30ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ


Team Udayavani, Mar 22, 2017, 4:37 PM IST

gul6.jpg

ಕಲಬುರಗಿ: ಲಾರಿ ಹಾಗೂ ಸರಕು ಸಾಗಣೆ ವಾಹನಗಳ ಮೇಲೆ ಇನ್ಸೂರೆನ್ಸ್‌ ಪ್ರಮಾಣ ಹೆಚ್ಚಳ, ಟೋಲ್‌ ಗಳಿಂದ ಆಗುತ್ತಿರುವ ಸುಲಿಗೆ ಸೇರಿದಂತೆ ಇತರ ನೀತಿ ವಿರೋಧಿಸಿ ಮಾ. 30ರ ಮಧ್ಯರಾತ್ರಿಯಿಂದ ದಕ್ಷಿಣ ಭಾರತದಾದ್ಯಂತ ಅನಿದಿಧಿìಷ್ಟ ಅವಧಿಧಿವರೆಗೆ ಲಾರಿ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದೆ ಎಂದು ದಕ್ಷಿಣ ಭಾರತ ಲಾರಿ ಮಾಲೀಕರ ಕಲ್ಯಾಣ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಾಧ್ಯಕ್ಷ ಜಿ.ಆರ್‌. ಷಣ್ಮುಗಪ್ಪ ತಿಳಿಸಿದರು. 

ಲಾರಿ ಹಾಗೂ ಸರಕು ಸಾಗಣೆ ವಾಹನುದಾರರಿಗೆ ಮಾರಕವಾಗಿರುವ ನೀತಿ ಕೈ ಬಿಡುವಂತೆ ಇಲ್ಲಿವರೆಗೆ ಹೋರಾಟ ಮಾಡಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇಡಿಕೆಗಳಿಗೆ ಸ್ಪಂದಿಸದೆ ಇದ್ದುದರಿಂದ ಅನಿಧಿರ್ದಿಷ್ಟ ಮುಷ್ಕರಕ್ಕೆ ಮುಂದಾಗಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಮುಷ್ಕರದಲ್ಲಿ ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ, ತಮಿಳ್ನಾಡು, ಆಂಧ್ರ, ತೆಲಂಗಾಣ, ಕೇರಳ ಸೇರಿದಂತೆ ಸುಮಾರು 16 ಲಕ್ಷ ಲಾರಿ ಮಾಲಿಕರು ಹಾಗೂ ಕರ್ನಾಟಕದಲ್ಲಿ ಸುಮಾರು 6.50 ಲಕ್ಷ ಖಾಸಗಿ ಬಸ್ಸು, ಲಾರಿ, ಕಾರು ಮುಂತಾದ ವಾಹನಗಳ ಪಾಲ್ಗೊಳ್ಳಲಿವೆ ಎಂದರು. ಲಾರಿಗಳ ಮೇಲಿನ ಇನ್ಸುರೆನ್ಸ್‌ನು ಒಮ್ಮೆಲೆ 50ರಿಂದ 70 ಪ್ರತಿಶತ ಹೆಚ್ಚಳ ಮಾಡಲಾಗಿದೆ. 

ಖಾಸಗಿ ಇನ್ಸೂರೆನ್ಸ್‌ ಕಂಪನಿಗಳು ಲೂಟಿಗೆ ಇಳಿದಿವೆ. ಇಷ್ಟೊಂದು ಹಣ ನೀಡಿದರೆ ಲಾರಿ ಮಾಲಿಕರು ಬದುಕುಳಿಯುವುದೇ ಅಸಾಧ್ಯವಾಗುತ್ತದೆ. ದೇಶದಲ್ಲಿ ಸುಮಾರು 363 ಟೋಲ್‌ಗ‌ಳಿವೆ. ಅದರಲ್ಲಿ ದಕ್ಷಿಣ ಭಾರತದಲ್ಲಿ 117 ಟೋಲ್‌ಗ‌ಳಿದ್ದು, ಕರ್ನಾಟಕದಲ್ಲಿ 39 ಟೋಲ್‌ಗ‌ಳಿವೆ. 32 ಟೋಲ್‌ಗ‌ಳಲ್ಲಿ ಈಗಾಗಲೇ ಕೇವಲ ನಾಲ್ಕು ವರ್ಷಗಳಲ್ಲಿ ಟೋಲ್‌ ನಿರೀಕ್ಷಿಸಿದಷ್ಟು ಸಂಗ್ರಹ ಆಗಿದೆ. 

