ಮೈಲಾಟಿ ಸ್ಪಿನ್ನಿಂಗ್‌ ಮಿಲ್‌ : ತುಕ್ಕು ಹಿಡಿಯುತ್ತಿರುವ ಯಂತ್ರಗಳು


Team Udayavani, Mar 21, 2017, 6:03 PM IST

tukku.jpg

ಕಾಸರಗೋಡು: ಸಾಕಷ್ಟು ಮಂದಿಗೆ ಉದ್ಯೋಗ ಕಲ್ಪಿಸ ಬಹುದಾಗಿದ್ದ ಸ್ಪಿನ್ನಿಂಗ್‌ ಮಿಲ್‌ ಇನ್ನೂ ಕಾರ್ಯಾರಂಭಗೊಳ್ಳದಿರುವುದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರಗಳು ತುಕ್ಕು ಹಿಡಿದು ನಾಶದ ಅಂಚಿಗೆ ಸರಿಯುತ್ತಿವೆೆ.

ಮೈಲಾಟಿಯಲ್ಲಿ 24.84 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಉದುಮ ಸ್ಪಿನ್ನಿಂಗ್‌ ಮಿಲ್‌ 2011ರ ಜನವರಿ 28ರಂದು ಅಂದಿನ ಕೈಗಾರಿಕಾ ಸಚಿವ ರಾಗಿದ್ದ ಎಳಮರಂ ಕರೀಂ ಉದ್ಘಾಟಿಸಿದ್ದರು. ಕೇವಲ ಏಳು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ತಿಗೊಳಿಸಿದ ಈ ಮಿಲ್‌ನ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿಕೊಳ್ಳಲಾಗಿತ್ತು. ಆದರೆ ಇನ್ನೂ ಸ್ಪಿನ್ನಿಂಗ್‌ ಮಿಲ್‌ ಕಾರ್ಯಾರಂಭ ಗೊಳ್ಳದೆ ಇರುವುದರಿಂದ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಿದ್ದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜೋಡಿಸಿದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಕೇರಳ ಟೆಕ್ಸ್‌ಟೈಲ್‌ ಕೋರ್ಪರೇಶನ್‌ ಸ್ವಾಧೀನದಲ್ಲಿರುವ ಉದುಮ ಸ್ಪಿನ್ನಿಂಗ್‌ ಮಿಲ್‌ನಂತೆ ಅದೇ ವರ್ಷದಲ್ಲಿ ಆಲಪ್ಪುಳದ ಹರಿಪಾಡ್‌ ಮತ್ತು ಕಣ್ಣೂರು ಜಿಲ್ಲೆಯ ಪಿಣರಾಯಿಯಲ್ಲಿ ಮಿಲ್‌ಗ‌ಳನ್ನು ಸ್ಥಾಪಿಸಲಾಗಿತ್ತು. ಈ ಮಿಲ್‌ಗ‌ಳು ಉದ್ಘಾಟನೆಗೊಳ್ಳದೆ ಇದೇ ಅವಸ್ಥೆಯಲ್ಲಿವೆೆ.

ಎಡರಂಗ ಸರಕಾರದಲ್ಲಿ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಇ.ಪಿ. ಜಯರಾಜನ್‌ ಅವರ ಮೊದಲ ಭರವಸೆಯಾಗಿತ್ತು ಉದುಮ ಸ್ಪಿನ್ನಿಂಗ್‌ ಮಿಲ್‌ ತೆರೆಯುವುದು. ಎಡರಂಗ ಸರಕಾರ ಅಧಿಕಾರಕ್ಕೆ ಬಂದರೆ “ಎಲ್ಲವೂ ಸರಿಯಾಗುವುದು’ ಎಂಬ ಭರವಸೆ ಯನ್ನು ನೀಡಿದ್ದರೂ, ಈ ವರೆಗೂ ಈ ಮಿಲ್‌ಗೆ ಮೋಕ್ಷ ಲಭಿಸಿಲ್ಲ. ಸರಕಾರದ ಭರವಸೆಯಂತೆ ಜನರು ಈ ಮಿಲ್‌ ತೆರೆಯುವುದನ್ನು ಎದುರು ನೋಡುತ್ತಿದ್ದಾರೆ.

