ಸಂಪ್ ಸ್ವಚ್ಛಗೊಳಿಸಲು ಹೋದವರು ವಿದ್ಯುತ್ಗೆ ಬಲಿ
Team Udayavani, Mar 24, 2017, 12:22 PM IST
ಬೆಂಗಳೂರು: ಹೋಟೆಲ್ನ ನೀರಿನ ಸಂಪ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯವಸ್ಥಾಪಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ದೊಮ್ಮಲೂರಿನ ಶ್ರೀನಿಧಿ ಸಾಗರ್ ಹೋಟೆಲ್ನಲ್ಲಿ ಗುರುವಾರ ಸಂಜೆ ನಡೆದಿದೆ. ಹೋಟೆಲ್ ವ್ಯವಸ್ಥಾಪಕ ಕುಂದಾಪುರ ಮೂಲದ ವಿಶ್ವನಾಥ್ (39) ಮತ್ತು ಸಿಬ್ಬಂದಿ ಭದ್ರಾವತಿಯ ಗುರು(26) ಮೃತರು.
ಕುಂದಾಪುರ ಮೂಲದ ಉದ್ಯಮಿ ಶ್ರೀನಿಧಿ ಸಾಗರ್ ಹೋಟೆಲ್ನ ಮಾಲೀಕರಾಗಿದ್ದು, ಇವರ ಸಂಬಂಧಿ ವಿಶ್ವನಾಥ್ ಹೋಟೆಲ್ನ ವ್ಯವಸ್ಥಾಪಕರಾಗಿದ್ದಾರೆ. ಭದ್ರಾವತಿಯ ಗುರು ವಾರದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ದುರಸ್ಥಿಗೊಂಡಿದ್ದ ಸಂಪ್ ಸ್ವಚ್ಛಗೊಳಿಸಲು ಬಲ್ಪ್ ಹಿಡಿದು ಗುರು ಇಳಿದಿದ್ದಾನೆ.
ಈ ವೇಳೆ ಬಲ್ಪ್ ಒಡೆದು ನೀರಿಗೆ ವೈಯರ್ ಬಿದಿದ್ದೆ. ಅಲ್ಲದೇ ಸಂಪ್ನಲ್ಲಿದ್ದ ಮೋಟರ್ ಕೂಡ ಚಾಲನೆಯ ಲ್ಲಿತ್ತು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಗುರು ಪ್ರಜ್ಞೆ ಕಳೆದುಕೊಂಡಿದ್ದಾನೆ. ಕೂಡಲೇ ಕೂಗಿಕೊಂಡು ಆತ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಮ್ಯಾನೇಜರ್ ವಿಶ್ವನಾಥ್ ಸಂಪ್ಗೆ ಇಳಿದು ಗುರು ರಕ್ಷಿಸಲು ಯತ್ನಿಸಿದ್ದು, ಈತನಿಗೂ ಸಹ ವಿದ್ಯುತ್ ಪ್ರವಹಿಸಿದೆ.
ಕೂಡಲೇ ಮೋಟರ್ ನಿಲ್ಲಿಸಿ ಪ್ರಜ್ಞೆ ಕಳೆದುಕೊಂಡಿದ್ದ ಇಬ್ಬರನ್ನು ಮೇಲೆತ್ತಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ಹಲಸೂರು ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.