ಆ್ಯಪ್‌ ಆಧಾರಿತ ಕ್ಯಾಬ್‌ಗಳಿಗೆ ಅಂತೂ ದರ ನಿಗದಿ


Team Udayavani, Mar 22, 2017, 12:52 PM IST

olaaaa.jpg

ಬೆಂಗಳೂರು: ಕೊನೆಗೂ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಸಾರಿಗೆ ಇಲಾಖೆ ಕನಿಷ್ಠ ದರ ನಿಗದಿಪಡಿಸಿದೆ. ಈ ಮೂಲಕ ಪೈಪೋಟಿ ಭರದಲ್ಲಿ ವಿಧಿಸುತ್ತಿದ್ದ ಬೇಕಾಬಿಟ್ಟಿ ಪ್ರಯಾಣ ದರಕ್ಕೆ ಕಡಿವಾಣ ಬೀಳಲಿದೆ. ಇದರ ಬೆನ್ನಲ್ಲೇ ಗ್ರಾಹಕರಿಗೆ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳು ದುಬಾರಿಯಾಗುವ ಸಾಧ್ಯತೆಗಳಿವೆ. 

ಓಲಾ-ಉಬರ್‌ ಮಾದರಿಯ ಆ್ಯಪ್‌ ಆಧಾರಿತ ಹವಾ ನಿಯಂತ್ರಿತ ಟ್ಯಾಕ್ಸಿಗಳಿಗೆ ಕಿ.ಮೀ.ಗೆ 12 ರೂ. ಹಾಗೂ ಹವಾನಿಯಂತ್ರಿತವಲ್ಲದ ಟ್ಯಾಕ್ಸಿಗಳಿಗೆ ಕಿ.ಮೀ.ಗೆ 10 ರೂ. ಕನಿಷ್ಠ ದರ ನಿಗದಿಪಡಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. 

ಪ್ರಸ್ತುತ ಆ್ಯಪ್‌ ಆಧಾರಿತ ಸೇವೆ ನೀಡುತ್ತಿರುವ ಟ್ಯಾಕ್ಸಿಗಳು ಕಿ.ಮೀ.ಗೆ 3ರಿಂದ 5 ರೂ. ವಿಧಿಸುತ್ತಿವೆ. ಇದರಿಂದ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ದರ ನಿಗದಿಪಡಿಸಲಾಗಿದೆ. ಅದರಂತೆ ಇನ್ಮುಂದೆ ಈ ಕನಿಷ್ಠ ದರಕ್ಕಿಂತ ಕಡಿಮೆ ದರದಲ್ಲಿ ಸೇವೆ ನೀಡುವಂತಿಲ್ಲ. ಹಾಗೊಂದು ವೇಳೆ ನಿಯಮ ಉಲ್ಲಂ ಸಿದರೆ, ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಇದರಲ್ಲಿ ಅವಕಾಶ ಇದೆ. 

ಆದರೆ, ಸಾರಿಗೆ ಸಂಸ್ಥೆ ಈ ನಿರ್ಧಾರ ಆ್ಯಪ್‌ ಆಧಾರಿತ ಟ್ಯಾಕ್ಸಿ ಬಳಸುವ ಗ್ರಾಹಕರಿಗೆ ಹೊರೆಯಾಗುವ ಸಂಭವವಿದೆ. ಪ್ರಸ್ತುತ 3ರಿಂದ 5 ರೂ.ಗೆ ಕಿ.ಮೀ. ಸೇವೆ ದೊರೆಯುತ್ತಿದೆ. ಇನ್ಮುಂದೆ ಅದು ಎರಡರಿಂದ ಮೂರುಪಟ್ಟು ಆಗಲಿದೆ. ಈ ಮಧ್ಯೆ 5 ಕಿ.ಮೀ. ನಂತರ ಓಲಾ-ಉಬರ್‌ ಟ್ಯಾಕ್ಸಿಗಳಲ್ಲಿ “ಸ್ಟೀಪ್‌ ಪ್ರೈಸ್‌’ ಎಂದು ಬರುತ್ತದೆ.

ಆಗ, ಈ ಕನಿಷ್ಠ ದರ ಇನ್ನೂ ದುಬಾರಿ ಆಗುತ್ತದೆ. ಪರಿಣಾಮ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಹಾಗೊಂದು ವೇಳೆ ದುಬಾರಿಯಾದರೆ, ಈ ಟ್ಯಾಕ್ಸಿ ಸೇವೆಗಳಿಂದ ಜನ ವಿಮುಖರಾಗುವ ಸಾಧ್ಯತೆ ಇದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಯಾವ ಲೆಕ್ಕಾಚಾರದ ಆಧಾರದಲ್ಲಿ ದರ ನಿಗದಿ? 
ಒಂದು ದಿನಕ್ಕೆ ವಾಹನದಟ್ಟಣೆ ಇರುವ ಬೆಂಗಳೂರಿನಂತಹ ನಗರದಲ್ಲಿ ಒಂದು ಟ್ಯಾಕ್ಸಿ ಸರಾಸರಿ 150 ಕಿ.ಮೀ. ಸಂಚರಿಸುತ್ತದೆ. ಟ್ಯಾಕ್ಸಿ ಬೆಲೆ ಸರಾಸರಿ 8 ಲಕ್ಷ ರೂ. ಆಗುತ್ತದೆ. ಈ ವಾಹನ 10 ವರ್ಷ ಕಾರ್ಯಾಚರಣೆ ಮಾಡಬಹುದು. ಚಾಲಕನ ವೇತನ ದಿನಕ್ಕೆ 500 ರೂ. ಎಂದು ಅಂದಾಜಿಸಲಾಗಿದೆ.