ಕಾಸರಗೋಡು ಜಿಲ್ಲೆಯ ಅಭಿ ವೃದ್ಧಿಗೆ ಈ ಮಿಲ್‌ನಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಿ ದ್ದರೂ, ನಿರೀಕ್ಷೆಗಳೆಲ್ಲ ಹುಸಿಯಾಗಿ ಯಂತ್ರಗಳು ನಾಶವಾಗುತ್ತಿವೆೆ. ವಿದ್ಯುತ್‌ ಬಿಲ್‌ ಪಾವತಿಸಲು ಬಾಕಿ ಯಿರುವುದರಿಂದಾಗಿ ವಿದ್ಯುತ್‌ ಸಂಪರ್ಕವನ್ನು ಕಡಿಯಲಾಗಿದೆ. ವಿದ್ಯುತ್‌ ಸಂಪರ್ಕ ಕಡಿದಿರುವುದರಿಂದ ಹಲವು ಯಂತ್ರಗಳು ಕೆಟ್ಟುಹೋಗಿವೆೆ. ಅತ್ಯಾಧುನಿಕ ಯಂತ್ರವಾದ “ಓಪನ್‌ ಎಂಡ್‌’ ಯಂತ್ರವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು.

ಹಿಂದಿನದು ನಮಗೇಕೆ?: ಹೊಸ ಸರಕಾರದ ಧೋರಣೆ
ಹಿಂದಿನ ಯುಡಿಎಫ್‌ ಸರಕಾರ ಅಧಿಕಾರಕ್ಕೆ ಬರುವ ಕೆಲವೇ ತಿಂಗಳ ಹಿಂದೆ ಮಿಲ್‌ನ್ನು ಉದ್ಘಾಟಿಸಲಾಗಿತ್ತು. 160 ಮಂದಿಗೆ ಉದ್ಯೋಗ ಕಲ್ಪಿಸುವ ಅವಕಾಶವಿತ್ತು. ಉದ್ಯೋಗಕ್ಕಾಗಿ ಎಡರಂಗ ಸರಕಾರ 100ರಷ್ಟು ಮಂದಿ ಯನ್ನು ಆಯ್ಕೆ ಮಾಡಿ ತರಬೇತಿ ಗಾಗಿ ಕಳುಹಿಸಿತ್ತು. ನೇಮಕಾತಿ ನಡೆಯುವ ಹೊತ್ತಿಗೆ ಚುನಾವಣೆ ಘೋಷಣೆಯಾಗಿತ್ತು. ಅಧಿಕಾರಕ್ಕೆ ಬಂದ ಯುಡಿಎಫ್‌ ಸರಕಾರ ಎಲ್‌ಡಿಎಫ್‌ ಸರಕಾರ ನೇಮಕಾತಿಗಾಗಿ ಉದ್ದೇಶಿಸಿದ ವ್ಯಕ್ತಿಗಳನ್ನು ನೇಮಿ ಸಲು ಹಿಂದೇಟು ಹಾಕಿತು. ಈ ಹಿನ್ನೆಲೆಯಲ್ಲಿ ಉದ್ಯೋಗಾರ್ಥಿಗಳು ಹೈಕೋರ್ಟ್‌ ಮೊರೆ ಹೋಗಿದ್ದು, ಕಳೆದ ಆರು ವರ್ಷಗಳಿಂದ ಅಂತಿಮ ತೀರ್ಮಾನವಾಗದೆ ನ್ಯಾಯಾಲಯದ ಪರಿಗಣನೆಯಲ್ಲಿದೆ.

