ಅಮೆರಿಕದಲ್ಲಿ ಭಾರತೀಯ ತಾಯಿ, ಮಗ ನಿಗೂಢ ಸಾವು
Team Udayavani, Mar 24, 2017, 11:13 PM IST
ವಿಜಯವಾಡ: ಅಮೆರಿಕದಲ್ಲಿ ಭಾರತೀಯರ ಹತ್ಯೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ನ್ಯೂಜೆರ್ಸಿಯಲ್ಲಿ ತಾಯಿ ಮತ್ತು 7 ವರ್ಷದ ಮಗ ಮನೆಯಲ್ಲಿ ನಿಗೂಢ ಸಾವನ್ನಪ್ಪಿದ ಘಟನೆ ನಡೆದಿದೆ. ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಎನ್. ಶಶಿಕಲಾ (40), ಅವರ ಮಗ ಅನಿಶ್ ಸಾಯಿ ಮೃತರು. ಆಂಧ್ರಪ್ರದೇಶ ಮೂಲದ ಎನ್. ಹನುಮಂತರಾವ್ ಕಚೇರಿ ಕೆಲಸ ಮುಗಿಸಿ ಸಂಜೆ ವಾಪಸಾದಾಗ, ಪತ್ನಿ ಹಾಗೂ ಮಗನ ಮೃತದೇಹ ಕಂಡಿದೆ. ವಿಜಯವಾಡದಲ್ಲಿನ ಶಶಿಕಲಾ ತಾಯಿ, “ಇದು ದ್ವೇಷಪೂರಿತ ಕೊಲೆ. ತನಿಖೆಯಾಗಲಿ’ ಎಂದು ಅಮೆರಿಕ ಸರಕಾರವನ್ನು ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಟೆಕ್ಕಿ ಶ್ರೀನಿವಾಸ್ ಕುಚಿಭೋಟ್ಲಾ, ವಂಶಿರೆಡ್ಡಿ ಮಮಿದಾಲ ಅವರನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿತ್ತು.
ಮೋದಿ ಮಧ್ಯಪ್ರವೇಶಕ್ಕೆ ಆಗ್ರಹ: ಅಮೆರಿಕದಲ್ಲಿ ತಾಯಿ ಮತ್ತು ಮಗನ ನಿಗೂಢ ಸಾವಿನ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಶುಕ್ರವಾರ ತೀವ್ರ ಚರ್ಚೆ ನಡೆಯಿತು. ಈ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್
EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ
J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ
Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!
Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.