ಪಟ್ಟೆತಲೆ ಹೆಬ್ಬಾತು


Team Udayavani, Mar 25, 2017, 11:32 AM IST

97.jpg

ಚಳಿಗಾಲ ಕಳೆಯಲು ಭಾರತಕ್ಕೆ ವಲಸೆ ಬರುವಗಾರYನಿ, ಟಪ್‌ಟೆಡ್‌, ಶೆಲ್‌ಡಕ್‌, ಜಿಯಾನ, ಕೊಮನ್‌ ಪಕಾಡೋì, ಪಿನ್‌ ಟೇಲ್‌ ಬಾತುಗಳಲ್ಲಿ ಈ ಪಟ್ಟೆತಲೆ ಬಾತು ಪ್ರಧಾನವಾಗಿದೆ.BAR-HEADED GOOSE (Anserindicus)RM  Duck +   ಇದು ಅನಟಿಡಿಯಾ ಕುಟುಂಬದ ಹೆಬ್ಬಾತು. ಇದು 71-76 ಸೆಂ.ಮೀ. ದೊಡ್ಡದಿದೆ.  1.87- ದಿಂದ 3.2 ಕೇಜಿ  ಭಾರ ಇರುತ್ತದೆ.

  ಇದರ ನೆತ್ತಿಯಲ್ಲಿ  ಕಪ್ಪು ಸಮಾನಾಂತರವಾಗಿಇರುವ ಪಟ್ಟಿ ಇದನ್ನು ಗುರುತಿಸಲು ಸಹಾಯವಾಗಿದೆ. ಕುತ್ತಿಗೆಯ ಹಿಂದೆ ಮತ್ತು ಮುಂದೆಕಪ್ಪು ಬಣ್ಣದಿಂದ ಕೂಡಿದೆ. ಚುಂಚು ಹಳದಿ ಇದ್ದು ಹಸಿರು ಚಿಗುರನ್ನೂ, ಸಸ್ಯದ ಗಡ್ಡೆಗಳನ್ನು ತಿನ್ನಲು ಅನುಕೂಲವಾಗುವಂತೆ ಇದರ ಕೊಕ್ಕಿನ ತುದಿ ಕೊಕ್ಕೆಯಂತೆ ಚೂಪಗಿದ್ದು ಬಾಗಿದೆ. ರೆಕ್ಕೆ ಮತ್ತು ಹೊಟ್ಟೆ ಭಾಗ ಬೂದುಬಣ್ಣ ಇದೆ. ಚಿಕ್ಕ ವರ್ತುಲಾಕಾರದ ಬಿಳಿ ಗೆರೆ ಹೊಟ್ಟೆ ಮತ್ತುರೆಕ್ಕೆಯಲ್ಲಿದೆ.  ಹೊಟ್ಟೆ ಮಸಕು ಬೂದು ಬಣ್ಣ ಇದ್ದರೂ ಹೊಟ್ಟೆ ಭಾಗದ ಗರಿ ಬೂದು ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತದೆ. ಚಿಕ್ಕ ಕಾಲು ಹಳದಿ ಇದ್ದು, ಕೋಳಿಗಳಂತೆ ಹಿಂದೆ ಚಿಕ್ಕ ಬೆರಳಿದೆ.  ಅದರ ತುದಿ ಉಗುರುಗಳಿವೆ. ಕಾಲಲ್ಲಿ ಜಾಲಪಾದ ಇದೆ. ಇದರ ಸಹಾಯದಿಂದ ಕೆರೆಗಳಲ್ಲಿ, ಸರೋವರಗಳಲ್ಲಿ ತೇಲಿ ಈಜುತ್ತದೆ.  ಉತ್ತರದ ಟಿಬೇಟ್‌, ಕಜರಿಸ್ಥಾನ, ಮಂಗೋಲಿಯಾ ರಷ್ಯಾ ಮಾರ್ಗವಾಗಿ ಬಂದು ಮಾಯದ ಎತ್ತರದ ಪರ್ವತ ಶ್ರೇಣಿದಾಟಿ ಭಾರತಕ್ಕೆ ಚಳಿವಾಲದಲ್ಲಿ ವಲಸೆ ಬರುತ್ತವೆ. ಇದು ಸುಮಾರು 2,500,000 ಕೀಮೀ ನಷ್ಟು ದೂರ ವಲಸೆ ಬರುತ್ತದೆ.  ಎವರೆಸ್ಟ್‌ ಪರ್ವತ ಶ್ರೇಣಿಯಷ್ಟು ಎತ್ತರದಲ್ಲಿ ಹಾರುತ್ತದೆ ಎಂಬುದು ಉಪಗ್ರಹಗಳ ಅವಲೋಕನದಿಂದ ದೃಢವಾಗಿದೆ.

