ಕಾಟೇಜ್ ಉಗಾದಿ ಮೇಳ
Team Udayavani, Mar 25, 2017, 3:43 PM IST
ಭಾರತದ ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಭಾರತ ಸರ್ಕಾರದ ಜವಳಿ ಇಲಾಖೆಯ ಸ್ವಾಮ್ಯದ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೊàರೇಷನ್ ಆಫ್ ಇಂಡಿಯಾ (ಸಿಸಿಐಸಿಐ) ಕರಕುಶಲ ವಸ್ತುಗಳು ಮತ್ತು ಕೈಮಗ್ಗದ ಜವಳಿ ಮಾರಾಟ ಮತ್ತು ಪ್ರದರ್ಶನವನ್ನು ಆಯೋಜಿಸಿದೆ. ಪ್ರದರ್ಶನವನ್ನು ನಟಿ ಮತ್ತು ರೂಪದರ್ಶಿ ಮೇಘಾ ಅಪ್ಪಯ್ಯ ಅವರು ಉದ್ಘಾಟಿಸಿದ್ದರು.
ಮೇಳದಲ್ಲಿ ಆಭರಣಗಳು, ವರ್ಣಚಿತ್ರಗಳು, ಲೋಹದ ಕಲಾ ವಸ್ತುಗಳು, ಮರದ ಕೆತ್ತನೆ, ಕರಕುಶಲ ವಸ್ತುಗಳು, ಅಮೃತಶಿಲೆ ಕಲಾವಸ್ತುಗಳು, ಪುರುಷರ ಮತ್ತು ಮಹಿಳೆಯರ ಉಡುಪುಗಳು, ಕೋಲ್ಕತಾದ ಎಸ್. ಕೆ. ಸೆಟ್, ಬೆಡ್‌ಸ್ಪ್ರೆಡ್‌ಗಳು, ಕಾಶ್ಮೀರದ ಶಾಲ್/ಜಾಕೆಟ್‌ಗಳು, ಲಕ್ನೋ ಶಿಕನ್ ಕಸೂತಿ ಕುರ್ತಾ/ಸೀರೆಗಳು, ಪಂಜಾಬ್‌ನ ಫುಲ್ಕಾರಿ, ಕಾನ್‌ಪುರ್‌ನ ಟೇಬಲ್ ಲಿನೆನ್ ಮತ್ತು ಬೆಡ್‌ಸ್ಪ್ರೆಡ್ ಮುಂತಾದವು ಪ್ರದರ್ಶನಕ್ಕಿವೆ.
ಎಲ್ಲಿ?: ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್, ನಂ. 3, ಬಿ. ಆರ್. ಅಂಬೇಡ್ಕರ್ ವೀಧಿ, ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡ ಎದುರು
ಯಾವಾಗ?: ಮಾರ್ಚ್ 20ರಿಂದ 29
ಸಂಪರ್ಕ: 080-25584515
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.