ಶಿರಾಡಿ ರಸ್ತೆ: ಮಾರ್ಚ್ ಅಂತ್ಯದೊಳಗೆ ನಿರ್ವಹಣಾ ಕಾಮಗಾರಿ ಪ್ರಾರಂಭ
Team Udayavani, Mar 22, 2017, 11:55 AM IST
ಮಂಗಳೂರು: ಶಿರಾಡಿ ಘಾಟಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣಾ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಕೈಗೊಂಡು ಈ ರಸ್ತೆಯನ್ನು ಪೂರ್ಣವಾಗಿ ವಾಹನ ಸಂಚಾರಕ್ಕೆ ಯೋಗ್ಯವಾಗಿಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಡಾ| ಎಚ್.ಎಸ್. ಮಹದೇವಪ್ಪ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ಐವನ್ ಡಿ’ಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿರಾಡಿ ಘಾಟಿಯ 2ನೇ ಹಂತದ ಕಾಮಗಾರಿ (90. 27 ಕೋ.ರೂ. ಅನುದಾನ) ನಿರ್ವಹಿಸಬೇಕಾದ ಗುತ್ತಿಗೆದಾರರು ಕಾಮಗಾರಿ ವ್ಯವಸ್ಥೆಯನ್ನು ಪೂರ್ಣ
ವಾಗಿ ಸಮಯಕ್ಕೆ ಸರಿಯಾಗಿ ಸಿದ್ಧಗೊಳಿಸದ ಹಿನ್ನೆಲೆಯಲ್ಲಿ ಅವರ ಟೆಂಡರ್ ರದ್ದುಗೊಳಿಸಲಾಗಿದೆ. ಈ ಕಾಮಗಾರಿಗೆ ಮರು ಟೆಂಡರ್ ಕರೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುರಂಗ ಮಾರ್ಗ: ಮುಂದಿನ ವರ್ಷ ಟೆಂಡರ್ ?
ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ಕಾಮಗಾರಿಗಾಗಿ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯದವರು ಸಾಧ್ಯಾಸಾಧ್ಯತೆ ಹಾಗೂ ಡಿಪಿಆರ್ ಕಾರ್ಯಕ್ಕೆ 10.15 ಕೋ.ರೂ. ಅನುದಾನವನ್ನು ಮಂಜೂರು ಮಾಡಿದ್ದಾರೆ. ಮೆ| ಜಿಯೋ ಕನ್ಸಲ್ಟೆಂಟ್ ಗುರಗಾಂವ್ ಅವರನ್ನು ಈ ಕಾಮಗಾರಿಯ ಸಾಧ್ಯತಾ ವರದಿ ನೀಡಲು ನೇಮಿಸಲಾಗಿತ್ತು. ವರದಿಗಳನ್ನು ರಾಜ್ಯ/
ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ. ಮತ್ತು ಜಿಯೋ ಟೆಕ್ನಿಕಲ್ (ಭೂ ವಿಜ್ಞಾನ) ಅಧ್ಯಯನವನ್ನು ತಯಾರಿಸಲಾಗುತ್ತಿದೆ. ಸುರಂಗ ಹಾಗೂ ಸೇತುವೆ ಬರುವ ಸ್ಥಳದಲ್ಲಿ ಭೂರಂಧ್ರಗಳನ್ನು ಕೊರೆದು 29 ಬೋರ್‌ವೆಲ್‌ಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಈ ವರದಿಯನ್ನು ಜುಲೈ ವೇಳೆಗೆ ಸಲ್ಲಿಸಲಾಗುವುದೆಂದು ತಿಳಿಸಲಾಗಿದೆ. ಯೋಜನಾ ವರದಿ ಅನುಮೋದನೆಯಾದ ಅನಂತರ ಮುಂದಿನ ವರ್ಷದ ಜನವರಿ ವೇಳೆಗೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.