲ್ ವಿಭಾಗದ ಬೇಬಿ ರಶ್ಮಿತಾ ಅವರಿಂದ ಲಾವಣಿ ನೃತ್ಯ ಡೊಂಬಿವಿಲಿ, ವಸಾಯಿ, ಸೆಂಟ್ರಲ್, ನವಿ ಮುಂಬಯಿ, ಪಶ್ಚಿಮ ವಿಭಾಗದ ಮಹಿಳೆಯರಿಂದ ಜಾನ ಪದ, ದೇಶಭಕ್ತಿ, ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರ ವೇರಿತು.
ಸರೋಜಾ ಶೆಟ್ಟಿ ಅವರು ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಮಾತನಾಡಿದರಲ್ಲದೆ ಮಕ್ಕಳ ಪರೀಕ್ಷೆಯ ಸಮಯದಲ್ಲಿ ಪೋಷಕರು ಅವರಿಗೆ ಯಾವ ರೀತಿ ಮಾರ್ಗದರ್ಶನ ನೀಡಬೇಕು, ಮೊಬೈಲ್ ಫೋನಿನಿಂದ ಹೇಗೆ ದೂರ ಇಡಬೇಕು ಅನ್ನುವುದನ್ನು ತಿಳಿಸಿದರು.
ಡಾ| ವಾಣಿ ಉಚ್ಚಿಲ್ಕರ್ ಮಾತನಾಡಿ ಮಹಿಳೆಯರು ತುಳು ಭಾಷೆ, ತುಳುನಾಡಿನ ಸಂಸ್ಕೃತಿ ಮರೆಯಾಗದಂತೆ ಅದನ್ನು ಹೇಗೆ ಪಾಲಿಸಬೇಕು ಎಂಬುವುದನ್ನು ತಿಳಿದುಕೊಳ್ಳಬೇಕು. ಇದರಿಂದ ತುಳುನಾಡಿನ ಭಾಷೆ, ಸಂಸ್ಕೃತಿ, ಸಂಸ್ಕಾರಗಳು ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರು ಒಂದಾಗಿ, ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ರಜಕ ಸಂಘದ ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಕುಂದರ್ ಅವರು, ಅರಸಿನ ಕುಂಕುಮದ ಮಹತ್ವವನ್ನು ತಿಳಿಸಿದರು. ಆನಂತರ ಮಹಿಳಾ ವಿಭಾಗದ ಸದಸ್ಯೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಮಹಿಳಾ ಪದಾಧಿಕಾರಿಗಳು ಅತಿಥಿಗಳನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ದೇಣಿಗೆ ನೀಡಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಯಶ್ರೀ ಕುಂದರ್ ಸ್ವಾಗತಿಸಿದರು. ಸುಮಿತ್ರಾ ಪಲಿಮಾರ್ ಕಾರ್ಯಕ್ರಮ ನಿರೂಪಿಸಿದರು. ಲಲಿತ ಸಾಲ್ಯಾನ್ ವಂದಿಸಿದರು.
ಚಿತ್ರ – ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.