ಉದೋಗಾರ್ಥಿಗಳ ನೇಮಕಾತಿಯ ಬಗ್ಗೆ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿರುವುದರಿಂದಾಗಿ ಸ್ಪಿನ್ನಿಂಗ್‌ ಮಿಲ್‌ ಆರಂಭಿಸಲು ವಿಳಂಬವಾಗುತ್ತಿದೆ ಎಂಬುದಾಗಿ ಕಾರಣ ನೀಡಲಾಗುತ್ತಿದೆ. “ಟ್ರಯಲ್‌ ರನ್‌’ ನ ಬಳಿಕ ಮುಚ್ಚಲ್ಪಟ್ಟ ಮಿಲ್‌ನ ತಾಂತ್ರಿಕ ವಿಭಾಗದಲ್ಲಿ ನೇಮಿತರಾದ ಕ್ವಾಲಿಟಿ ಮೆನೇಜರ್‌, ಕಮರ್ಶಿಯಲ್‌ ಮೆನೇಜರ್‌, ಎಚ್‌.ಆರ್‌. ಮೆನೇಜರ್‌, ಮೈಂಟೆನೆನ್ಸ್‌ ಮೆನೇಜರ್‌, ಪ್ರೊಜೆಕ್ಟ್ ಮೆನೇಜರ್‌ ಮೊದಲಾದ ಹುದ್ದೆಗಳಲ್ಲಿದ್ದವರು ವಿವಿಧ ಇಲಾಖೆಗಳಿಗೆ ವರ್ಗಾವಣೆ ಗೊಳ್ಳುವುದರೊಂದಿಗೆ ಈ ಸಂಸ್ಥೆಯಲ್ಲಿ ಇದೀಗ ಕೇವಲ ಕಾವಲುಗಾರನೋರ್ವ ಮಾತ್ರ ಉಳಿದುಕೊಂಡಿದ್ದಾರೆ. ಫಿಟ್ಟರ್‌ಗಳು, ಇಲೆಕ್ಟ್ರಿಶಿಯನ್‌ಗಳೆಲ್ಲ ಉದ್ಯೋಗ ಬಿಟ್ಟು ಹೋದರು.

ಹತ್ತಿಯಿಂದ ನೂಲು ತಯಾರಿಸಿ ಇವುಗಳನ್ನು ಬಟ್ಟೆ ಹೆಣೆಯುವ ಮಿಲ್‌ ಗಳಿಗೆ ಕಳುಹಿಸಬೇಕು. ಆದರೆ ಇಲ್ಲಿ ಈ ವರೆಗೂ ನೂಲು ಉತ್ಪಾದನೆ ಯಾಗದಿರುವುದರಿಂದ ಮಿಲ್‌ನ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ಸ್ಪಿನ್ನಿಂಗ್‌ ಮಿಲ್‌ನ ಭವಿಷ್ಯ ಏನು ಎಂಬ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಈಗಾಗಲೇ ಕೇರಳದಲ್ಲಿ ಮುಚ್ಚಲ್ಪಟ್ಟ ಸಾರ್ವ ಜನಿಕ ಫ್ಯಾಕ್ಟರಿಗಳನ್ನು ಶೀಘ್ರವೇ ತೆರೆಯುವುದಾಗಿ ದಿನಗಳ ಹಿಂದೆ ರಾಜ್ಯ ಸರಕಾರದ ಸಚಿವ ಸಂಪುಟ ಘೋಷಿಸಿದ್ದರೂ, ಈ ಯಾದಿಯಲ್ಲಿ ಉದುಮ ಸ್ಪಿನ್ನಿಂಗ್‌ ಮಿಲ್‌ ಇಲ್ಲದಿರು ವುದು ಕಾಸರಗೋಡಿನ ಜನರನ್ನು ನಿರಾಸೆಗೊಳಿಸಿದೆ.

ಟಾಪ್ ನ್ಯೂಸ್

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

virat-sachin-Dhoni

Brand Value: ಬಾಲಿವುಡ್‌ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ!

Panth–Iyer

IPL Auction: 27 ಕೋ. ರೂ. ಒಡೆಯ ರಿಷಭ್‌ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್‌ ಮೂಲಕ ನಕ್ಸಲ್‌ ಸೋಮನ್‌ ವಿಚಾರಣೆ

court

Kasaragod: 300 ಪವನ್‌ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

1

Udupi: ಪೊಲೀಸ್‌ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.