ಇದೆಲ್ಲವನ್ನೂ ಲೆಕ್ಕಹಾಕಿ ದರ ನಿಗದಿ ಸಮಿತಿ ಯು ಕಿ.ಮೀ.ಗೆ ನಾನ್‌-ಎಸಿ 10 ಮತ್ತು ಎಸಿಗೆ 12 ರೂ. ನಿಗದಿಪಡಿಸಿದೆ ಎಂದು ಸಾರಿಗೆ ಆಯುಕ್ತ ಎಂ.ಕೆ. ಅಯ್ಯಪ್ಪ ತಿಳಿಸಿದ್ದಾರೆ. ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದು ಅನುಮೋದನೆಗೊಂಡ ನಂತರ ಕನಿಷ್ಠ ದರ ಜಾರಿಗೆ ಬರಲಿದೆ ಎಂದೂ ಅವರು ಸ್ಪಷ್ಟಪಡಿಸಿದರು.  

ಇವರೆನಂತಾರೆ?
ನಗರದಲ್ಲಿ ಸಂಚರಿಸುವ ಸಾಮಾನ್ಯ ಟ್ಯಾಕ್ಸಿ ಸೇವೆಗಳಿಗೆ ಗರಿಷ್ಠ ದರ ಕಿ.ಮೀ.ಗೆ 14.5 ರೂ. (ನಾನ್‌ ಎಸಿ) ಮತ್ತು 19.5 ರೂ. (ಎಸಿ) ನಿಗದಿಪಡಿಸಲಾಗಿದೆ. ಅಂದರೆ, ಇದಕ್ಕಿಂತ ಕಡಿಮೆ ದರದಲ್ಲೂ ಸೇವೆಗೆ ಅವಕಾಶ ಇದೆ. ಆದರೆ, ಕನಿಷ್ಠ ದರದಲ್ಲಿ ಇದು ಸಾಧ್ಯವಿಲ್ಲ. ಆಗ ಸಹಜವಾಗಿ ಗ್ರಾಹಕರಿಗೆ ಹೊರೆಯಾಗಲಿದೆ.  
-ಟ್ಯಾಕ್ಸಿ ಚಾಲಕ, ಇಂದಿರಾನಗರ

ದರ ನಿಗದಿಪಡಿಸುವುದರಿಂದ ವಾಹನ ಚಾಲಕ ಅಥವಾ ಮಾಲೀಕನಿಗೆ ತನ್ನ ದಿನದ ಸಂಪಾದನೆಯ ಲೆಕ್ಕ ಸಿಗುತ್ತದೆ. ಅದರಿಂದ ಆತ ವಾಹನದ ಸಾಲದ ಕಂತು ಪಾವತಿ, ಕುಟುಂಬ ನಿರ್ವಹಣೆ, ಇಂಧನ ಸೇರಿದಂತೆ ಎಲ್ಲದರ ಲೆಕ್ಕವೂ ಗೊತ್ತಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಗರದಲ್ಲಿ ಸ್ಪರ್ಧಾತ್ಮಕ ದರದಿಂದ ಹೆಚ್ಚಾಗಿದ್ದ ವಾಹನಗಳ ದಟ್ಟಣೆ ತಗ್ಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ದರ ನಿಗದಿ ನಿರ್ಧಾರ ಸೂಕ್ತವಾಗಿದೆ.
-ರಾಧಾಕೃಷ್ಣ ಹೊಳ್ಳ, ಬೆಂಗಳೂರು ಪ್ರವಾಸಿ ವಾಹನಗಳ ಮಾಲಿಕರ ಸಂಘದ ಅಧ್ಯಕ್ಷ 

ಕನಿಷ್ಠ ದರದಿಂದ ಓಲಾ-ಉಬರ್‌ ಚಾಲಕರು ಅಥವಾ ಮಾಲೀಕರಿಗಾಗಲಿ ಲಾಭ ಆಗುವುದಿಲ್ಲ. ಯಾಕೆಂದರೆ, 10 ರೂ. ನಿಗದಿಪಡಿಸಿದರೂ ಇದರಲ್ಲಿ 3 ರೂ. ಆ್ಯಪ್‌ ಸೇವಾ ಕಂಪೆನಿಗಳಿಗೆ ಕಮೀಷನ್‌ ಕೊಡಬೇಕು. ಮತ್ತೆ ನಮಗೆ ಉಳಿಯುವುದು ಕಿ.ಮೀ.ಗೆ 7 ರೂ. ಇದರಿಂದ ಏನು ಪ್ರಯೋಜನ ಆದಂತಾಯ್ತು? ಆಟೋಗಳಿಗೇ ಕಿ.ಮೀ.ಗೆ 13.5 ರೂ. ಇದೆ. ಕೊನೆಪಕ್ಷ ಈ ದರವನ್ನಾದರೂ ನಿಗದಿಪಡಿಸಬೇಕಿತ್ತು 
-ತನ್ವೀರ್‌ ಪಾಷ, ಓಲಾ-ಉಬರ್‌ ಚಾಲಕರು ಮತ್ತು ಮಾಲಿಕರ ಸಂಘದ  ಅಧ್ಯಕ್ಷ

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

ಬೆಳಗಾವಿ:ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.