   ಹೀಗೆ ವಲಸೆ ಬಂದ ಈ ಹೆಬ್ಟಾತುಗಳು ಕರ್ನಾಟಕ, ಮೈನಾವರ, ಆಂಧ್ರ, ತಮಿಳುನಾಡುಗಳಲ್ಲಿ ಜೀತಾವಧಿಯ ಅರ್ಧ ಸಮಯ ಕಳೆಯುತ್ತದೆ. ಬಾತುಕೋಳಿ ಮತ್ತು ವಿವಿಧ ಕುಟುಂಬಕ್ಕೆ ಸೇರಿದ ನೀರು ಕೋಳಿಗಳಿಗಿಂತ ಪಟ್ಟೆತಲೆ ಹೆಬ್ಟಾತು ಭಿನ್ನ ಸ್ವಭಾವ ಹೊಂದಿದೆ. ಹೆಚ್ಚು ಸಮಯ ನೀರಿನಲ್ಲಿ ಕಳೆಯದೇ ಭೂವಾಸಿಗಳಾಗಿರುವುದು ವಿಶೇಷ. ಇದು ಚಳಿಗಾಲದ ಬೆಳೆಗಳಾದ ಭತ್ತ ,ಗೋಧಿ, ಕಡಲೆ, ಜೋಳ, ಚಿಗುರೆಲೆ ಮತು ¤ದವಸ ಧಾನ್ಯಗಳನ್ನು ತಿಂದು ತನ್ನದೇಹದ ಆರೋಗ್ಯ ಹೆಚ್ಚಿಸಿ ಕೊಂಡಿವೆ. ಚಳಿ ತಡೆಯಲು ಬೇಕಾದ ದೇಹದ ಉಷ್ಣತೆ ಇದರಿಂದ ಅವುಗಳಿಗೆ ಸಿಗುತ್ತದೆ. ಇದರ ಆಹಾರ ಕ್ರಮ, ಅದರಿಂದ ಪಕ್ಷಿಗಳ ಆರೋಗ್ಯ ಹೇಗೆ ?

ಅತಿ ಚಳಿ ಮತ್ತು ಎತ್ತರದಲ್ಲೂ ಹಾರಲು ಹೇಗೆ ಅನುಕೂಲಕರವಾಗಿದೆ? ಮತ್ತು ಇದರಿಂದಾಗಿ ಬಹುದೂರ ವಲಸೆ ಸಂದರ್ಭದಲ್ಲಿ ನಿರಂತರ ಹಾರುವ ಸಾಮರ್ಥ್ಯ ಇವುಗಳಿಗೆ ಬಂದಿದೆಯೇ?  ಕಡಿಮೆ ಆಮ್ಲಜನಕ ಬಳಸಿಕೊಂಡು ಬಹು ಎತ್ತರದಲ್ಲೂ ಹಾರುವ ಗುಣ ಹೇಗೆ ಸಿದ್ಧಿಸಿದೆ? ಈ ಎಲ್ಲಾ ಸೂಕ್ಷ್ಮವಿಚಾರಗಳ ಅಧ್ಯಯನ ನಡೆಯಬೇಕಿದೆ. ಜಲ ಜೀವಿಗಳ ವಿಕಸನ ಕ್ರಮದಲ್ಲಿ ಕೆಲವು ನೀರಿನಲ್ಲಿಯೇ ಇದ್ದು ಅಲ್ಲೆ ತಮ್ಮ ಜೀವಿತಾವಧಿ ಕಳೆಯುತ್ತವೆ. 