ಟೋಲ್‌ ಸಂಗ್ರಹಕ್ಕೆ ತಾವು ವಿರೋಧಿಸುವುದಿಲ್ಲ. ಒಂದು ವರ್ಷಕ್ಕೆ ಟೋಲ್‌ನಿಂದ 12500 ಕೋಟಿ ರೂ. ಬರುತ್ತದೆ. ಆ ಹಣವನ್ನು ಮುಂಗಡವಾಗಿ ಲಾರಿ ಮಾಲಿಕರೇ ಭರಿಸುತ್ತಾರೆ. ಹೀಗಾಗಿ ಟೋಲ್‌ಗ‌ಳನ್ನು ಸ್ಥಾಪಿಸುವುದು ಬೇಡ. ಟೋಲ್‌ಗ‌ಳಿಂದ ಹಣ ಸುಲಿಗೆ ಹಾಗೂ ವ್ಯರ್ಥ ಕಾಲಹರಣ, ಹೆಚ್ಚಿನ ಪ್ರಮಾಣದ ತೈಲ ಹಾನಿ ಆಗಲಿದೆ. ಇದರಿಂದ ಸುಮಾರು 80,000 ಕೋಟಿ ರೂ.ಗಳಷ್ಟು ನಷ್ಟ ಆಗಲಿದೆ.

ಆದ್ದರಿಂದ ಒಮ್ಮೆಲೆ ಟೋಲ್‌ ಸಂಗ್ರಹವನ್ನು ವರ್ಷಕ್ಕೊಮ್ಮೆ ಸರ್ಕಾರವೇ ವಸೂಲಿ ಮಾಡಿದರೆ, ಅದನ್ನು ಲಾರಿ ಮಾಲಿಕರು ಭರಿಸಲು ಸಿದ್ಧರಿದ್ದಾರೆ. ಇದರಿಂದ ಸಾರ್ವಜನಿಕರಿಗೂ ಸಹ ಯಾವುದೇ ರೀತಿಯ ಹಣದ ಹೊರೆ ಬೀಳದು ಎಂದು ಹೇಳಿದರು. ಒಂದು ವೇಳೆ ವರ್ಷಕ್ಕೊಮ್ಮೆ ಮುಂಗಡ ಟೋಲ್‌ ಹಣ ಪಡೆಯದೇ ಇದ್ದರೆ ಪ್ರತಿ ಲೀಟರ್‌ ಮೇಲೆ 2 ರೂ.ಗಳ ಸುಂಕ ಪಡೆಯಬೇಕು. ಇದರಿಂದ ಯಾವುದೇ ಸಮಸ್ಯೆ ಆಗದು.

ಸುಗಮ ಸಂಚಾರಕ್ಕೂ ಅವಕಾಶ ಕಲ್ಪಿಸಿದಂತೆ ಆಗುತ್ತದೆ. ಇನ್ನುಳಿದಂತೆ 10 ವರ್ಷಗಳಿಗೂ ಹಳೆಯದಾದ ವಾಹನಗಳನ್ನು ಸಂಚಾರಕ್ಕೆ ಅಯೋಗ್ಯವೆಂದು ಪರಿಗಣಿಸುವುದು ಸರಿಯಲ್ಲ. ಏನಾದರೂ ವಾಹನದಲ್ಲಿ ತೊಂದರೆ ಇದ್ದರೆ ಅದನ್ನು ನಿವಾರಿಸಲು ಲಾರಿ ಮಾಲಿಕರು ಸಿದ್ಧರಿದ್ದಾರೆ.  ಗ್ರಾಮಾಂತರ ಪ್ರದೇಶಗಳಲ್ಲಿ ಈ ವಾಹನಗಳಿಂದ ಸಾಕಷ್ಟು ಉಪಯೋಗ ಇದೆ.

ಆದ್ದರಿಂದ ಇಂತಹ ಮಾರಕ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾದ ಮೊಹಮ್ಮದ ಮೈನೂದ್ದೀನ್‌, ಗೋಪಾಲಕೃಷ್ಣ ರಘೋಜಿ, ಪದಾಧಿಕಾರಿಗಳಾದ ಬಾಬುರೆಡ್ಡಿ, ಪ್ರಕಾಶ ಖೇಮಜಿ ಶಹಾಬಜಾರ, ಅಸ್ಲಂ ಶಾಹ, ಕಲಶೆಟ್ಟಿ, ಲಾಲ್‌ ಪಟೇಲ್‌, ದಾಮೋದರ್‌ ಮುಂತಾದವರು ಹಾಜರಿದ್ದರು.  

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.