ಬೆಂಗ್ಳೂರು 3ನೇ ಅತಿ ಅಗ್ಗದ ನಗರಿ!
Team Udayavani, Mar 22, 2017, 3:50 AM IST
ನವದೆಹಲಿ: ವಿಶ್ವದ ಅತಿ ಅಗ್ಗದ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ 3ನೇ ಸ್ಥಾನ! ಆರ್ಥಿಕ ಗುಪ್ತಚರ ಘಟಕ (ಯುಐಯು) ಈ ಪಟ್ಟಿ ತಯಾರಿಸಿದ್ದು, ಚೆನ್ನೈಗೆ 6ನೇ ಸ್ಥಾನ, ಮುಂಬೈ 7 ಮತ್ತು ನವದೆಹಲಿಗೆ 10ನೇ ಸ್ಥಾನ ಲಭ್ಯವಾಗಿದೆ. ನಗರವಾಸಿಗಳ ಜೀವನಶೈಲಿ, ವಾಸಯೋಗ್ಯ ಸ್ಥಳ, ಜೀವನ ನಿರ್ವಹಣೆ ವೆಚ್ಚ ಮುಂತಾದ ಸಂಗತಿಗಳನ್ನು ಮಾನದಂಡವಾಗಿರಿಸಿಕೊಂಡು ಈ ಪಟ್ಟಿ ಸಿದ್ಧಪಡಿಸಲಾಗಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯನ್ನೂ ಯುಐಯು ತಯಾರಿಸಿದ್ದು, ನಂ.1 ಸ್ಥಾನ ಸಿಂಗಾ ಪುರದ ಪಾಲಾಗಿದೆ. 4ನೇ ಸ್ಥಾನದಲ್ಲಿ ಟೊಕಿಯೊ, ಒಸಾಕಾ 5, ಸಿಯೋಲ್ 6ನೇ ಸ್ಥಾನದಲ್ಲಿದ್ದು, ಕಳೆದವರ್ಷ ಲಕ್ಷುರಿ ಸಿಟಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಲಾಸ್‌ಏಂಜಲೀಸ್ ಈ ಬಾರಿ 11ನೇ ಸ್ಥಾನಕ್ಕೆ ಕುಸಿದಿದೆ.
ಆನಂದಭರಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 122ನೇ ಸ್ಥಾನ!
ಲಂಡನ್: ವಿಶ್ವದ ಸಂತೋಷಭರಿತ ದೇಶಗಳ ಪಟ್ಟಿಯಲ್ಲಿ ಭಾರತ 3 ಸ್ಥಾನ ಕುಸಿತ ಕಂಡಿದ್ದು, 122ನೇ ಸ್ಥಾನ ಅಲಂಕರಿಸಿದೆ. ಅಚ್ಚರಿಯೆಂದರೆ, ನೆರೆಯ ರಾಷ್ಟ್ರ ಪಾಕಿಸ್ತಾನ 80ನೇ ಸ್ಥಾನ, ಇರಾಕ್ 117ನೇ ಸ್ಥಾನದಲ್ಲಿದ್ದು, ಭಾರತವನ್ನು ಹಿಂದಿಕ್ಕಿವೆ!
ಜಿಡಿಪಿ, ಭ್ರಷ್ಟಾಚಾರ, ಅಭಿವೃದ್ಧಿ ಮುಂತಾದ ಸಂಗತಿ ಆಧರಿಸಿ ತಯಾರಿಸುವ ಹ್ಯಾಪಿನೆಸ್ ಪಟ್ಟಿ ಇದಾಗಿದ್ದು, ಕಳೆದವರ್ಷ ಭಾರತ 118ನೇ ಸ್ಥಾನದಲ್ಲಿತ್ತು. ಡೆನ್ಮಾರ್ಕ್ ಅನ್ನು 3ನೇ ಸ್ಥಾನಕ್ಕೆ ತಳ್ಳಿ, ನಾರ್ವೆ ವಿಶ್ವದ “ಅತ್ಯಂತ ಆನಂದಭರಿತ ರಾಷ್ಟ್ರ’ ಎಂಬ ಹಿರಿಮೆಗೆ ಪಾತ್ರವಾಗಿದೆ. 79ನೇ ಸ್ಥಾನದಲ್ಲಿ ಚೀನಾ, ನೇಪಾಳ 99, ಶ್ರೀಲಂಕಾ 120ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.