  ಆದರೆ ಈ ಪಟ್ಟೆತಲೆ ಹೆಬ್ಟಾತು ವಿಕಸನ ಕ್ರಮದದಲ್ಲಿ ಅವುಗಳಿಗಿಂದ ಒಂದು ಹೆಜ್ಜೆ ಮುಂದಿವೆ. ನೀರಿನಲ್ಲಿ ಮತ್ತು ಅದರ ಹತ್ತಿರದ ಹಸಿರು ಹೊಲಗಳಲ್ಲಿ ಹೆಚ್ಚಿನ ಆಹಾರ ಪಡೆಯುತ್ತದೆ. ಬಹು ದೂರದಿಂದ ಚಳಿಗಾಲದಲ್ಲಿ ಬಂದ ಇವು ನೀರಿನ ಹೊಂಡ,  ಹಳ್ಳ, ಕೆರೆ, ಸರೋವರದ ತೀರದಲ್ಲಿರುವ ಹಸಿರು ಬಯಲು ಪ್ರದೇಶ ಇವುಗಳಲ್ಲಿ  ಇರುನೆಲೆ.  ಇಂತಹ ಬಯಲುಗಳಲ್ಲಿ ಮೇಯುವುದನ್ನು ಮುಗಿಸಿದ ಮೇಲೆ ವಿಶ್ರಾಂತಿ ಪಡಯುವಾಗ ಜಲಕ್ರೀಡೆ , ನೀರಾಟ ಮತ್ತು ನೀರಿನಲ್ಲಿ ಈಜುತ್ತಾ ಮುಳುಕು ಹಾಕಿ, ತಳದ ಕೆಸರಿನಲ್ಲಿರುವ ಜಲಸಸ್ಯಗಳ ಚಿಗುರು, ಗಡ್ಡೆ, ಬೀಜಗಳನ್ನು ತಿನ್ನುತ್ತದೆ.  ಹಸಿರು ಹುಲ್ಲು ಮತ್ತು ಬೀಜಗಳನ್ನು ಮೇಯಲು ಅನುಕೂಲವಾಗುವಂತೆ ಇದರ ಕೊಕ್ಕಿನ ರಚನೆ ಇದೆ. ಊರಿನ ಹತ್ತಿರ ಇರುವ ಲಕ್ಷಿ$¾àಶ್ವರದ ಮಾಗಡಿ ಕೆರೆಗೆ ಗುಂಪು, ಗುಂಪಾಗಿ ಹಾರಿ ಬರುತ್ತವೆ. ಇದು ಹಾರುವಾಗ  ಆಕಾರದಲ್ಲಿ ಮತ್ತು ವಾರೆಯಾಗಿ ಹಾರುತ್ತದೆ. 

 ಮಾಗಡಿ ಕೆರೆಯ ಸುತ್ತಮುತ್ತಲ ಪ್ರದೇವನ್ನು ಈ ಪಟ್ಟೆತಲೆ ಹೆಬ್ಟಾತುಗಳಿಗೆ ಮೀಸಲಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದು ಇಂತಹ ವಲಸೆ ಬಾತುಗಳ ಉಳಿವಿಗೆ ಅನುಕೂಲವಾಗಿದೆ. ಉತ್ತರ ಭಾರತದ ಭರತ್‌ಪುರ, ಚಂಡೀಗಢ ರಾಷ್ಟ್ರೀಯ ಉದ್ಯಾನಗಳಲ್ಲೂ ಇವು ಇದೆ. ಇವು ಭಿನ್ನವಾಗಿ ವ್ಹಾಗ್‌-ವ್ಹಾಗ್‌ ಎಂದು ಅನುನಾಸಿಕ ಸ್ವರದಲ್ಲಿ ಕೂಗುತ್ತವೆ.  ಅಪಾಯದ ಸೂಚನೆ, ವಲಸೆಯಲ್ಲಿ ಬರುವ ಅವಗಢ, ಮರಿಮಾಡುವ ಸಮಯದಲ್ಲಿ ಸಂಗಾತಿ ಜೊತೆ ನಡೆಸುವ ಪ್ರಣಯ ಸಂದರ್ಭದಲ್ಲಿ ಈ ರೀತಿ ಕೂಗುತ್ತದೆ. 
ಪಿ.ವಿ.ಭಟ್‌.ಮೂರೂರು 

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.