ಡೊಂಬಿವಲಿ ಶ್ರೀ ಚಿದಂಬರೇಶ್ವರ ಸೇವಾ ಮಂಡಳಿಯಿಂದ ಗುರುವಂದನೆ
Team Udayavani, Mar 24, 2017, 4:09 PM IST
ಡೊಂಬಿವಲಿ: ಕಾದ ಕಬ್ಬಿಣದ ಮೇಲೆ ಬಿದ್ದ ಮಳೆ ನೀರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆದರೆ ಸ್ವಾತಿ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದಾಗ ಅದು ಮುತ್ತಾಗುತ್ತದೆ. ಅದರಂತೆ ನಾವು ಸಜ್ಜನರ ಸಹವಾಸದಿಂದ ಸ್ವಾತಿ ಮುತ್ತಾಗಿ ಜೀವನದಲ್ಲಿ ಉನ್ನತಿ ಸಾಧಿಸಿ ಸಾರ್ಥಕ್ಯದ ಜೀವನ ಸಾಗಿಸಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಮಹಾ ಸ್ವಾಮಿಗಳು ನುಡಿದರು.
ಡೊಂಬಿವಲಿ ಪಶ್ಚಿಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರೀ ಚಿದಂಬರೇಶ್ವರ ಸೇವಾ ಮಂಡಳಿ ಆಯೋಜಿಸಿದ್ದ ಗುರುವಂದನೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಸಾಧು-ಸಂತರು, ಮಹಾತ್ಮರ ಮಧ್ಯೆ ಮುತ್ತಿನಂತೆ ಕಾಣುತ್ತಾರೆಯೋ ಹೊರತು ಮುತ್ತಾಗಲು ಸಾಧ್ಯವಿಲ್ಲ. ಆದ್ದರಿಂದ ಅಂತವರ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಒಂದು ಮುತ್ತಿಗೆ ಸಮಾನವಾಗಲು ಸಾಧ್ಯ. ಅಲ್ಲದೆ ಮುತ್ತಿನಂತಹ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ನಮ್ಮಲ್ಲಿಯೂ ಗುರುಗಳ ಉದ್ಧೇಶವಾಗಿರಬೇಕು. ಜಾತಿ, ಧರ್ಮಗಳ ಭೇದವನ್ನು ಎಣಿಸದೆ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಶ್ರೀ ರಾಘವೇಂದ್ರ ಸ್ವಾಮಿಗಳು ಅಪರೂಪದ ಗುರುಗಳಾಗಿದ್ದಾರೆ. ಮುಂಬಯಿ ಕನ್ನಡಿಗರ ಕನ್ನಡಾಭಿಮಾನ, ವಿಶಾಲ ಹೃದಯದ ಭಕ್ತ ಸಮುದಾಯವನ್ನು ಕಂಡು ಹೃದಯ ತುಂಬಿ ಬಂದಿದೆ ಎಂದರು.
ಸಮಾರಂಭದಲ್ಲಿ ಶ್ರೀ ಚಿದಂಬರೇಶ್ವರ ಸೇವಾ ಮಂಡಳದ ಅಧ್ಯಕ್ಷ ವಿ. ಐ. ಮುಳಗುಂದ ಅವರು ವೇದಘೋಷಗಳ ಮಧ್ಯೆ ಸ್ವಾಮಿಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನು ಗೌರವಿಸಿ ಗುರುವಂದನೆ ಸಲ್ಲಿಸಿದರು. ವಿದ್ವಾಂಸರಾದ ಪವಮಾನಚಾರ್ಯ ಪಂಚಮುಖೀ, ರಾಘವೇಂದ್ರಾಚಾರ್ಯ ಅಕ್ಕಿ ಮೊದಲಾದವರು ಉಪನ್ಯಾಸ ನೀಡಿದರು. ಶ್ರೀ ಮೂಲ ರಾಮದೇವರ ಪೂಜೆಯನ್ನು ಶ್ರೀಗಳು ನೆರವೇರಿಸಿ ಪ್ರಸಾದ ವಿತರಿಸಿದರು.
ಸಂಸ್ಥೆಯ ಅಧ್ಯಕ್ಷ ವಿ. ಐ. ಮುಳಗುಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್. ಡಿ. ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಂಜೆ ಡೊಂಬಿವಲಿ ನಗರಕ್ಕೆ ಆಗಮಿಸಿದ ಶ್ರೀ ಸುಬುದೇಂದ್ರ ತೀರ್ಥರನ್ನು ಕೋಪರ್‌ಕ್ರಾಸ್ ರಸ್ತೆಯಿಂದ ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಸಭಾಗೃಹದಲ್ಲಿ ಬರಮಾಡಿ ಕೊಳ್ಳಲಾಯಿತು.
ವೇದಘೋಷ, ನೃತ್ಯ, ಭಜನೆ, ವಿವಿಧ ವಾದ್ಯಮೇಳಗಳು, ಜಯಕಾರದೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಯಿತು.
ಶ್ರೀಗಳು ಡೊಂಬಿವಲಿ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದರು.
ಚಿತ್ರ-ವರದಿ : ಗುರುರಾಜ ಪೋತನೀಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.