ಕನ್ನಡ ನವತಾರ ಕಲಾಮಂಡಳಿ ಮಲಾಡ್ 44ನೇ ವಾರ್ಷಿಕ ಮಹಾಪೂಜೆ
Team Udayavani, Mar 22, 2017, 2:25 PM IST
ಮುಂಬಯಿ: ಧಾರ್ಮಿಕತೆಯ ಜೊತೆಗೆ ಸಾಂಸ್ಕೃತಿಕ ಲೋಕವನ್ನು ಬೆಳಗಿಸುತ್ತಾ ಕಳೆದ 43 ವರ್ಷಗಳಿಂದ ಪರಿಸರದಲ್ಲಿ ಸಮಾಜ ಸೇವಾ ಸಂಸ್ಥೆಯಾಗಿ ಬೆಳೆದ ಈ ಸಂಘಟನೆಯು ಹಿಂದೂ ಜಾಗೃತ ಸಂಸ್ಥೆಯಾಗಿ ಬೆಳೆದಿದೆ. ಸುದೀರ್ಘ ಸಮಯದಿಂದಲೂ ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಬೆಳೆದ ಸಂಸ್ಥೆಯು ಕಲಾಕ್ಷೇತ್ರದ ಸಾರಸ್ವತ ಲೋಕವನ್ನು ಸೃಷ್ಟಿಸಿದೆ ಎಂದು ಮಹಾರಾಷ್ಟÅ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್ ಬಿ. ಶೆಟ್ಟಿ ನುಡಿದರು.
ಮಾ. 19 ರಂದು ಕನ್ನಡ ನವತಾರ ಕಲಾಮಂಡಳಿಯು ಮಲಾಡ್ ಪಶ್ಚಿಮದ ಸೋಮವಾರ ಬಜಾರ್‌ನ ಶ್ರೀ ಪಾಟ್ಲಾದೇವಿ ಮಂದಿರದ ಹೊರಾಂಗಣ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ 44 ನೇ ವಾರ್ಷಿಕ ಮಹಾಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರವು ಇಂತಹ ಕಲಾಸೇವೆಗೈಯುತ್ತಿರುವ ಸಂಸ್ಥೆಗೆ, ಕಲಾವಿದರಿಗೆ ವಿವಿಧ ಸರಕಾರಿ ಸವಲತ್ತು, ವಿಮಾ ಯೋಜನೆಯನ್ನು ಜಾರಿಗೆ ತಂದರೆ ಕಲೆಯನ್ನು ಧರ್ಮಯುತವಾಗಿ ಬೆಳೆಸಿದ ಪುಣ್ಯ ದೊರೆಯುತ್ತದೆ. ಸಮಾಜ ಸೇವೆಯಲ್ಲಿ ಇಳಿ ವಯಸ್ಸಿನಲ್ಲಿ ವೈವಿಧ್ಯಮವಾಗಿ ಸೇವೆ ಸಲ್ಲಿಸುತ್ತಿರುವ ಟಿ. ಕೆ. ಕೋಟ್ಯಾನ್‌ರಂಥವರ ಸಹಕಾರ ಈ ಸಂಸ್ಥೆಗೆ ಬಹುದೊಡ್ಡ ಗೌರವವಾಗಿದೆ ಎಂದರು.
ಗೌರವ ಅತಿಥಿಯಾಗಿ ಪಾಲ್ಗೊಂಡ ದಹಿಸರ್ ಕರ್ನಾಟಕ ಸಂಘದ ಅಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿ ಅವರು ಮಾತನಾಡಿ, ಕೇವಲ ಅಲ್ಪ ಸದಸ್ಯರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ ಇಂದು ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಸಂಸ್ಥೆಯ ಪ್ರೀತಿ, ಸೌಹಾರ್ಧ, ಸಂಯಮದ ಪ್ರತೀಕವಾಗಿದೆ. ಸಂಘಟನೆಯಿಂದ ಏನನ್ನು ಸಾಧಿಸಬಹುದು ಎಂಬುದನ್ನು ಈ ಸಂಸ್ಥೆ ತೋರಿಸಿದೆ. ಇಂದು ಹಲವಾರು ಸಾಧಕರ ಸಮ್ಮಾನವೂ ಅರ್ಥಪೂರ್ಣವಾಗಿ ನಡೆದಿದೆ ಎಂದು ನುಡಿದು ಶುಭಹಾರೈಸಿದರು.
ಮಹಾರಾಷ್ಟ್ರ ಒಕ್ಕಲಿಗ ಸಂಘದ ಅಧ್ಯಕ್ಷ ರಂಗಪ್ಪ ಸಿ. ಗೌಡ ಅವರು ಮಾತನಾಡಿ, ಭಾಟ್ಲಾದೇವಿ ಮಂದಿರವು ಪರಿಸರದ ಭಕ್ತರಿಗೆ ಕೊಲ್ಲೂರು ಕ್ಷೇತ್ರವಾಗಿದ್ದು, ಇಂದು ನಡೆದ ಸಕಲ ಪೂಜಾಧಿಗಳನ್ನು ಕಂಡಾಗ ಕೊಲ್ಲೂರು ಕ್ಷೇತ್ರಕ್ಕೆ ಹೋಗಿ ದರ್ಶನ ಪಡೆದ ಅನುಭವವಾಯಿತು. ಈ ಧಾರ್ಮಿಕ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿ ಹೊಂದಿ ಸ್ಥಳೀಯ ಭಕ್ತರಿಗೆ ಶ್ರೀದೇವಿಯ ಅಭಯ ಹಸ್ತು ದೊರೆಯಲಿ ಎಂದರು.
