ಉಗಾಂಡ: ಬೆಳ್ತಂಗಡಿ ವ್ಯಕ್ತಿ ಸಂಕಷ್ಟದಲ್ಲಿ ಪತಿಯ ರಕ್ಷಣೆಗೆ ಮೊರೆ
Team Udayavani, Mar 23, 2017, 1:08 PM IST
ಮಂಗಳೂರು: “ತೀರಾ ಅಸಹಾಯಕ ಪರಿಸ್ಥಿತಿಯಲ್ಲಿ ಉಗಾಂಡದಲ್ಲಿದ್ದ ನಾನು ಹಾಗೂ ಮೂವರು ಮಕ್ಕಳು ಪತಿಯ ತವರೂರಾದ ದಕ್ಷಿಣ ಕನ್ನಡದ ಬೆಳ್ತಂಗಡಿಗೆ ಬಂದಿದ್ದೇವೆ. ನನ್ನ ಪತಿಯನ್ನೂ ಸುರಕ್ಷಿತವಾಗಿ ಕರೆತರಲು ದಯವಿಟ್ಟು ಸಹಕರಿಸಿ’ ಎಂದು ಉಗಾಂಡದಲ್ಲಿ ಸಂಕಷ್ಟದಲ್ಲಿರುವ ಬೆಳ್ತಂಗಡಿಯ ಪಣಕಜೆ ನಿವಾಸಿ ಅಬ್ದುಲ್ ರಶೀದ್ ಅವರ ಪತ್ನಿ ಮಿಹಿಂ ಇಬ್ರಾಹೀಂ ದಾಹಿರ್ ಮನವಿ ಮಾಡಿದ್ದಾರೆ.
ಎಂ. ಫ್ರೆಂಡ್ಸ್ ಸದಸ್ಯರ ಸಹಕಾರದೊಂದಿಗೆ ಮಕ್ಕಳ ಜತೆ ಮಿಹಿಂ ಮಾ. 20ರಂದು ದ.ಆಫ್ರಿಕಾದ ಉಗಾಂಡದಿಂದ ವಿಮಾನದಲ್ಲಿ ಮುಂಬಯಿಗೆ ಆಗಮಿಸಿ, ಅಲ್ಲಿಂದ ರೈಲಲ್ಲಿ ಮಂಗಳವಾರ ಬೆಳಗ್ಗೆ ಮಂಗಳೂರು ತಲುಪಿದ್ದು, ಬಳಿಕ ಎಂ-ಫ್ರೆಂಡ್ಸ್ ಆಶ್ರಯದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದರೋಡೆಗೊಳಗಾದವನೇ ಆರೋಪಿ !
ರಶೀದ್ ಶಾಫಿಯವರ ತಂದೆ ಜಿ. ಮುಹಮ್ಮದ್ ಶಾಫಿ ಮಾತನಾಡಿ, “ನನ್ನ ಮಗ ಸುರಕ್ಷಿತವಾಗಿ ಹಿಂದಿರುಗಿ ಬರಲು ಕೇಂದ್ರ ಸರಕಾರ ಹಾಗೂ ಹೃದಯವಂತರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
“ನನ್ನ ಮಗ 8 ವರ್ಷಗಳಿಂದ ಉಗಾಂಡಧಿದಲ್ಲಿ ಗುಜರಾತ್ ಮೂಲದ ಕಂಪೆನಿಯಲ್ಲಿ ಉದ್ಯೋಗಧಿದಲ್ಲಿದ್ದಾನೆ.
ಅಲ್ಲಿ ಸೋಮಾಲಿಯಾದ ಪ್ರಜೆಧಿಯಾದ ಮಿಹಿಂಧಿರನ್ನು ವಿವಾಹವಾಗಿ ಅವರಿಗೆ 5, 3 ಹಾಗೂ 1 ವರ್ಷದ ಮಕ್ಕಳಿದ್ದಾರೆ. ಉಗಾಂಡಾದ ಕಂಪಾಲಾ ಸಮೀಪದ ನಮೂವೋಂಗೋದಲ್ಲಿ ವಾಸಿಸುತ್ತಿದ್ದ ರಶೀದ್ 10 ತಿಂಗಳ ಹಿಂದೆ ಕೆಲಸದಲ್ಲಿದ್ದ ಕಂಪೆನಿ ಕಚೇರಿಗೆ ಬೀಗ ಹಾಕಿ ಕಂಪೆನಿಯ ಹಣದೊಂದಿಗೆ (12 ಲಕ್ಷ ರೂ.) ಮನೆಗೆ ಹಿಂದಿರುಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿತ್ತು. ಈ ಬಗ್ಗೆ ಆತ ಉಗಾಂಡದಲ್ಲಿ ದೂರನ್ನೂ ನೀಡಿದ್ದಾನೆ. ಆದರೆ ಕಂಪೆನಿಯವರು ಮಗನ ವಿರುದ್ಧವೇ ದೂರು ನೀಡಿದ್ದರು. ಅದರಿಂದಾಗಿ ಆತ 3 ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಯಿತು’ ಎಂದರು.
