ಹಸಿರು ಮರಗಳಿಗೇ ಕೊಡಲಿ ಪೆಟ್ಟು
Team Udayavani, Mar 24, 2017, 4:16 PM IST
ಚಿತ್ತಾಪುರ: ಗಿಡಗಂಟಿ ಕೊರಳೊಳಗೆ ಕುಳಿತು ಹಕ್ಕಿಗಳು ಹಾಡುತ್ತಿಲ್ಲ. ಮರದಲ್ಲಿ ಗೂಡು ಕಟ್ಟಲು ಅವಕಾಶ ದೊರೆಯುತ್ತಿಲ್ಲ. ಕೃಷಿ ಕೆಲಸ ಮುಗಿಸಿದ ರೈತರಿಗೆ ಮರದ ನೆರಳಲ್ಲಿ ಬುತ್ತಿ ಬಿಚ್ಚಿ ಊಟ ಮಾಡುವ ಸೌಭಾಗ್ಯವೂ ಸಿಗುತ್ತಿಲ್ಲ. ಹಸಿರಿನಿಂದ ಕಂಗೊಳಿಸುತ್ತಿರುವ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿರುವುದು ಇದಕ್ಕೆಲ್ಲ ಕಾರಣ.
ಪಟ್ಟಣದ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ದಿಗ್ಗಾಂವ, ಕಮರವಾಡಿ, ಆಲೂರ, ಬಮ್ಮನಳ್ಳಿ, ಅಳ್ಳೋಳ್ಳಿ, ಅಲ್ಲೂರ (ಕೆ), ಅಲ್ಲೂರ (ಬಿ), ಸಾತನೂರ, ಹೊಸೂರ, ರಾವೂರ, ಇಟಗಾ, ಮೋಗಲಾ, ಮೂಡಬೂಳ, ದಂಡೋತಿ, ಭಾಗೋಡಿ, ಮರಗೋಳ ಹಾಗೂ ಇತರ ಗ್ರಾಮೀಣ ಪ್ರದೇಶಗಳಲ್ಲಿ ಮರಗಳ ಗುತ್ತಿಗೆದಾರರು ಪ್ರತಿನಿತ್ಯ ನೂರಾರು ಮರಗಳನ್ನು ಕಡಿದು ಕಾರ್ಖಾನೆಗಳಿಗೆ ಸಾಗಿಸುವ ಮೂಲಕ ಭಾರಿ ವ್ಯವಹಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಪೀಠೊಪಕರಣಗಳಿಗೆ ಬಳಕೆ: ತಾಲೂಕಿನಲ್ಲಿ ಕಳೆದ ವರ್ಷ ಬರ ಆವರಿಸಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಹಣದ ಹಾದಿ ತಿಳಿಯದೆ ಚಿಂತೆ ಆವರಿಸಿದೆ. ಈ ಅಸಹಾಯಕತೆ ಬಳಸಿಕೊಂಡ ಕೆಲ ಮರಗಳ ಗುತ್ತಿಗೆದಾರರು ರೈತರಿಗೆ ಆಮಿಷವೊಡ್ಡಿ ಜಮೀನಿನಲ್ಲಿ ಹುಲುಸಾಗಿ ಬೆಳೆದ ಮರಗಳನ್ನು ಗುತ್ತಿಗೆ ಪಡೆದು ನಿತ್ಯ ನೆಲಕ್ಕುರುಳಿಸಿ, ಉತ್ತಮ ಆಕಾರದಲ್ಲಿ ಕತ್ತರಿಸಿ ಲೋಡ್ ಮಾಡಿಕೊಂಡು ಕಾರ್ಖಾನೆಗಳಿಗೆ ಸಾಗಾಟ ಮಾಡುತ್ತಿದ್ದಾರೆ.
ಮರಗಳ ದಿಮ್ಮಿಗಳಿಂದ ವಿವಿಧ ವಿನ್ಯಾಸಗಳ ಪೀಠೊಪಕರಣ ತಯಾರಿಸಲಾಗುತ್ತಿದೆ. ಬೇಡಿಕೆ ಹೆಚ್ಚಾಗಿದ್ದರಿಂದ ರೈತರ ಜಮೀನುಗಳಲ್ಲಿ ಬೆಳೆದ ಹೆಮ್ಮರಗಳನ್ನು ಯಂತ್ರಗಳಿಂದ ಕತ್ತರಿಸಿ ಸಾಗಿಸುವ ಕಾರ್ಯ ಭರದಿಂದ ಸಾಗುತ್ತಿದೆ.
