ತ್ತೈಮಾಸಿಕ ಸಭೆ: 7,340 ಕೋ. ರೂ. ಸಾಲ ವಿತರಿಸುವ ಗುರಿ; ಜಿಲ್ಲಾಧಿಕಾರಿ


Team Udayavani, Mar 25, 2017, 12:20 PM IST

240317uk7.jpg

ಉಡುಪಿ: ಮುಂದಿನ ಆರ್ಥಿಕ ವರ್ಷದಲ್ಲಿ (2017ಧಿ18) 7,340.02 ಕೋ. ರೂ. ಸಾಲ ವಿತರಣಾ ಗುರಿ. ಇದರಲ್ಲಿ ಆದ್ಯತಾ ರಂಗಕ್ಕೆ 6,520.1 ಕೋ. ರೂ., ಕೃಷಿ ರಂಗಕ್ಕೆ 3,024 ಕೋ. ರೂ. ಗುರಿ ಹೊಂದಿದ ಜಿಲ್ಲಾ ಸಾಲ ಯೋಜನೆಯನ್ನು ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನ ಸಮಿತಿಯ ಮೂರನೇ ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಬಿಡುಗಡೆಗೊಳಿಸಿದರು.

2016ರ ಡಿಸೆಂಬರ್‌ ಅಂತ್ಯಕ್ಕೆ 20,366 ಕೋ. ರೂ. ಠೇವಣಿ, 9,750 ಕೋ. ರೂ. ಮುಂಗಡ ಹೊಂದಿವೆ. ವಾರ್ಷಿಕ ಠೇವಣಿಯಲ್ಲಿ ಶೇ. 17.88 ಹಾಗೂ ಮುಂಗಡದಲ್ಲಿ ಶೇ. 12.03 ಅಭಿವೃದ್ಧಿ ಹೊಂದಿದೆ. ಸಾಲ ಠೇವಣಿ ಅನುಪಾತ ಡಿಸೆಂಬರ್‌ ಅಂತ್ಯಕ್ಕೆ ಶೇ. 47.9 ಆಗಿದ್ದು ಸೆಪ್ಟಂಬರ್‌ಗೆ ಹೋಲಿಸಿದಾಗ ಶೇ. 4.2 ಇಳಿಕೆ ಕಂಡಿದೆ. ನೋಟು ಅಪಮೌಲ್ಯಗೊಳಿಸಿದ ಸಮಯದಲ್ಲಿ ಹೆಚ್ಚಿನ ಠೇವಣಿ ಹರಿದುಬಂದಿದ್ದು, ಇದಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಸಿಂಡಿಕೇಟ್‌ ಬ್ಯಾಂಕ್‌ ವಿಭಾಗೀಯ ಕ್ಷೇತ್ರೀಯ ಪ್ರಬಂಧಕ ಎಸ್‌.ಎಸ್‌. ಹೆಗಡೆ ಅಭಿಪ್ರಾಯಪಟ್ಟರು.

ಡಿಸೆಂಬರ್‌ ಅಂತ್ಯದ ವರೆಗೆ ಬ್ಯಾಂಕ್‌ಗಳು 4,855.17 ಕೋ. ರೂ. ಸಾಲ ನೀಡಿ, ವಾರ್ಷಿಕ ಗುರಿ 7,014.70 ಕೋಟಿಯ ಶೇ. 26.20ರಷ್ಟು ಪ್ರಗತಿ ಸಾಧಿಸಿದೆ ಎಂದರು.ಆದ್ಯತಾ ರಂಗಕ್ಕೆ ಆದ್ಯತೆ ನಬಾರ್ಡ್‌ ಸಹಾಯಕ ಮಹಾ ಪ್ರಂಬಂಧಕ ಎಸ್‌. ರಮೇಶ್‌ ಜಿಲ್ಲಾ ಮುಂಗಡ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದರು. ಸಾಲ ಮತ್ತು ಠೇವಣಿ ಅನುಪಾತ ಕೂಡ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

10 ರೂ. ನಾಣ್ಯ ನಕಲಿ ಇಲ್ಲ 
ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಬಂಧಕಿ ಸುಜಾತಾ ಶ್ರೀಕಂಠಯ್ಯ, ಇತ್ತೀಚೆಗೆ ಹೊರಡಿಸಿದ ವಿವಿಧ ಸುತ್ತೋಲೆಗಳ ಮಾಹಿತಿ ನೀಡಿದರು. ಭಾರತ ಸರಕಾರ ಹಾಗೂ ಆರ್‌ಬಿಐ ಮಹತ್ವಾಕಾಂಕ್ಷಿ ಯೋಜನೆಯಾದ ವಿತ್ತೀಯ ಸೇರ್ಪಡೆ ಕಾರ್ಯಕ್ರಮದಂತೆ ಎಲ್ಲ ಹಳ್ಳಿಗಳಿಗೂ ಬ್ಯಾಂಕ್‌ನ ಸೇವೆ ಸಿಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳು ಡಿಜಿಟಲ್‌ ಬ್ಯಾಂಕ್‌ನ ಕುರಿತು ಗ್ರಾಹಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದರು.

ವಿವಿಧ ಗ್ರಾ.ಪಂ. ಕಚೇರಿಗಳಲ್ಲಿ ಸ್ಥಳೀಯ ಬ್ಯಾಂಕ್‌ಗಳ ಸಹಕಾರದೊಂದಿಗೆ ಆಧಾರ್‌ ನೋಂದಣಿ, ಬ್ಯಾಂಕ್‌ ಖಾತೆಗೆ ಜೋಡಣೆ ನಡೆಸಲಾಗುತ್ತಿದೆ. ಪಿಂಚಣಿ ಖಾತೆಗಳಿಗೂ ಆಧಾರ್‌ ಸಂಖ್ಯೆ ಜೋಡಣೆ ಮಾಡುವ ಕಾರ್ಯ ಶೀಘ್ರಗತಿಯಲ್ಲಿ ಆಗಬೇಕೆಂದು ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಸಲಹೆ ನೀಡಿದರು.
ಮುಂದಿನ ವರ್ಷ ವಿವಿಧ ಇಲಾಖೆಗಳು ಆದಷ್ಟು ಬೇಗ ವಿವಿಧ ಸರಕಾರಿ ಯೋಜನೆಗಳ ಎಲ್ಲ ಅರ್ಜಿ ಬ್ಯಾಂಕ್‌ಗೆ ಕಳುಹಿಸಬೇಕು. ಇದರಿಂದ ಮಾರ್ಚ್‌ ಕೊನೆ ಒಳಗೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಸಭೆ ನಿರ್ವಹಿಸಿದ ಅಗ್ರಣಿ ಜಿಲ್ಲಾ ಮುಖ್ಯ ಪ್ರಬಂಧಕ ಫ್ರಾನ್ಸಿಸ್‌ ಬೋರ್ಜಿಯಾ ತಿಳಿಸಿದರು.
 

ಟಾಪ್ ನ್ಯೂಸ್

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.