ಮಗನ ಸಮಸ್ಯೆ ಬಗ್ಗೆ ನಾನು ಎಂ. ಫ್ರೆಂಡ್ಸ್‌ನ ಸದಸ್ಯ ಹಾಗೂ ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರೂ ಆಗಿರುವ ಶಾಹುಲ್ ಹಮೀದ್ ಅವರಿಗೆ ತಿಳಿಸಿ ಸಹಾಯ ಕೋರಿದ್ದೆ. ಅವರೆಲ್ಲರ ಸಹಕಾರದಿಂದ ನನ್ನ ಮಗ ಜೈಲಿನಿಂದ ಬಿಡುಗಡೆ ಹೊಂದಿದ್ದು, ಇದರಲ್ಲಿ ಸೊಸೆ ಮತ್ತು ಮಕ್ಕಳು ಇಂದು ಮಂಗಳೂರಿಗೆ ಬರುವಂತಾಗಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಶೀದ್ ಶಾಫಿಯವರ ಮಕ್ಕಳು ಮತ್ತು ಎಂ. ಫೆಂಡ್ಸ್‌ನ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಕಾರ್ಯದರ್ಶಿ ರಶೀದ್ ವಿಟ್ಲ, ಕೋಶಾಧಿಕಾರಿ ಸುಜಾಜ್ ಮುಹಮ್ಮದ್, ಟ್ರಸ್ಟಿಗಳಾದ ಕೆ.ಕೆ. ಶಾಹುಲ್ ಹಮೀದ್, ಅನ್ಸಾರ್ ಬೆಳ್ಳಾರೆ, ಆಶಿಕ್ ಕುಕ್ಕಾಜೆ, ಆರಿಫ್ ಬೆಳಾÉರೆ ಮುಂತಾದವರು ಉಪಸ್ಥಿತರಿದ್ದರು.
“ಸಹೃದಯಿಗಳೇ ಸಹಕರಿಸಿ’
ಎಂ. ಫ್ರೆಂಡ್ಸ್‌ನ ಕಾರ್ಯದರ್ಶಿ ರಶೀದ್ ವಿಟ್ಲ ಮಾತನಾಡಿ, ಈ ಪ್ರಕರಣದಿಂದಾಗಿ ರಶೀದ್ ಶಾಫಿ ಅವರು ಈಗಾಗಲೇ ಮಾನಸಿಕವಾಗಿ ನೊಂದಿದ್ದಾರೆ. ಉಗಾಂಡದಿಂದ ರಶೀದ್ ಅವರ ಪತ್ನಿ ಹಾಗೂ ಮಕ್ಕಳನ್ನು ಭಾರತಕ್ಕೆ ಕರೆತರಲು ಎಂ-ಫ್ರೆಂಡ್ಸ್‌ಗೆ ಅನಿವಾಸಿ ಭಾರತೀಯರು ಬೇರೆ ಬೇರೆ ರೀತಿಯಲ್ಲಿ ಸಹಕಾರ ಮಾಡಿದ್ದಾರೆ. ರಶೀದ್ ಶಾಫಿ ಜೈಲಿನಿಂದ ಬಿಡುಗಡೆಗೊಂಡಿದ್ದರೂ ಅವರು ಕೆಲಸ ಮಾಡುವಂತಿಲ್ಲ. ಬದಲಾಗಿ ಅವರು ನ್ಯಾಯಾಲಯಕ್ಕೆ ಸುಮಾರು 12 ಲಕ್ಷ ರೂ. ಕಟ್ಟಬೇಕಿದೆ. ಆ ಹಣ ಪಾವತಿಯಾದರೆ ಮಾತ್ರ ಅವರ ಪಾಸ್‌ಧಿಪೋರ್ಟ್ ದೊರಕಿ, ಭಾರತಕ್ಕೆ ಮರಳಲು ಸಾಧ್ಯವಾಗಲಿದೆ. ಬಡತನದಲ್ಲಿರುವ ಆ ಕುಟುಂಬಕ್ಕೆ ಇಷ್ಟು ಹಣ ಹೊಂದಿಸುವುದು ಕಷ್ಟವಾಗಿದೆ. ಇದಕ್ಕಾಗಿ ಎಂ. ಫ್ರೆಂಡ್ಸ್ ಮೂಲಕ “ಆಪಧಿರೇಶನ್ ಉಗಾಂಡ’ ಹೆಸರಿನಲ್ಲಿ ಆಂದೋಧಿಲನ ಆರಂಭಿಸಲಾಗುತ್ತಿದೆ. ಎ. 5ರಂದು ಉಗಾಂಡದಲ್ಲಿ ಮತ್ತೆ ರಶೀದ್ ಪ್ರಕರಣ ವಿಚಾರಣೆಯಾಗಲಿದ್ದು, ಆ ಸಂದರ್ಭ ಕೋರ್ಟ್‌ಗೆ ಹಣ ಪಾವತಿಸಬೇಕಾಗಿದೆ. ಇದಕ್ಕೆ ಕೇಂದ್ರ ಸರಕಾರದ ನೆರವನ್ನು ಎದುರು ನೋಡಲಾಗುತ್ತಿದೆ. ಜತೆಗೆ ಸಹೃದಯಿಗಳೂ ಸಹಕರಿಸಬೇಕು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.