ದರೋಡೆ : ಡಿಸಿಐಬಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ
Team Udayavani, Mar 25, 2017, 12:34 PM IST
ಉಡುಪಿ: ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣವನ್ನು ಕ್ಷಿಪ್ರ ಗತಿಯಲ್ಲಿ ಭೇದಿಸುವಲ್ಲಿ ಉಡುಪಿ ಪೊಲೀಸರ ಸಹಕಾರದೊಂದಿಗೆ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗವು (ಡಿಸಿಐಬಿ) ಸಫಲವಾಗಿರುವ ಪರಿಣಾಮ ಹಿರಿಯ ಅಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ. ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಎಸ್‌ಪಿ ಕೆ.ಟಿ. ಬಾಲಕೃಷ್ಣ ಅವರು ವಿವರಿಸಿದ ಬಳಿಕ ಎಲ್ಲ 7 ಮಂದಿ ಆರೋಪಿಗಳನ್ನು ಮಾಧ್ಯಮದ ಎದುರು ಕರೆತರಲಾಯಿತು.
ಹೆಚ್ಚುವರಿ ಎಸ್‌ಪಿ ಎನ್.ವಿಷ್ಣುವರ್ಧನ್ ಇದ್ದರು.6 ಮಂದಿಗೆ ಮಾತ್ರ ಮಾಸ್ಕ್ ಯಾಕೆ?: ಸದ್ಯ ಬಂಧನವಾಗಿರುವ 7 ಮಂದಿ ಪೈಕಿ ಪ್ರಮುಖ ಆರೋಪಿ ಹರಿಖಂಡಿಗೆ ಉಗ್ರಾಣಿಬೆಟ್ಟು ನಿವಾಸಿ ಪೆರ್ಡೂರು ಗಾಯತ್ರಿ ಜುವೆಲರಿಯ ಹರಿಕೃಷ್ಣ ಭಟ್ (25) ಮುಖವನ್ನು ಹೊರತುಪಡಿಸಿ ಉಳಿದೆಲ್ಲ ಆರೋಪಿಗಳ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು. ಅದು ಯಾಕೆಂದರೆ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಮೊದಲಾದ ಗಂಭೀರ ಪ್ರಕರಣಗಳು ನಡೆದಾಗ ದೂರುದಾರ/ಸಂತ್ರಸ್ತರು ಪರಿಚಯವಿಲ್ಲದ ವ್ಯಕ್ತಿಗಳನ್ನು ಕೃತ್ಯದಲ್ಲಿ ನೋಡಿದಾಗ, ಆರೋಪಿಗಳನ್ನು ಖಚಿತಪಡಿಸಿಕೊಳ್ಳಲು ಪೊಲೀಸರು, ತಹಶೀಲ್ದಾರರ ಸಮ್ಮುಖದಲ್ಲಿ “ಗುರುತು ಪತ್ತೆ ಪರೇಡ್’ (ಟೆಸ್ಟ್ ಐಡೆಂಟಿಫಿಕೇಶನ್) ಎನ್ನುವ ಪ್ರಕ್ರಿಯೆಯನ್ನು ನಡೆಸುತ್ತಾರೆ. ಇದೊಂದು ಸಾಕ್ಷ್ಯವಾಗಿ ನ್ಯಾಯಾಲಯದಲ್ಲಿ ಪರಿಗಣನೆಗೆ ಬರುತ್ತದೆ. ದೂರುದಾರರಿಗೆ ಆರೋಪಿಯ ಗುರುತು ಮೊದಲೇ ಇದ್ದರೆ ಮಾಸ್ಕ್ ಹಾಕಲಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.