ಸಂಸ್ಥೆಯ ಸಂಸ್ಥಾಪಕ ಟಿ. ಕೆ. ದಿವಾಕರ ಶೆಟ್ಟಿಗಾರ್ ಅವರು ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಹಲವಾರು ವರ್ಷಗಳಿಂದ ಶ್ರಮಿಸುತ್ತಾ ಬಂದಿರುವ ಸ್ಥಳೀಯ ಭಕ್ತರು, ದಾನಿಗಳ ಸೇವೆ ಅಭಿನಂದನೀಯ. ಶ್ರದ್ಧಾ, ಭಕ್ತಿಗೆ ನನ್ನನ್ನು ಈ ಧಾರ್ಮಿಕ ಸಂಸ್ಥೆ ಸದಾ ಅಭಯಹಸ್ತವಾಗಿ ಸ್ಪಂದಿಸುತ್ತಾ ಬಂದಿದೆ. ಸಂಸ್ಥೆಗೆ ಸಹಕರಿಸಿದ ಎಲ್ಲರು ಹಣವಂತರಾಗಿದ್ದು, ಶ್ರೀದೇವಿಯೂ ಅವರೆಲ್ಲರಿಗೂ ಆರೋಗ್ಯ, ಐಶ್ವರ್ಯವನ್ನು ಕರುಣಿಸಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ಟಿ. ಕೆ. ಕೋಟ್ಯಾನ್ ಅವರು, 43 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ಸಂಘಟನೆಯು ಕಲೆಗೆ ಪ್ರೋತ್ಸಾಹ ನೀಡುವ ಸಂಸ್ಥೆಯಾಗಿ ಬೆಳೆದಿದ್ದು, ಶ್ರೀ ನಾರಾಯಣ ಗುರು ಯಕ್ಷಗಾನ ಮಂಡಳಿಯ ಪ್ರಥಮ ಪ್ರದರ್ಶನಕ್ಕೆ ಅವಕಾಶ ನೀಡಿದ ಸಂಸ್ಥೆಯಾಗಿದೆ ಎಂದರು.
ಸ್ಥಳೀಯ ನಗರ ಸೇವಕಿ ಯೋಗಿತಾ ಸುನೀಲ್ ಕೋಲಿ ಉಪಸ್ಥಿತರಿದ್ದು ಮಾತನಾಡಿ, ನಗರ ಪಾಲಿಕೆಗೆ ನಾನು ಆಯ್ಕೆಯಾಗುವಲ್ಲಿ ಪರಿಸರದ ತುಳು -ಕನ್ನಡಿಗರು ನೀಡಿದ ಸಹಾಯವನ್ನು ಮರೆಯುವಂತಿಲ್ಲ. ಸ್ಥಾಯಿ ಸಮಿತಿಯಲ್ಲಿ ಮಹಿಳಾ ಹಾಗೂ ಬಾಲವಿಕಾಸ ಸಮಿತಿಯ ಅಧ್ಯಕ್ಷೆಯಾಗಿದ್ದು, ಪರಿಸರದ ಎಲ್ಲರಿಗೂ ಸಹಾಯವನ್ನು ನೀಡಲು ಸಿದ್ಧಳಿದ್ದೇನೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಡಾ| ಸತೀಶ್ ಬಿ. ಶೆಟ್ಟಿ ಮತ್ತು ಅನಿತಾ ಶೆಟ್ಟಿ, ಮನ್ಮಥ ಆರ್. ಹೆಗ್ಡೆ ಮತ್ತು ಮೋಹಿನಿ ಹೆಗ್ಡೆ ದಂಪತಿ, ಇನ್ನಂಜೆ ಚಂದ್ರಹಾಸ ಗುರುಸ್ವಾಮಿ, ಉದ್ಯಮಿ ಕೃಷ್ಣ ಎ. ಪೂಜಾರಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಲಾಯಿತು.
ಅತಿಥಿಗಳನ್ನು ಸಂಸ್ಥಾಪಕ ದಿವಾಕರ ಶೆಟ್ಟಿಗಾರ್ ಅವರು ಗೌರವಿಸಿದರು. ವೇದಿಕೆಯಲ್ಲಿ ಬಿಜೆಪಿ ಕಾರ್ಯಕರ್ತ ರವೀಂದ್ರ ಭಟ್, ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎನ್. ಶೆಟ್ಟಿ ಉಪಸ್ಥಿತರಿದ್ದರು. ಪ್ರೇಮಾ ಕೋಟ್ಯಾನ್, ತನುಜಾ ಪೂಜಾರಿ ಹಾಗೂ ಸಮಿತಿಯ ಸದಸ್ಯರು ಸಹಕರಿಸಿದರು. ಪೂರ್ವಾಹ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಅಧ್ಯಕ್ಷ ಹರೀಶ್ಚಂದ್ರ ಹೆಗ್ಡೆ, ಉದ್ಯಮಿ ಜಯಂತ್ ಎಸ್. ಶೆಟ್ಟಿ ಅವರ ವತಿಯಿಂದ ಅನ್ನದಾನ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಿತು. ರಂಗನಟ ಗುಣಪಾಲ ಉಡುಪಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಕಲಾ ತರಂಗ ಮೀರಾರೋಡ್ ಕಲಾವಿದರ ಕುಕ್ಕೆಹಳ್ಳಿ ವಿಠಲ ಪ್ರಭು ಅವರ ನಿರ್ದೇಶನದಲ್ಲಿ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ ಬಯಲಾಟ ನಡೆಯಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ : ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.