10 ಸಾವಿರ ಲಾಭ: ಮರದ ಗುತ್ತಿಗೆದಾರರು ಹಳ್ಳಿಗಳಿಗೆ ತೆರಳಿ, ರೈತರಿಗೆ ಪ್ರತಿ ಗಿಡಕ್ಕೆ 2ರಿಂದ 3 ಸಾವಿರ ರೂ. ನೀಡಿ, ಮರ ಕಡಿದು, ತುಂಡುಗಳನ್ನು ಕಾರ್ಖಾನೆಗಳಿಗೆ ಸಾಗಿಸುತ್ತಿದ್ದಾರೆ. ದೊಡ್ಡ ಮರವಿದ್ದರೆ ಕನಿಷ್ಠ 20 ದಿಮ್ಮಿಗಳು ಸಿಗುತ್ತವೆ. ರೈತರಿಗೆ, ಕೂಲಿಗಳಿಗೆ, ಸಾರಿಗೆ ವೆಚ್ಚ, ಡೀಸೆಲ್ ಖರ್ಚು ತೆಗೆದು ಪ್ರತಿ ಮರದಲ್ಲೂ 10 ಸಾವಿರ ರೂ. ಲಾಭ ಸಿಗುತ್ತಿದೆ.
ನಿತ್ಯ ಮೂರರಿಂದ ನಾಲ್ಕು ಮರ ಕಡಿಯುತ್ತೇವೆ ಎಂದು ಕಾರ್ಮಿಕರೊಬ್ಬರು ವಿವರಿಸಿದ್ದಾರೆ. ರೈತರು ಅನಿವಾರ್ಯವಾಗಿ ಮರಗಳನ್ನು ಮಾರಾಟ ಮಾಡುವ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಗ್ರಾಪಂಗಳಲ್ಲಿ ಸಮರ್ಪಕ ಉದ್ಯೋಗ ಖಾತ್ರಿ ಯೋಜನೆಗಳಡಿ ಸರಿಯಾದ ರೀತಿಯಲ್ಲಿ ಕೂಲಿ ಕೆಲಸ ನೀಡುತ್ತಿಲ್ಲ.
ಸಕಾಲಕ್ಕೆ ಮಳೆಯಾಗದೆ ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗಳು ಕೈಕೊಟ್ಟಿದ್ದು ತೊಗರಿ, ಜೋಳ, ಹತ್ತಿ, ಉದ್ದು, ಕಡಲೆ ಮುಂತಾದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಜಮೀನಿನಲ್ಲಿದ್ದ ಮರಗಳನ್ನು ಗುತ್ತಿಗೆದಾರರಿಗೆ ಒಪ್ಪಿಸಿ, ಐದಾರು ಸಾವಿರಕ್ಕೆ ತೃಪ್ತಿಪಟ್ಟುಕೊಂಡು, ಬರವನ್ನು ಮತ್ತಷ್ಟು ಭೀಕರಗೊಳಿಸುತ್ತಿದ್ದಾರೆ.
ಪಟ್ಟಣದಲ್ಲಿ ವಿವಿಧ ಕೈಗಾರಿಕಾ ಪ್ರದೇಶಗಳು ತಲೆ ಎತ್ತಿದ್ದು, ಗರಿಷ್ಠ ಪ್ರಮಾಣದಲ್ಲಿ ಮರಗಳನ್ನು ಬೆಳೆಸಬೇಕಾದ ಅಗತ್ಯವಿದೆ. ಆದರೆ ಹಾಡಹಗಲೇ ಪರಿಸರ ನಾಶವಾಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಸಂಬಂಧವಿಲ್ಲದಂತೆ ಕಣ್ಮುಚ್ಚಿ ಕುಳಿತಿದೆ.ಎರಡು ಕೋಟಿ ರೂ. ಅನುದಾನದಲ್ಲಿ ಗಿಡ ಮರಗಳನ್ನು ನೆಡುವ ಮೂಲಕ ಹಸಿರು ತಾಲೂಕನ್ನಾಗಿಸುವ ಗುರಿಯನ್ನು ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಇಟ್ಟುಕೊಂಡಿದ್ದಾರೆ.
ಆದರೆ ಅರಣ್ಯ ಇಲಾಖೆ ಅಧಿಧಿಕಾರಿಗಳ ನಿರ್ಲಕ್ಷ್ಯ ಗಿಡ ಕಡಿಯುವವರಿಗೆ ಮತ್ತಷ್ಟು ಕುಮ್ಮಕ್ಕು ನೀಡಿದೆ. ಅಧಿಧಿಕಾರಿಗಳು ಎಚ್ಚೆತ್ತು ಗಿಡ ಕಡಿಯುವವರ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
* ಮಶಾಕ್ ಮುಲ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.