ಮಾಂಸದಂಗಡಿಗೆ ಸಹಾಯಧನ ಬೇಡ
Team Udayavani, Mar 25, 2017, 12:47 PM IST
ಹರಪನಹಳ್ಳಿ: ಬಿಜೆಟ್‌ನಲ್ಲಿ ಮಾಂಸ ಮಾರಾಟಗಾರರಿಗೆ 1.20 ಲಕ್ಷ ರೂ. ಸಹಾಯಧನ ಘೋಷಿಸಿರುವುದು ಸರಿಯಲ್ಲ. ಬದಲಾಗಿ ರೈತರಿಗೆ ಮೇವು ಖರೀದಿಸಲು ಮತ್ತು ಸಂಗ್ರಹಿಸಲು ನೀಡಬೇಕು ಎಂದು ಬಾಲೇಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ತಾಲೂಕಿನ ನಿಚ್ಚವನಹಳ್ಳಿ ಗ್ರಾಮದಲ್ಲಿ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಪಟ್ಟಾಧಿಧಿಕಾರದ ಸಂಭ್ರಮಾಚರಣೆ ಮತ್ತು ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು. ಮುಖ್ಯಮಂತ್ರಿಗಳು ದನ ಕಡಿಯುವವರಿಗಿಂತ ಕಾಯುವವರಿಗೆ ಸಹಾಯಧನ ನೀಡಬೇಕು. ಸರ್ಕಾರ ಕತ್ತರಿಸುವ ಕೆಲಸ ಬಿಡಿಸಿ ಕಾಯುವ ಕಾಯಕ ಮಾಡಿಸಬೇಕು.
ಶಾಸಕರು ಇದನ್ನು ಸಿಎಂ ಅವರ ಗಮನಕ್ಕೆ ತಂದು ಮಾಂಸದಂಗಡಿಗಳ ಸಹಾಯಧನ ನೀಡುವುದನ್ನು ಹಿಂಪಡೆದರೆ ಗೌರವಿಸುತ್ತೇವೆ, ಇಲ್ಲವಾದಲ್ಲಿ ವಿರೋಧಿಸುತ್ತೇವೆ ಎಂದರು. ಸ್ವಾಮೀಜಿಗಳು ಗ್ರಾಮಗಳ ತಾಪ ಕಡಿಮೆ ಮಾಡಬೇಕೆಯೇ ಹೊರತು ಸಂಪತ್ತು ಲೂಟಿ ಮಾಡಬಾರದು. ಭಕ್ತರ ನೋವು ಕಡಿಮೆ ಮಾಡಿ ಅಂಧಕಾರ, ಅಜ್ಞಾನವನ್ನು ಕಳೆಯಬೇಕು.
ಸ್ವಾಮೀಜಿಗಳು ಎಲ್ಲಾರನ್ನು ಸಮಾನಾಗಿ ಕಂಡು ಜಾತಿ ಬೋಧನೆ ಮಾಡದೇ ನೀತಿ ಬೋಧಿಧಿಸಬೇಕು. ಕಾವಿ ಎನ್ನುವುದು ಸಮಾನತೆಯ ಸಂಕೇತವಾಗಬೇಕು. ಹಿಂದೆ ಮಠಗಳು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಅನಿವಾರ್ಯತೆ ಇತ್ತು. ಹಾಗಾಗಿ ವೀರಶೈವ ಮಠಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಿವೆ.
ಸರ್ಕಾರವೇ ಎಲ್ಲ ತರಹದ ಶಿಕ್ಷಣವನ್ನು ನೀಡುತ್ತಿರುವುದರಿಂದ ಇದರ ಅವಶ್ಯತೆ ಮಠಗಳಿಗಿಲ್ಲ. ಆದರೆ ಎಲ್ಲಿಯೇ ಸಾಗಿದರೂ ಮರಗಳ ಕೆಳಗೆ ಹೋಗುವಂತಹ ಕೆಲಸವನ್ನು ಮಠಗಳು ಮಾಡುವುದು ಅಗತ್ಯ ಎಂದರು. ಗಿಡ ನೆಡುವ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಖಾದಿ ಅಭಿವೃದ್ಧಿ ಮಾಡಬೇಕು. ಖಾಕಿ ಅಭಿವೃದ್ಧಿ ಕಾರ್ಯಗಳನ್ನು ಕಾಯುವ ಕಾಯಕ ಮಾಡಬೇಕು.
ಕಾವಿಧಾರಿಗಳು ನಾಡಿನಲ್ಲಿ ಐಕ್ಯತೆ ಉಂಟು ಮಾಡುವುದು, ಎಲ್ಲರೂ ಸಮಾನರು ಎನ್ನುವುದನ್ನು ಸಾರಬೇಕು. ಈ ಮೂವರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಜಗತ್ತು ಮೂರಾಬಟ್ಟೆಯಾಗಲಿದೆ. ಮಾಜಿ ಉಪಮುಖ್ಯಮಂತ್ರಿ ದಿ| ಎಂ.ಪಿ.ಪ್ರಕಾಶ್ ಅವರ ವಟುಗಳ ಪಾಠ ಶಾಲೆ ತೆರೆಯುವ ಕನಸು ನನಸು ಮಾಡಲು ತಾವು ಜೋಳಿಗೆ ಹಾಕಲು ಸಿದ್ಧ ಎಂದು ತಿಳಿಸಿದರು.
ಶಾಸಕ ಎಂ.ಪಿ.ರವೀಂದ್ರ ಮಾತನಾಡಿ, ವೀರಶೈವ ಮಠಗಳು ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹ ನೀಡಿವೆ. ಹಾಲಸ್ವಾಮೀಜಿಗಳ ಮಠ ಎಲ್ಲಾ ಭಕ್ತ ಸಮೂಹ ಹೊಂದಿದೆ. ನಮ್ಮ ತಂದೆ ಎಂ.ಪಿ.ಪ್ರಕಾಶ್ ಅವರು ವಟುಗಳ ಪಾಠ ಶಾಲೆ ತೆರೆಯುವ ಕನಸು ಹೊಂದಿದ್ದರು. ಅದು ನನಸಾಗಲಿಲ್ಲ, ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಅದನ್ನು ಸಕಾರಗೊಳಿಸಲಾಗುವುದು ಎಂದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ರಾಮಘಟ್ಟ ರೇವಣಸಿದ್ದೇಶ್ವರ ಶ್ರೀ, ನಿಚ್ಚವ್ವನಹಳ್ಳಿ ಹಾಲಸ್ವಾಮೀಜಿ, ಜಿಪಂ ಉಪಾಧ್ಯಕ್ಷ ಡಿ.ಸಿದ್ದಪ್ಪ, ಸದಸ್ಯ ಎಚ್.ಬಿ. ಪರುಶುರಾಮಪ್ಪ, ತಾಪಂ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಟಿ.ಎಚ್.ಎಂ. ವಿರೂಪಾಕ್ಷಯ್ಯ, ಕೋಡಿಹಳ್ಳಿ ಭೀಮಪ್ಪ, ಎಂ.ವಿ.ಅಂಜಿನಪ್ಪ, ಎ.ಎಂ.ವಿಶ್ವನಾಥ್, ಅಬ್ದುಲ್ ರಹೀಮಾನಸಾಬ್, ವೆಂಕಟೇಶ್, ಸಿ.ಜಾವೀದ್, ವಸಂತಪ್ಪ, ಮಂಜುನಾಥ್, ಶಶಿಧರಸ್ವಾಮಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.